ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿ ನಟ ದರ್ಶನ್ಗೆ ಮಂಧ್ಯಂತರ ಜಾಮೀನು ಸಿಕ್ಕಿರು ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ (Zameer ahemad khan) ಪ್ರತಿಕ್ರಿಯಿಸಿದ್ದಾರೆ. ದರ್ಶನ್ ನನಗೆ ಅಪ್ತರಾಗಿದ್ದರು, ಬೇಲ್ ಸಿಕ್ಕಿರೋದು ಖುಷಿಯಾಗಿದೆ ಎಂದಿದ್ದಾರೆ.
ನನ್ನ ಸ್ನೇಹಿತ ದರ್ಶನ್ ಗೆ (darshan) ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಬೇಲ್ ಆಗಿದೆ. ನನಗೆ ಆತ್ಮೀಯರಾಗಿರೋ ಕಾರಣಕ್ಕಾಗಿ ಖುಷಿಯಾಗಿದೆ. ನಾನು ದರ್ಶನ್ ಈ ಘಟನೆ ಆಗೋ ಮುಂಚೆ ಪ್ರತಿ ತಿಂಗಳು ಎರಡು ಸಲ ಭೇಟಿಯಾಗುತ್ತಿದ್ದವು ಎಂದು ಹೇಳಿದ್ದಾರೆ.
ಈಗ ಹೋಗಿ ಆರೋಗ್ಯ ವಿಚಾರಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಆದ್ರೆ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಇದೇ ಸಚಿವ ಜಮೀರ್ ಆಡಿದ್ದ ಮಾತಿಗಳು ವ್ಯತಿರಿಕ್ತವಾಗಿದ್ದವು. ಹೀಗಾಗಿ ಹಳೆಯ ವೀಡಿಯೋ ಮತ್ತು ನಿನ್ನೆಯ ವೀಡಿಯೋನ್ನ ಜೋಡಿಸಿ ಸಚಿವರನ್ನು ಟ್ರೋಲ್ (Troll) ಮಾಡಲಾಗುತ್ತಿದೆ.