• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಶೇಂಗಾ ಮತ್ತು ಹೆಸರು ಬೇಳೆಗೆ ಶುರುವಾಗಿದೆ ಹಳದಿ ವೈರಸ್ ಕಾಟ

Any Mind by Any Mind
July 3, 2021
in Uncategorized
0
ಶೇಂಗಾ ಮತ್ತು ಹೆಸರು ಬೇಳೆಗೆ ಶುರುವಾಗಿದೆ ಹಳದಿ ವೈರಸ್ ಕಾಟ
Share on WhatsAppShare on FacebookShare on Telegram

ಉತ್ತರ ಕರ್ನಾಟಕದ ಗದಗ್ ಮತ್ತು ಸುತ್ತಮುತ್ತಲಿನ ಪ್ರದೇಶ ಶೇಂಗಾ ಮತ್ತು ಹೆಸರು ಬೆಳೆಗೆ ಪ್ರಸಿದ್ಧವಾಗಿದ್ದು ಇದೀಗ ಅದಕ್ಕೂ ವೈರಸ್ ಕಾಟ ಶುರುವಾಗಿದೆ. ವೈರಸ್‌ ಅಂದರೆ ಕೋವಿಡ್ ಅಂದುಕೊಂಡಿರಾ ಅಲ್ಲ, ಇದು ಹಳದಿ ವೈರಸ್ ಅಥವಾ ಹಳದಿ ನಂಜಾಣು ರೋಗ. ಕೃಷಿಕರು ಮುಂಗಾರು ಆರಂಭಕ್ಕಿಂತ ಕೆಲವು ದಿನಗಳ ಮೊದಲೇ ಈ ಬೆಳೆಗಳನ್ನು ಬಿತ್ತಿದ್ದು ಮೋಡದ ಕಡೆಗೆ ನೋಡುತ್ತ ನಿಂತಿದ್ದರು. ಮಳೆ ಈ ಬಾರಿ ಚೆನ್ನಾಗಿಯೇ ಆಯಿತು. ಆದರೆ ಹಳದಿ ನಂಜಾ ರೋಗ ಒಕ್ಕರಿಸಿ ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.

ADVERTISEMENT

ಕಳೆದ ಬಾರಿ ಕೋವಿಡ್ ಸಂಕಷ್ಟದಿಂದ ತೊಂದರೆ ಅನುಭವಿಸಿದ ರೈತು ಈ ಬಾರಿಯೂ ಲಾಕ್ ಡೌನ್ ನಲ್ಲಿ ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ದೂರದ ಮಾರುಕಟ್ಟೆಗೆ ಸಾಗಿಸಲಾಗದೆ ಒದ್ದಾಡಿದರು. ಇಂತಹ ಸಮಯದಲ್ಲಿ ಒಂದು ವೈರಸ್ ಬಂದು ಮುಂಗಾರಿನ ಬೆಳೆಯೂ ಕೈ ತಪ್ಪಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಈಗಾಗಲೇ ಬಹುತೇಕ ಹೊಲಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಕೆಲವು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದ್ದಾರೆ.

 “ತಾಲೂಕಿನಾದ್ಯಂತ ಮುಂಗಾರು ಮಳೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಆಗಿರುವುದರಿಂದ ರೈತರು ಮುಂಗಾರು ಹಂಗಾಮಿನ ಬೆಳೆಗಳಾದ ಶೇಂಗಾ ಹೆಸರು ಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ಬೀತನೆ ಮಾಡಿದ್ದು ಈಗ ಬೆಳೆಗಳಿಗೆ ರೋಗ ಬಾಧೆಯಿಂದ ನಲುಗಿದ್ದು ಅದರಲ್ಲೂ ವಿಶೇಷವಾಗಿ ತಿಮ್ಮಾಪೂರ ಹಾಗೂ ಹರ್ಲಾಪೂರ ಭಾಗದ ಭುಮಿಯಲ್ಲಿ ಶೇಂಗಾ, ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಹರಡಿ ಬೆಳೆಯು ಸಂಪೂರ್ಣ ಹಾಳಾಗಿವೆ. ಇದರಿಂದ ನೂರಾರು ರೈತರು ನಷ್ಟ ಅನುಭವಿಸಿದ್ದಾರೆ. ಕೃಷಿ ಇಲಾಖೆ ಈ ಬಗ್ಗೆ ಸೂಕ್ತ ಪರಿಕ್ಷೆ ನಡೆಸಿ ರೈತರಿಗೆ ತಿಳಿಸುತ್ತಿದ್ದಾರೆ. ಲಾಕ್ ಡೌನ್ ನಿಂದ ಪದೇ ಪದೇ ತೊಂದರೆ ಅನುಭವಿಸುತ್ತಿದ್ದೇವೆ. ಬೇಡವೆಂದರೂ ನಗರಗಳಿಗೆ ವಲಸೆ ಹೋಗುವ ನಮ್ಮ ಜನರೇ ರೋಗ ತೆಗೆದುಕೊಂಡು ಹಳ್ಳಿಗಳಲ್ಲಿ ಬಂದು ಪಸರಿಸಿಬಿಡುತ್ತಾರೆ. ಹೀಗಾದರೆ ಮುಂದೆ ರೈತರ ಬದುಕು ಹೇಗೆ ಎಂಬುದೇ ತಿಳಿಯದಾಗಿದೆ”ಎಂದು  ಹನುಮಂತ ಬಡಿಗಣ್ಣವರ ಎಂಬ ಬೆಳೆಗಾರ ಅಳಲು ತೋಡಿಕೊಂಡಿದ್ದಾರೆ.

ಕೃಷಿಕರೊಂದಿಗೆ ಅಧಿಕಾರಿಗಳು

ಈ ಕುರಿತು ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿದ ಕೃಷಿ ಅಧಿಕಾರಿಯೊಬ್ಬರು, “25 ರಿಂದ 40 ದಿನದ ಕಾಲಾವಧಿಯಲ್ಲಿ ಈ ಬೆಳೆಗೆ ಬಿಳಿ ನೊಣಗಳಿಂದ ಈ ಹಳದಿ ನಂಜಾಣು ರೋಗ ಬರುತ್ತದೆ .ಈ ಸಮಯದಲ್ಲಿ ಪ್ರತಿ ಲೀಟರ್ ನೀರಿಗೆ 02 ಇಮಿಡಾಕ್ಲೋಸಪ್ರಿಡ್ ಅಥವಾ 03 ಗ್ರಾಂ ಥೈಯಾಮಿಥಾಕ್ಸಮ್ ಬಳಸಿ ಬೆಳೆಯ ಕೆಳಗಿನ ಎಲೆಗಳಿಗೆ ಹರಡುವಂತೆ ಸಿಂಪಡಿಸಬೇಕು ಹಾಗೂ ಇದು  ನಂಜಾಣು ರೋಗ ವಾಗಿರುವುದರಿಂದ ಹಳದಿ ಯಾದ ಸಸಿಗಳನ್ನು ಕಿತ್ತು ಭೂಮಿಯಲ್ಲಿ ಆಳವಾದತೇಗನ್ನು ತೋಡಿ  ಉಳುವುದರಿಂದ ಬೇರೆ ಗಿಡಗಳಿಗೆ ಈ ರೋಗವನ್ನು ಹರಡದಂತೆ ಮಾಡಬಹುದು” ಎಂದು ತಿಳಿಸಿದ್ದಾರೆ.

Previous Post

ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ: ನಿರ್ಮಲಾ ಸೀತಾರಾಮನ್ ವಿರುದ್ಧ ಸಿದ್ದರಾಮಯ್ಯ ಕಿಡಿ

Next Post

ಗರ್ಭಿಣಿ ಮಹಿಳೆಯರು ಕೂಡ ಕರೋನ ವ್ಯಾಕ್ಸಿನ್ ಪಡೆಯಬಹುದು: ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದನೆ

Related Posts

ಗ್ಯಾರಂಟಿಗೆ ಹಣವಿಲ್ಲ, ಅಭಿವೃದ್ಧಿಗೆ ರೂಪಾಯಿಯೂ ಇಲ್ಲ: ಬಿ.ವೈ.ವಿಜಯೇಂದ್ರ
Uncategorized

ಗ್ಯಾರಂಟಿಗೆ ಹಣವಿಲ್ಲ, ಅಭಿವೃದ್ಧಿಗೆ ರೂಪಾಯಿಯೂ ಇಲ್ಲ: ಬಿ.ವೈ.ವಿಜಯೇಂದ್ರ

by ಪ್ರತಿಧ್ವನಿ
March 5, 2026
0

ಚಿಕ್ಕೋಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣದ ಅಭಾವ ಎದುರಿಸುತ್ತಿದ್ದು, ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ....

Read moreDetails
ಷೇರು ಮಾರುಕಟ್ಟೆ ಹೂಡಿಕೆ  ಲಾಭದ ಆಸೆ ತೋರಿಸಿ  5 ತಿಂಗಳಿನಲ್ಲಿ  ಒಟ್ಟು 1420 ಕೋಟಿ ರೂ ವಂಚನೆ

ಯುದ್ಧ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ; ಇಂದು ಇಷ್ಟು ಲಕ್ಷ ಕೋಟಿ ನಷ್ಟ!

March 4, 2026
“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

March 4, 2026
ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

March 3, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಗರ್ಭಿಣಿ ಮಹಿಳೆಯರು ಕೂಡ ಕರೋನ ವ್ಯಾಕ್ಸಿನ್ ಪಡೆಯಬಹುದು: ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದನೆ

ಗರ್ಭಿಣಿ ಮಹಿಳೆಯರು ಕೂಡ ಕರೋನ ವ್ಯಾಕ್ಸಿನ್ ಪಡೆಯಬಹುದು: ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada