ನೇಪಾಳದಲ್ಲಿ (Nepal) ಸೋಷಿಯಲ್ ಮೀಡಿಯಾ (Social media) ಬ್ಯಾನ್ ಮಾಡಿರೋ ಹಿನ್ನಲೆ, ನೇಪಾಳದ ರಾಜಧಾನಿ ಕಟ್ಮಂಡುವಿನಲ್ಲಿ ಯುವ ಜನತೆ ಬಿದಿಗೆ ಇಳಿದು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ನೇಪಾಳದಲ್ಲಿ ಕಳೆದ ವಾರ ಇಲ್ಲಿನ ಸರ್ಕಾರ 26 ಸಾಮಾಜಿಕ ಜಾಲತಾಣವನ್ನ ಬ್ಯಾನ್ ಮಾಡಿತ್ತು.ಫೇಸ್ ಬುಕ್, ಇನ್ ಸ್ಟಾ ಗ್ರಾಂ, ಮತ್ತು ಇತರೆ ಸಾಮಾಜಿಕ ಜಾಲತಾಣಗಳನ್ನೂ ಬ್ಯಾನ್ ಮಾಡಿತ್ತು.ಇದಕ್ಕಾಗಿ ಇಂದು ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದ ಯುವ ಜನತೆ ಪ್ರತಿಭಟನೆಗೆ ಮುಂದಾಗಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.ಈ ಪ್ರತಿಭಟನೆಯ ವೇಳೆ ನೇಪಾಳದ ಸಂಸತ್ ಭವನಕ್ಕೆ ಕೂಡ ಪ್ರತಿಭಟನೆಕಾರರು ನುಗ್ಗಿದ್ದಾರೆ. ಯುವಜನತೆಯ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಅಶ್ರವಾಯು ಸಿಡಿಸಿದ ಪೋಲಿಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಟ್ಟಿದ್ದಾರೆ.

ಆದರೆ ಅದಕ್ಕೂ ತಲೆಕೆಡಸಿಕೊಳ್ಳದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನಾಕಾರರು ಸಂಸತ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಪೋಲಿಸರಿಂದ ಲಾಠಿ ಪ್ರಹಾರ ಮಾಡಿದ್ರು ಯಾವುದೇ ಪ್ರಯೋಜನವಿಲ್ಲ.ಸಂಸತ್ ನ ಗೊಡೆಗಳ ಮೇಲೆ ಏರುತ್ತಿರೋ ನೇಪಾಳದ ಯುವಜನತೆಯುಟ್ಯೂಬ್, ವಾಟ್ಸಾಪ್, ಎಕ್ಸ್ ಖಾತೆ ಸೇರಿ 26 ಸಾಮಾಜಿಕ ಜಾಲತಾಣ ಬ್ಯಾನ್ ಮಾಡಿರೋ ಸರ್ಕಾರದ ನಿರ್ಧಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.










