ರಾಜ್ಯ ಬಿಜೆಪಿ (Bjp) ಪಾಳಯದಲ್ಲಿ ಆಂತರಿಕ ಕಿತ್ತಾಟ, ಅಸಮಾಧಾನ ಹಾಗೂ ಒಳಬೇಗುದಿ ಸಂಪೂರ್ಣ ತಾರಕಕ್ಕೇರಿದೆ. ಪದೇ ಪದೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ವಿರುದ್ಧ ಟೀಕೆ ಮಾಡುತ್ತಿರುವ ಶಾಸಕ ಯತ್ನಾಳ್ (Yatnal) ಬಾಯಿಗೆ ಹೈಕಮಾಂಡ್ ಬ್ರೇಕ್ ಹಾಕಲು ಮುಂದಾಗಿದೆ.
ಈಗಾಗಲೇ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಈ ವಿಚಾರದಲ್ಲಿ ಶಾಸಕ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿ, ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಹೀಗಾಗಿ ಇಂದು ಕೇಂದ್ರ ಶಿಸ್ತು ಸಮಿತಿ ಮುಂದೆ ಬೆಳಗ್ಗೆ 11 ಗಂಟೆ ಬಳಿಕ ಯತ್ನಾಳ್ ಹಾಜರಾಗಲಿದ್ದಾರೆ.
ಬಿಜೆಪಿಯ ಶಿಸ್ತು ಸಮತಿ ಮುಂದೆ ವಿಚಾರಣೆಗೆ ಹಾಜರಾಗಿ ಸಾಲು ಸಾಲು ಪ್ರಶ್ನೆಗಳಿಗೆ ಯತ್ನಾಳ್ ಉತ್ತರಿಸಬೇಕಿದೆ. ಆ ಮೂಲಕ ಇಂದು ಯತ್ನಾಳ್ ಗೆ ಹೈಕಮಾಂಡ್ ಬಿಸಿ ಮುಟ್ಟಿಸಲು ಮುಂದಾಗಿದೆ.