ನವದೆಹಲಿ: ಜಗತ್ತಿನ ಅತ್ಯಂತ ಹಿರಿಯ ನಾಯಿ ಮೃತಪಟ್ಟಿದೆ. ಮೇ 11, 1992 ರಂದು ಜನಿಸಿದ ಬೋಬಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ (ಜಿಡಬ್ಲ್ಯೂಆರ್) ನಿಂದ ಫೆಬ್ರವರಿಯಲ್ಲಿ ಅತ್ಯಂತ ಹಿರಿಯ ಶ್ವಾನ ಎಂದು ಗುರುತಿಸಲ್ಪಟ್ಟಿತ್ತು. 31 ವರ್ಷ ಮತ್ತು 165 ದಿನಗಳಾದ ಬಳಿಕ ಈ ನಾಯಿ ಸಾವಿಗೀಡಾಗಿದೆ.

ಈ ಶ್ವಾನ ಪೋರ್ಚುಗಲ್‌ನಲ್ಲಿರುವ ಮನೆಯಲ್ಲಿ ಶನಿವಾರ ನಿಧನರಾಗಿದೆ. ಕೋಸ್ಟಾ ಕುಟುಂಬದೊಂದಿಗೆ ಈ ನಾಯಿ ತನ್ನ ಸಂಪೂರ್ಣ ಜೀವನವನ್ನು ನಡೆಸಿದೆ. ಬೋಬಿಯನ್ನು ಹಲವಾರು ಬಾರಿ ಭೇಟಿಯಾದ ಪಶುವೈದ್ಯ ಡಾ. ಕರೆನ್ ಬೆಕರ್ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ನಾಯಿಯ ಮರಣದ ಸುದ್ದಿಯನ್ನು ದೃಢಪಡಿಸಿದ್ದಾರೆ. “ಕಳೆದ ರಾತ್ರಿ, ಈ ಸಿಹಿ ಹುಡುಗ ತನ್ನ ರೆಕ್ಕೆಗಳನ್ನು ಗಳಿಸಿದ್ದಾನೆ” ಎಂದು ಸಂತಾಪ ಸೂಚಿಸಿರುವ ಫೋಟೋ ಜತೆಗೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
“ಇತಿಹಾಸದಲ್ಲಿ ಪ್ರತಿ ನಾಯಿಯನ್ನು ಮೀರಿಸಿದ್ದರೂ, ಅವನನ್ನು ಪ್ರೀತಿಸುವವರಿಗೆ ಭೂಮಿಯ ಮೇಲಿನ ಅವನ 11,478 ದಿನಗಳು ಎಂದಿಗೂ ಸಾಕಾಗುವುದಿಲ್ಲ” ಎಂದು ಡಾ. ಕರೆನ್ ಬೆಕರ್ ಬರೆದಿದ್ದಾರೆ. “ಗಾಡ್‌ಸ್ಪೀಡ್, ಬಾಬಿ… ನೀನು ಕಲಿಸಲು ಉದ್ದೇಶಿಸಿರುವ ಎಲ್ಲವನ್ನೂ ನೀನು ಜಗತ್ತಿಗೆ ಕಲಿಸಿದ್ದೀಯ’’ ಎಂದೂ ಬರೆದುಕೊಂಡಿದ್ದಾರೆ.