ಸಮ್ಮರ್ ಸೀಸನ್ನಲ್ಲಿ ಬರುವಂತಹ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡಾ ಒಂದು. ಈ ಹಣ್ಣನ್ನ ಪ್ರತಿಯೊಬ್ಬರು ಕೂಡಾ ಇಷ್ಟಪಟ್ಟು ತಿನ್ನುತ್ತಾರೆ. ಬೇಸಿಯಲ್ಲಿ ನಮಗೆ ಕಾಡುವಂತ ಸಮಸ್ಯ ಅಂದ್ರೆ ದೇಹಾ ಡಿಹೈಡ್ರೆಟ್ ಆಗುವುದು,ಉಷ್ಣತೆ ಹೆಚ್ಚಾಗುವುದು.ಈ ಪ್ರಬ್ಲಮನ್ಸ್ಗೆ ರಾಮಬಾಣ ಅಂದ್ರೆ ಕಲ್ಲಂಗಡಿಹಣ್ಣು ಇದರಲ್ಲಿ ನೀರಿನಾಂಶ ಹೆಚ್ಚಿರೊದ್ರಿಂದ ದೇಹವನ್ನ ತಂಪಾಗಿಡೊದಕ್ಕೆ ಸಹಾಯ ಮಾಡುತ್ತದೆ..
ಕಲ್ಲಂಗಡಿ ಹಣ್ಣಿನಲ್ಲು ನಾನಾಬಗೆಯ ಬಣ್ಣಗಳನ್ನ ನೋಡ್ಬಹುದು.ಸದ್ಯ ಮಾರ್ಕೆಟ್ನಲ್ಲಿ ಜನರನ್ನ ಸೆಳೆಯುತ್ತಿರುವುದು ಹಳದಿ ಬಣ್ಣದ ವಾಟರ್ ಮೆಲನ್.ಹೌದು ಹೆಚ್ಚು ಜನ ಹಳದಿ ಬಣ್ಣದ ಕಲ್ಲಂಗಡಿ ಹಣ್ಣಿನ ರುಚಿ ಹೇಗಿರಬಹುದು ಅನ್ನೊ ಕುತೂಹಲದಿಂದ ಕರಿದಿ ಮಾಡ್ತಿದ್ದಾರೆ..
ಇನ್ನು ಹಳದಿಯಲ್ಲಿ ವಿಟಮಿನ್ ಎ ಮತ್ತು ಸಿ ಅಧಿಕವಾಗಿದೆ, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಳದಿ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಹೆಚ್ಚಿನ ಆಂಟಿಆಕ್ಸಿಡೆಂಟ್ ಬೀಟಾ-ಕ್ಯಾರೋಟಿನ್(Beta Carotene)ಅನ್ನು ಹೊಂದಿರುತ್ತದೆ. ಬೀಟಾ-ಕ್ಯಾರೋಟಿನ್ ಕ್ಯಾನ್ಸರ್ ಮತ್ತು ಕಣ್ಣಿನ ಕಾಯಿಲೆಯಿಂದ ರಕ್ಷಿಸುತ್ತದೆ.
ಕಳೆದ ಒಂದು ವರ್ಷದಿಂದ ನಾವು ಹೆಚ್ಚಾಗಿ ಈ ಹಳದಿ ಕಲ್ಲಂಗಡಿ ಹಣ್ಣನ್ನ ನೊಡ್ತಾಯಿದ್ದಿವಿ, ಹಾಗಾಗಿ ಹೆಚ್ಚಿನವರಿಗೆ ಈ ಹಣ್ಣಿನ ಬಗ್ಗೆ ಅಷ್ಟು ಮಾಹಿತಿ ತಿಳಿದಿಲ್ಲಾ. ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಈ ಹಣ್ಣು ಸಹಕಾರಿ.ಭಾರತದಲ್ಲಿ ಹೆಚ್ಚಾಗಿ ಕರ್ನಾಟಕ,ಆಂಧ್ರಪ್ರದೇಶ ಹಾಗೂ ತ್ರಿಪ್ರುರದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ. ಹಾಗೂ ಹೆಚ್ಚಾಗಿ ಈ ಹಣ್ಣನ್ನು ಮರುಭೂಮಿಯಲ್ಲಿ ಬೆಳೆಯುತ್ತಾರೆ,ಹಾಗಾಗಿ ಇದನ್ನು ಡೆರ್ಸಟ್ಕಿಂಗ್ ಅಂತಾನು ಹೇಳ್ತಾರೆ..
ಇನ್ನು ಈ ಹಳದಿ ಕಲ್ಲಂಗಡಿಹಣ್ಣನ್ನು ಮೊದಲ ಬೆಳೆದಿದ್ದು ಆಫ್ರಿಕಾದಲ್ಲಿ ಅದು ಕೂಡಾ ೫೦೦೦ ವರ್ಷಗಳ ಹಿಂದೆ.ನಂತಹ ಎಲ್ಲ ಕಡೆ ಈ ಹಣ್ಣನ್ನ ಬೆಳೆಯಲಾಯಿತು.ಈ ಹಣ್ಣು ಕೆಂಪು ಕಲ್ಲಂಗಡಿ ಹಣ್ಣಿಗಿಂತ ತುಂಬಾನೆ ಸ್ವೀಟ್ ಹಾಗೂ ಜೇನುತುಪ್ಪದ ಫ್ಲೇವರ್ ಕೊಡುತ್ತದೆ ಎಂಬುವುದು ಹೆಚ್ಚು ಜನರ ಅಭಿಪ್ರಾಯ.
ಒಟ್ಟಿನಲ್ಲಿ ಒಂದು ಕೆಜಿ ಗೆ ೨೦ರಿಂದ ೨೫ ರುಪಾಯಿ ವರಗು ವ್ಯಪಾರಿಗಳು ಮಾರಟ ಮಾಡ್ತಾಯಿದ್ದು, ಮಾರ್ಕೆಟ್ನಲ್ಲಿ ಹೆಚ್ಚು ಬೇಡಿಕೆ ಇರುವಂತ ಹಣ್ಣು ಇದಾಗಿದೆ..