ಸ್ಯಾಂಡಲ್‌ವುಡ್‌ನ(Sandalwood) ಉಪೇಂದ್ರ(Upendra) ಅಭಿನಯದ ಬಹುನಿರೀಕ್ಷಿತ “ಯು-ಐ”(U-I) ಚಿತ್ರದ ʻಬೀಪ್ ಬೀಪ್ʼ ಹಾಡಿನ ಬಗ್ಗೆ ಉಂಟಾಗಿರುವ ಚರ್ಚೆ, ಗೊಂದಲಕ್ಕೆ ರಿಯಲ್ ಸ್ಟಾರ್ ಪ್ರತಿಕ್ರಿಯಿಸಿದ್ದು, ಹಾಡಿನ ಲಿರಿಕಲ್(Lyrical) ವಿಡಿಯೋ(Video) ರಿಲೀಸ್ ಆದ್ಮೇಲೆ ಎಲ್ಲವೂ ಗೊತ್ತಾಗುತ್ತೆ ಎಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾದ ʻಬೀಪ್ ಬೀಪ್ʼ ಹಾಡು ಸಿನಿ ರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ನಡುವೆ ಹಾಡಿನ ಸಾಹಿತ್ಯದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಆದರೆ ಈ ಎಲ್ಲಾ ಗೊಂದಲಗಳಿಗೆ ಇದೀಗ ಚಿತ್ರದ ನಿರ್ದೇಶಕ ಉಪೇಂದ್ರ ಅವರೇ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದು, ʻಬೀಪ್ ಬೀಪ್ʼ ಹಾಡಿನಲ್ಲಿರುವ ಸಾಹಿತ್ಯದಲ್ಲಿನ ಅರ್ಧ ಏನು ಎಂಬುದು ಹಾಡಿನ ಲಿರಿಕಲ್ ವಿಡಿಯೋ ಮಾರ್ಚ್ 4ರಂದು ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆʼ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
#Sandalwood #Upendra #RealStar #UImovie #Kannada #UppiDirection