• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯೋಗ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ; ಪ್ರತಾಪ್ ಸಿಂಹ

ಪ್ರತಿಧ್ವನಿ by ಪ್ರತಿಧ್ವನಿ
June 21, 2023
in Top Story, ಕರ್ನಾಟಕ, ರಾಜಕೀಯ
0
ಯೋಗ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ; ಪ್ರತಾಪ್ ಸಿಂಹ
Share on WhatsAppShare on FacebookShare on Telegram

ಮೈಸೂರು: ಜೂನ್ 21 : ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಮೈಸೂರು ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದರು.

ADVERTISEMENT

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಮೈಸೂರು ಅರಮನೆ ಮಂಡಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಗೂ ವಿವಿಧ ಯೋಗ ನಿರತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2015 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಜೂನ್ 21 ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಮಂಡಿಸಿದರು.

ಬಹುತೇಕ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದವು. ಅಂದಿನಿಂದ ವಿಶ್ವ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ಅವರು ಮಾತನಾಡಿ ನಾವು ಚಿಕ್ಕವರಿದ್ದಾಗ ಡಾ. ರಾಜಕುಮಾರ್ ಅವರ ಯೋಗವನ್ನು ನೋಡುತ್ತಿದ್ದೆ. ಯೋಗ ಮಾಡುವುದರಿಂದ ದೇಹಕ್ಕೆ ತೇಜಸ್ಸನ್ನು ನೀಡುತ್ತದೆ. ಯೋಗ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಉಲ್ಲಾಸದಿಂದ ಇರಲು ಸಹಕಾರಿಯಾಗುತ್ತದೆ. ದೇಶ ಕಾಯುವ ಸೈನಿಕರಿಗೂ ಯೋಗ ಮಾಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ಮಾತನಾಡಿ ಯೋಗ ವಿಶ್ವದಲ್ಲಿ ಪ್ರಸಿದ್ದಿ ಪಡೆದಿದೆ. ಯೋಗದ ಮಹತ್ವ ವಿಶ್ವಕ್ಕೆ ತಿಳಿದಿದೆ. ಮೈಸೂರು ಯೋಗಕ್ಕೆ ಪ್ರಸಿದ್ದಿ ಪಡೆದಿದೆ. ಯೋಗದಲ್ಲಿ ಮೈಸೂರು ಗಿನ್ನಿಸ್ ದಾಖಲೆ ಮಾಡಿತ್ತು. ಯೋಗ ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ. ಎಲ್ಲಾ ಯೋಗ ಸಂಘ ಸಂಸ್ಥೆಗಳು ಯೋಗ ಬೆಳೆಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಮತ್ತೊಮ್ಮೆ ಯೋಗದಲ್ಲಿ ಮೈಸೂರು ಗಿನ್ನಿಸ್ ದಾಖಲೆ ಮಾಡಬೇಕು ಎಂದರು.

ಶ್ರೀ ಸೋಮೇಶ್ವರ ಸ್ವಾಮೀಜಿ ಅವರು ಮಾತನಾಡಿ ಯೋಗ ಮನಸ್ಸನ್ನು ಹಿಡಿತದಲ್ಲಿ ಇಡುತ್ತಡೆ. ವಿಶ್ವದ 186 ದೇಶಗಳಲ್ಲಿ ಯೋಗ ಸ್ಥಾನ ಪಡೆದಿದೆ. ಸನಾತನ ಋಷಿಗಳು ಯೋಗವನ್ನು ನೀಡಿದರು ಎಂದು ಮಾಹಿತಿ ನೀಡಿದರು. ಶಂಕ ನಾದವನ್ನು ಮೊಳಗಿಸುವ ಮೂಲಕ ಯೋಗವನ್ನು ಪ್ರಾರಂಭಿಸಲಾಯಿತು. ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು ಭಾಗವಹಿಸಿ ಯೋಗವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮುಖಂಡರಾದ ತನ್ವೀರ್ ಪಾಷಾ ಸೇರಿದಂತೆ ವಿವಿಧ ಧರ್ಮಗುರುಗಳು ಹಾಗೂ ಯೋಗಪಟುಗಳು ಭಾಗವಹಿಸಿದ್ದರು.

Tags: GlobalMovementInternationalDayofYogaPMModiYogaYogaDay2023
Previous Post

ಅಮೆರಿಕಾದಲ್ಲಿ ಮೋದಿ ಹವಾ, ಪ್ರಧಾನಿಗೆ ಭರ್ಜರಿ ಸ್ವಾಗತ..!

Next Post

ಜಾತಿ, ಧರ್ಮ, ಸಿದ್ಧಾಂತಗಳಿಗೆ ತಳುಕು ಹಾಕದೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ : CM

Related Posts

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ
Top Story

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

by ಪ್ರತಿಧ್ವನಿ
April 11, 2026
0

2019ರಲ್ಲಿ ಒಂದು ಕನಸು ಆರಂಭವಾಯಿತು…ಸತ್ಯದ ಧ್ವನಿಯನ್ನು ಜನರಿಗೆ ತಲುಪಿಸುವ ಕನಸು…ಆ ಕನಸಿನ ಹೆಸರು – ಪ್ರತಿಧ್ವನಿ ನ್ಯೂಸ್. ಇಂದು, 2026ರ ಏಪ್ರಿಲ್ 11… ಪ್ರತಿಧ್ವನಿ ತನ್ನ ಏಳು...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
Next Post
ಜಾತಿ, ಧರ್ಮ, ಸಿದ್ಧಾಂತಗಳಿಗೆ ತಳುಕು ಹಾಕದೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ : CM

ಜಾತಿ, ಧರ್ಮ, ಸಿದ್ಧಾಂತಗಳಿಗೆ ತಳುಕು ಹಾಕದೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ : CM

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada