• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‘ಬೀದಿ ನಾಯಿಗಳು ಇಷ್ಟವಾದವರು ಮನೆಗೆ ಯಾಕೆ ಕರೆದೊಯ್ಯಲ್ಲ’

ಪ್ರತಿಧ್ವನಿ by ಪ್ರತಿಧ್ವನಿ
January 14, 2026
in ದೇಶ
0
‘ಬೀದಿ ನಾಯಿಗಳು ಇಷ್ಟವಾದವರು ಮನೆಗೆ ಯಾಕೆ ಕರೆದೊಯ್ಯಲ್ಲ’
Share on WhatsAppShare on FacebookShare on Telegram

ಬೆಂಗಳೂರು: ಬೀದಿ ನಾಯಿಗಳ ಮೇಲೆ ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆಯಲ್ಲಿ ಏಕೆ ಸಾಕುತ್ತಿಲ್ಲ..? ಎಂದು ಶ್ವಾನಪ್ರಿಯರು ಹಾಗೂ ನಾಯಿ ಪ್ರಿಯ ಸಂಸ್ಥೆಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಾಗೆ ಬೀದಿ ನಾಯಿಗಳ ದಾಳಿಗೆ ಒಳಗಾದವರಿಗೆ ಭಾರೀ ಪರಿಹಾರ ನೀಡುವಂತೆ ಸರ್ಕಾರಗಳಿಗೆ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ಆದೇಶಿಸುತ್ತೇವೆ ಎಂದು ಹೇಳಿದೆ.

ADVERTISEMENT
Zameer Ahmed: ಸಿಎಲ್‌ಪಿ ಸಭೆಯಲ್ಲಿ 5 ವರ್ಷಕ್ಕೆ ಸಿದ್ರಾಮಯ್ಯನವರು ಮುಖ್ಯಮಂತ್ರಿ ಆಗಿರೋದು #pratidhvani

ಬೀದಿ ನಾಯಿ ನಿಯಂತ್ರಣ ನಿಯಮವನ್ನು ಅನುಷ್ಠಾನಕ್ಕೆ ತರದೆ ಕಳೆದ 5 ವರ್ಷಗಳಿಂದ ಸುಮ್ಮನೆ ಕೂತಿರುವ ಸರ್ಕಾರಗಳ ವಿರುದ್ಧ ಹಾಗೂ ಕೆಲ ಸಂಘ ಸಂಸ್ಥೆಗಳು ಮತ್ತು ಶ್ವಾನಪ್ರಿಯರ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ಗರಂ ಆಗಿದೆ.

ಬೀದಿನಾಯಿ ಹಾವಳಿಗೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್‌ ಮೆಹ್ರಾ ಮತ್ತು ಎನ್.ವಿ.ಅಂಜಾರಿಯಾ ಅವರ ನೇತೃತ್ವದ ನ್ಯಾಯಪೀಠವು, ಕಳೆದ ಐದು ವರ್ಷಗಳಿಂದ ಬೀದಿನಾಯಿ ಹಾವಳಿ ತಡೆಗಾಗಿ ನಿಯಮಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿತು.

Zameer Ahmed : ಬಿಜೆಪಿ ನಾಯಕರಿಗೆ ಸವಾಲ್‌ ಹಾಕಿದ ಸಚಿವ ಜಮೀರ್‌..! #janardhanreddy #sriramulu #pratidhvani

ನ್ಯಾಯಮೂರ್ತಿ ವಿಕ್ರಮ್ ನಾಥ್, ‘ನಾಯಿ ಕಡಿತದಿಂದ ಜನರಿಗೆ ಗಾಯವಾದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ರಾಜ್ಯ ಸರ್ಕಾರಗಳಿಂದ ಭಾರಿ ಪರಿಹಾರ ಕೇಳಬೇಕಾಗುತ್ತದೆ. ಅಂಥ ಪ್ರಕರಣಗಳಲ್ಲಿ ನಾಯಿಗಳಿಗೆ ಆಹಾರ ನೀಡುವವರು ಮತ್ತು ನಾಯಿ ಪ್ರೇಮಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಬೀದಿನಾಯಿಗಳನ್ನು ಅಷ್ಟೊಂದು ಪ್ರೀತಿಸುವವರು, ಅವುಗಳನ್ನು ಮನೆಗೆ ಏಕೆ ಕೊಂಡೊಯ್ಯುವುದಿಲ್ಲ? ಆ ನಾಯಿಗಳೇಕೆ ಅಲೆದಾಡುತ್ತಾ ಜನರನ್ನು ಬೆದರಿಸುತ್ತವೆ ಮತ್ತು ಕಚ್ಚುತ್ತವೆ’ ಎಂದು ಪ್ರಶ್ನಿಸಿದರು.

EX-clusive Podcast with Malavalli Shivanna : ಸಿದ್ದರಾಮಯ್ಯಗೆ ಭ್ರಷ್ಟಾಚಾರ ಅಂದ್ರೆ ಅಲರ್ಜಿ..! #pratidhvani

ನ್ಯಾ. ವಿಕ್ರಮ್ ನಾಥ್ ಮಾತಿಗೆ ದನಿಗೂಡಿಸಿದ ನ್ಯಾಯಮೂರ್ತಿ ಮೆಹ್ರಾ, ‘ನಾಯಿಯೊಂದು ಒಂಬತ್ತು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದಾಗ ಯಾರನ್ನು ಹೊಣೆಗಾರರನ್ನಾಗಿಸುವುದು? ನಾಯಿಗೆ ಅನ್ನ ಹಾಕಿದ ಸಂಸ್ಥೆಯನ್ನೇ? ಸಮಸ್ಯೆ ಹೀಗಿದ್ದರೂ ನಾವು ಕಣ್ಣುಮುಚ್ಚಿ ಕೂರಬೇಕೆಂದು ನೀವು ಬಯಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

DKS on Rahul Gandhi: ಏರ್​ಪೋರ್ಟ್​ ರಾಹುಲ್​​ ಗಾಂಧಿ ಜೊತೆ ಪ್ರತ್ಯೇಕವಾಗಿ ಏನೇನ್ ಚರ್ಚಿಸಿದ್ರಿ ಸರ್?

ಗುಜರಾತ್‌ನಲ್ಲಿ ವಕೀಲರೊಬ್ಬರಿಗೆ ಬೀದಿ ನಾಯಿ ಕಚ್ಚಿದ್ದು, ಆ ನಾಯಿಗಳನ್ನು ಹಿಡಿಯಲು ಸಂಬಂಧಪಟ್ಟವರು ಹೋಗಿದ್ದರು. ಆಗ ಶ್ವಾನಪ್ರೇಮಿ ಎಂದು ಕರೆಸಿಕೊಂಡ ಕೆಲ ವಕೀಲರೇ ಸೇರಿಕೊಂಡು ಪ್ರಾಧಿಕಾರದವರಿಗೆ ಹಲ್ಲೆ ನಡೆಸಿದ್ದು ಬೇಸರದ ಸಂಗತಿ ಎಂದು ನ್ಯಾ. ಮೆಹ್ತಾ ಹೇಳಿದರು. ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳ ತೆರವುಗೊಳಿಸುವಂತೆ ಕಳೆದ ನ.7ರಂದು ತಾನು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Tags: Street Dogs issueSupreem court
Previous Post

ಪಕ್ಷದ ನಾಯಕರ ಜೊತೆಗಿನ ಮಾತುಕತೆ ಬಗ್ಗೆ ಬಹಿರಂಗ ಚರ್ಚೆ ಇಲ್ಲ: ಡಿ.ಕೆ ಶಿವಕುಮಾರ್

Next Post

ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Related Posts

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..
Top Story

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

by ಪ್ರತಿಧ್ವನಿ
March 3, 2026
0

ಬೆಂಗಳೂರು : ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಇಂಧನ ಸಚಿವ ಕೆ.ಜೆ. ಜಾಋಜ್ ಜನರ ಸಮಸ್ಯೆಗಳನ್ನು ಆಲಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ...

Read moreDetails
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

“ನನ್ನ, ಡಿಕೆಶಿ ಸಂಬಂಧ ಹಾಲು-ಜೇನಿನಂತಿದೆ, ಹುಳಿ ಹಿಂಡಿದ್ರೆ ನಿಮ್ಮ ಹುಳಿ ಮುಗಿಯುತ್ತೆ, ಹೊರತು ನಮ್ಮ ಸಂಬಂಧಕ್ಕೆ ಏನೂ ಆಗಲ್ಲಾ”

March 3, 2026
ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

March 3, 2026
Next Post
ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada