• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಮ್ಯಾ ದೂರಿಗೆ ಫಾಸ್ಟ್‌ ಆಕ್ಷನ್‌, ವಿಜಯಲಕ್ಷ್ಮಿ ಪ್ರಕರಣಕ್ಕೆ ಸ್ಲೋ ರಿಯಾಕ್ಷನ್‌ ಯಾಕೆ..?

ಪ್ರತಿಧ್ವನಿ by ಪ್ರತಿಧ್ವನಿ
December 31, 2025
in Top Story, ಕರ್ನಾಟಕ, ಸಿನಿಮಾ
0
ರಮ್ಯಾ ದೂರಿಗೆ ಫಾಸ್ಟ್‌ ಆಕ್ಷನ್‌, ವಿಜಯಲಕ್ಷ್ಮಿ ಪ್ರಕರಣಕ್ಕೆ ಸ್ಲೋ ರಿಯಾಕ್ಷನ್‌ ಯಾಕೆ..?
Share on WhatsAppShare on FacebookShare on Telegram

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ(Vijayalakshmi Darshan) ಇಂದು ಏಕಾಏಕಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ್ದರು. ಮೊನ್ನೆ ಮೊನ್ನೆಯಷ್ಟೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ವಿಜಯಲಕ್ಷ್ಮಿ ಇದೀಗ ಮತ್ತೆ ಪೊಲೀಸ್‌ ಕಮಿಷನರ್‌ ಕಚೇರಿಗೆ ಭೇಟಿ ನೀಡಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದ್ದು, ಈ ಭೇಟಿ ಹಿಂದಿನ ಅಸಲಿ ಸತ್ಯ ಏನು ಎನ್ನುವುದು ಈಗ ಹೊರಬಿದ್ದಿದೆ.

ADVERTISEMENT
Jaggesh About Cinema piracy :  ಪೈರಸಿ ಕೇವಲ ನನಗೆ  ಮಾತ್ರ ಆಗಿಲ್ಲ ಇಡೀ ಚಿತ್ರ ರಂಗದ ಬುಡಕ್ಕೆ ಬಂದಿರುವ ಸಮಸ್ಯೆ

ಫ್ಯಾನ್ಸ್‌ ವಾರ್‌ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್‌ ಹಾಕುವ ವಿಕೃತ ಮನಸ್ಸಿನ ನೆಟ್ಟಿಗರ ವಿರುದ್ಧ ಸಿಡಿದೆದ್ದಿದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕಳೆದ ವಾರ ಸಿಸಿಬಿಗೆ ದೂರು ನೀಡಿದ್ದರು. ಅಲ್ಲದೇ ತಮ್ಮ ಬಗ್ಗೆ ಹೀನಾಮಾನವಾಗಿ ಕಮೆಂಟ್‌ ಮಾಡಿದವರ ಪ್ರೊಫೈಲ್ ಸಮೇತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ಮೂಲಕ ವಿಜಯಲಕ್ಷ್ಮಿ, ಕೆಟ್ಟ ಕಮೆಂಟ್‌ ಹಾಕುವವರಿಗೆ ಬಿಸಿ ಮುಟ್ಟಿಸಿದ್ದರು. ಅತ್ತ ಸಿಸಿಬಿ ಪೊಲೀಸರು ಕೂಡ ವಿಜಯಲಕ್ಷ್ಮಿ ದೂರು ದಾಖಲಿಸಿಕೊಂಡು ಶೀಘ್ರವೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.

Jaggesh About Cinema piracy : ನಮ್ಮ ಜೊತೆಯಲ್ಲಿದ್ದುಕೊಂಡೇ ಪೈರಸಿ ಮಾಡ್ತಾರೆ #pratidhvani #jaggesh #piracy

ದೂರು ದಾಖಲಾಗಿ ತಮ್ಮ ಬುಡಕ್ಕೆ ಬಿಸಿ ಕಾಯುತ್ತಿದ್ದಂತೆ ಥಟ್ ಅಂತ ಎಚ್ಚೆತ್ತುಕೊಂಡ ಹಲವು ಟ್ರೋಲ್‌ ಪೇಜ್‌ಗಳು, ಇನ್ಸ್ಟಾಗ್ರಾಮ್‌ ಪ್ರೊಫೈಲ್‌ಗಳು ರಾತ್ರಿ ಬೆಳಗಾಗುವುದರ ಒಳಗೆ ಬ್ಲಾಕ್‌ ಆಗಿ ಡಿಲಿಟ್‌ ಆಗಿಬಿಟ್ಟಿದ್ದವು, ಇನ್ನೂ ಕೆಲವರು ವಿಡಿಯೋ ಮಾಡುವ ಮೂಲಕ ನೇರವಾಗಿ ವಿಜಯಲಕ್ಷ್ಮಿ ಅವರಿಗೆ ಕ್ಷಮೆ ಕೇಳಿದರು. ಜೊತೆಗೆ ಕೆಲ ಟ್ರೋಲ್‌ ಪೇಜ್‌ ಅಡ್ಮಿನ್‌ಗಳ ಬಂಧನವಾಯ್ತು ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎನ್ನುವುದು ಇಂದಿನ ವಿಜಯಲಕ್ಷ್ಮಿ ಅವರ ಪೋಸ್ಟ್‌ವೊಂದರಿಂದ ಸ್ಪಷ್ಟವಾಗಿದೆ.

N Chaluvaraya Swamy vs HD Kumaraswamy ಇವೆಲ್ಲ ಕಿವಿಗೆ ಹೂ ಇಟ್ಕೊಂಡಿದ್ದಾರೆ ಅಂದ್ಕೊಂಡಿದ್ದಾರೆ ! #pratidhvani

ಹೌದು, ಕೆಟ್ಟ ಕಮೆಂಟ್‌ ಹಾಕುವವರ ವಿರುದ್ಧ ಸಮರ ಸಾರಿದ್ದ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಇಂದು ನೇರವಾಗಿ ಬೆಂಗಳೂರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ನಾನು ಸಲ್ಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಬೇರೆ ಮಹಿಳೆ ನೀಡಿದ ದೂರನ್ನು ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವಾಗಿದೆ. ನನ್ನ ದೂರು ಮುಖ್ಯವಲ್ಲವೇ?. ನನ್ನ ವಕೀಲರಿಂದ ನಿರಂತರ ಫಾಲೋ-ಅಪ್‌ಗಳ ನಂತರವೂ ಯಾವುದೇ ಕ್ರಮವಿಲ್ಲ. ಇಂದು ನಾನು ವೈಯಕ್ತಿಕವಾಗಿ ಹೋಗಿ ಅವರಿಗೆ ನೆನಪಿಸಬೇಕಾಯಿತು. ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಈ ವಿಳಂಬಕ್ಕೆ ಕಾರಣ ಆಗಿರದಿರಲಿ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವಿಜಯಲಕ್ಷ್ಮಿ ಮಾಡಿದ್ದಾರೆ. ಈ ಮೂಲಕ ಪೊಲೀಸರು ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

B Sriramulu on Siddaramaiah : ಕೋಗಿಲು ಲೇಔಟ್‌ನಲ್ಲಿ ಮನೆ ತೆರವು ಮೊದ್ಲು ಸಂತ್ರಸ್ತರ ಹಿನ್ನೆಲೆ ಚೆಕ್‌ ಮಾಡಿ..!

ಈ ಪೋಸ್ಟ್‌ನಲ್ಲಿ ಬೇರೆ ಮಹಿಳೆ ನೀಡಿದ ದೂರನ್ನು ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಸಾಲೊಂದು ಹೈಲೈಟ್‌ ಆಗಿದ್ದು, ಇದು ಸತ್ಯಕ್ಕೆ ಬಹಳ ಹತ್ತಿರ ಅನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕೂಡ ಇದೇ ವಿಚಾರವಾಗಿ ದೂರು ದಾಖಲಿಸಿದ್ದರು. ನಟ ದರ್ಶನ್ ಪ್ರಕರಣದ ಸಂಬಂಧ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಪೋಸ್ಟ್ ಹಾಕಿದ್ದರು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ನಟಿ ರಮ್ಯಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಮತ್ತು ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿತ್ತು. ದೂರು ಕೂಡ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 12ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಆರೋಪಿಗಳ ಕುಟುಂಬದವರ ಮನವಿ ಮೇರೆಗೆ ನಟಿ ರಮ್ಯಾ ಅವರನ್ನು ಕ್ಷಮಿಸಲು ಒಪ್ಪಿಗೆ ನೀಡಿದ್ದರು. ಅತ್ತ ರಮ್ಯಾ, ಕೆಲವರಿಗೆ ಕ್ಷಮೆ ನೀಡಿದ್ದರೆ, ಇತ್ತ ಪೊಲೀಸರು ತನಿಖೆ ಮುಂದುವರಿಸಿದ್ದರು.

Siddaramaiah, DK Shivakumar : ಕರ್ನಾಟಕ ನೀರಾವರಿ ನಿಗಮ ನಿಯಮಿತದ 107ನೇ ನಿರ್ದೇಶಕರ ಮಂಡಳಿ ಸಭೆ #pratidhvani

ಈ ಪ್ರಕರಣದಲ್ಲಿ ಇಷ್ಟೊಂದು ಮುತುವರ್ಜಿ ವಹಿಸಿದ್ದ ಪೊಲೀಸರು ವಿಜಯಲಕ್ಷ್ಮಿ ದೂರಿನ ಬಗ್ಗೆ ಯಾಕೆ ಗಮನ ವಹಿಸಿಲ್ಲ ಎನ್ನುವುದು ಕೆಲ ದರ್ಶನ್‌ ಅಭಿಮಾನಿಗಳ ಪ್ರಶ್ನೆಯಾಗಿದೆ. ನಟಿ ರಮ್ಯಾ ಕಾಂಗ್ರೆಸ್‌ ಪಕ್ಷದವರೇ ಆದ ಕಾರಣ ರಾಜ್ಯ ಸರ್ಕಾರದ ಗೃಹ ಇಲಾಖೆ ಹಾಗೂ ಪೊಲೀಸರು ಅಷ್ಟೊಂದು ಪ್ರಾಮುಖ್ಯತೆ ನೀಡಿದರೆ..? ವಿಜಯಲಕ್ಷ್ಮಿ ಪತಿ ದರ್ಶನ್‌ ಜೈಲಿನಲ್ಲಿರುವ ಕಾರಣ ಆಕೆಗೆ ಮಾನಸಿಕ ಹಿಂಸೆ ನೀಡಿದರೂ ಕೂಡ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕಿದರೇ ಎನ್ನುವ ಪ್ರಶ್ನೆಗಳು ಉದ್ಭವವಾಗಿದ್ದು, ದರ್ಶನ್‌ ಅಭಿಮಾನಿಗಳು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಟ್ಟ ಕಮೆಂಟ್‌ ಹಾಕಿ ವಿಕೃತಿ ಮರೆದವರನ್ನು ಮಟ್ಟಹಾಕುತ್ತಾರಾ ಕಾದು ನೋಡಬೇಕಿದೆ.

Tags: bengaluru policeCCB PoliceDarshanPoliceramyasandalwoodSocial Mediavijayalakshmi
Previous Post

ನನ್ನ ದೂರು ಮುಖ್ಯವಲ್ಲವೇ?: ಪೊಲೀಸರ ವಿರುದ್ಧ ದರ್ಶನ್‌ ಪತ್ನಿ ನೇರ ಅಸಮಾಧಾನ..!

Next Post

ʼರಾಜ್ಯ ಗುರುಧರ್ಮ ಪ್ರಚಾರʼ ಯುವಜನ ಸಭಾ ಅಧ್ಯಕ್ಷರಾಗಿ ಕೆ.ಗೋಪಿ ಕೃಷ್ಣಪ್ಪ ನೇಮಕ

Related Posts

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ
ಕರ್ನಾಟಕ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

by ಪ್ರತಿಧ್ವನಿ
March 5, 2026
0

ಬೆಂಗಳೂರು: ಮೀಸಲಾತಿ ಹಾಗೂ ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧತೆಯಿಲ್ಲದೆ ನಡೆದುಕೊಳ್ಳುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಶೀಘ್ರದಲ್ಲೇ ರಾಜ್ಯಾದ್ಯಂತ ದೊಡ್ಡ...

Read moreDetails
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
Next Post
ʼರಾಜ್ಯ ಗುರುಧರ್ಮ ಪ್ರಚಾರʼ ಯುವಜನ ಸಭಾ ಅಧ್ಯಕ್ಷರಾಗಿ ಕೆ.ಗೋಪಿ ಕೃಷ್ಣಪ್ಪ ನೇಮಕ

ʼರಾಜ್ಯ ಗುರುಧರ್ಮ ಪ್ರಚಾರʼ ಯುವಜನ ಸಭಾ ಅಧ್ಯಕ್ಷರಾಗಿ ಕೆ.ಗೋಪಿ ಕೃಷ್ಣಪ್ಪ ನೇಮಕ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada