ಸ್ವ ಕ್ಷೇತ್ರ ಮೈಸೂರಿನಲ್ಲಿ (mysuru) ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಖುದ್ದು ಸಿಎಂ ಸಿದ್ದರಾಮಯ್ಯ (cm siddaramaiah) ಅಖಾಡಕ್ಕೆ ಇಳಿದಿದ್ದಾರೆ. ಮೈಸೂರಿನಲ್ಲಿ ಸಭೆಗಳ ಮೇಲೆ ಸಭೆ ಮಾಡಿ ಸ್ಥಳೀಯ ಬಹಳಷ್ಟು ಸೂಚನೆಗಳನ್ನ ಕೊಟ್ಟಿದ್ದಾರೆ. ಜೊತೆಗೆ ರೆಸಾರ್ಟ್‌ಗೆ (Resort) ತೆರಳಿ, ಆಪ್ತರ ಜೊತೆಗೆ ಗೆಲುವಿಗೆ ಬೇಕಾದ ತಂತ್ರಗಾರಿಕೆಯ ಬಗ್ಗೆ ಚರ್ಚೆಗೆ ಮುಂದಾಗಿದ್ದಾರೆ.
ಮೈಸೂರು-ಕೊಡಗು (Mysore-Kodagu) ಲೋಕಸಭಾ ಕ್ಷೇತ್ರ ಈ ಬಾರಿ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ. ಒಂದೆಡೆ ಬಿಜೆಪಿಯಿಂದ(Bjp) ಮೈಸೂರು ಮಹಾರಾಜ ಯದುವೀರ್ ಒಡೆಯರ್ (Yaduveer odeyar) ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ತವರು ಜಿಲ್ಲೆ ಆಗಿರುವ ಕಾರಣ, ಸಿಎಂ ಸಿದ್ದರಾಮಯ್ಯಗೆ (cm siddaramaiah) ಗೆಲ್ಲಲೇಬೇಕಾದ ಪ್ರತಿಷ್ಠೆ ಎದುರಾಗಿದೆ. ಮೈಸೂರಿನ ಜೊತೆಗೆ ಚಾಮರಾಜನಗರದ (chamaraja nagar) ಹೊಣೆಯೂ ಸಿದ್ದರಾಮಯ್ಯ ಹೆಗಲ ಮೇಲಿದೆ. ಹೀಗಾಗಿ ಮೈಸೂರು ಮತಯುದ್ಧ ಗೆಲ್ಲಲು ನೇರವಾಗಿ ಸಿಎಂ ಸಿದ್ದರಾಮಯ್ಯನವರೇ ಅಖಾಡಕ್ಕೆ ಇಳಿದಿದ್ದಾರೆ.
ಹೀಗಾಗಿ ಕ್ಷೇತ್ರದಲ್ಲಿ ಯದುವೀರ್ ಟಾರ್ಗೆಟ್ ಮಾಡುವುದು ಬೇಡ. ನಮ್ಮ ಟಾರ್ಗೆಟ್ (target) ಏನಿದ್ದರೂ ಬಿಜೆಪಿ ಆಗಿರಬೇಕು ಅಷ್ಟೆ. ಭಾಷಣ ಮಾಡವಾಗ ಯದುವೀರ್ ಬಗ್ಗೆ ಎಚ್ಚರಿಕೆ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕ ಹಾಗೆ ಹೇಳಿಕೆ ಕೊಡಬೇಡಿ. ಯಾಕಂದ್ರೆ ಎಮೋಷನಲ್ (Emotional) ವಿಚಾರವನ್ನು ತಿರುಗಿಸುವಲ್ಲಿ ಬಿಜೆಪಿಗರು ನಿಸ್ಸಿಮರು. ಹೀಗಾಗಿ ಬಿಜೆಪಿಯವರಿಗೆ ನಿಮ್ಮ ಹೇಳಿಕೆಗಳೇ ಆಹಾರವಾಗಬಾರದು. ಯದುವೀರ್ (Yaduveer) ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.