ರಾಕಿಂಗ್ ಸ್ಟಾರ್ (Rocking star yash) ನಟನೆಯ 19ನೇ ಸಿನಿಮಾ ಟಾಕ್ಸಿಕ್ (toxic) ಗೆ ಸಂಬಮಧಪಟ್ಟಂತೆ ಇದೀಗ ಒಂದೊಂದೇ ಅಪ್ಲೆಟ್‌ಗಳು ಲಭ್ಯವಾಗ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ದೊಡ್ಡ ಸೆಟ್ಸ್ ನಿರ್ಮಿಸಲಾಗಿದೆ. ಈ ಬೃಹತ್ ಸೆಟ್ಗಳಲ್ಲಿ ಈಗಾಗಲೇ ಶೂಟಿಂಗ್ ಆರಂಭವಾಗಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ 20 ಎಕರೆ ಜಾಗದಲ್ಲಿ 1940ರ ದಶಕದ ಮಾದರಿಯ ಸೆಟ್ ಹಾಕಲಾಗಿದ್ದು, ಚಿತ್ರೀಕರಣದಲ್ಲಿ ಸುಮಾರು 1000 ಮಂದಿ ಕಾರ್ಮಿಕರಿದ್ದಾರೆ. ಜೊತೆಗೆ 450 ಕ್ಕೂ ಅಧಿಕ ಕಲಾವಿದರು ಭಾಗಿಯಾಗಿದ್ದು, ಅದರಲ್ಲಿ ಬಹುತೇಕ 300 ಮಂದಿ ವಿದೇಶಿ ಕಲಾವಿದರೇ ಆಗಿದ್ದಾರೆ.
ಕೇವಲ ಟೈಟಲ್ ಮಾಡಿರೋದು ಬಿಟ್ರೆ ಟಾಕ್ಸಿಕ್ ಚಿತ್ರತಂಡದಿಂದ ಇದುವರೆಗೂ ಇನ್ಯಾವುದೇ ಅಪ್ಲೇಟ್ ಗಳು ಲಭ್ಯಾಗಿಲ್ಲ. ಕೆ.ಜಿ.ಎಫ್ 2 (KGF 2) ನಂತರ ತುಂಬಾ ಸಮಯದಿಂದ ಯಶ್ (Yash) ಅಭಿಮಾನಿಗಳು ಅವರ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದು, ಇದೀಗ ಟಾಕ್ಸಿಕ್ ಸಿನಿಮಾದ ಒಂದೊಂದೇ ವಿಚಾರಗಳು ಹೊರಬರ್ತಿವೆ.