ಬೆಂಗಳೂರಿನ ಗಾಂಧಿ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ಹಾಗೂ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ ಎಸ್ ಅನ್ನು ದೆವ್ವಕ್ಕೆ ಹೋಲಿಸಿ ಮಾತನಾಡಿದ್ದಾರೆ.

ಆರ್.ಎಸ್.ಎಸ್ ದೆವ್ವವಿದ್ದಂತೆ. ಬಿಜೆಪಿ ದೆವ್ವದ ನೆರಳು. ನಾವು ನೆರಳಿನ ಜೊತೆ ಹೋರಾಟ ಮಾಡಬಾರದು. ದೆವ್ವದ ಜೊತೆ ಹೋರಾಟ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ.

ಆರ್.ಎಸ್.ಎಸ್ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮೂರು ಮಕ್ಕಳನ್ನು ಹೇರಬೇಕು ಎನ್ನುತ್ತಾರೆ. ಆದರೆ ಅವರು ಮಾತ್ರ ಬ್ರಹ್ಮಚಾರಿಯಾಗಿರುತ್ತಾರೆ. ಇದ್ಯಾವ ರೀತಿ? ಎಂದು ಪ್ರಶ್ನೆ ಮಾಡಿದ್ದಾರೆ.

ಆರ್ ಎಸ್ ಎಸ್ ಡೊನೆಷನ್ ತೆಗೆದುಕೊಳ್ಳಲ್ಲ. ಆದರೆ ಗುರುದಕ್ಷಿಣೆ ತೆಗೆದುಕೊಳ್ಳುತ್ತಾರೆ. ಗುರುದಕ್ಷಿಣೆ ಅಂದರೆ ಧ್ವಜದ ಹೆಸರಲ್ಲಿ ಹಣ ಸಂಗ್ರಹಿಸುತಾರೆ.ಆರ್ಎಸ್ಎಸ್ ಇಂದಲ್ಲ ನಾಳೆ ರಿಜಿಸ್ಟರ್ ಆಗಬೇಕು. ನಾನು ಮಾಡಿಸುತ್ತೇನೆ.ಅವರಿಗೆ ಎಲ್ಲಿಂದ ಇಷ್ಟೊಂದು ದುಡ್ಡು ಬರುತ್ತದೆ. ಅವರು ತೆರಿಗೆಯನ್ನೂ ಕಟ್ಟುತ್ತಿಲ್ಲ.ಆರ್.ಎಸ್.ಎಸ್ ನವರು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದಾರೆ, ಯಾವುದೇ ಟ್ಯಾಕ್ಸ್ ಕಟ್ಟುತ್ತಿಲ್ಲ. ಆರ್.ಎಸ್.ಎಸ್ ಇಲ್ಲಾ ಎಂದರೆ ಬಿಜೆಪಿ ಜೆಡಿಎಸ್ ಗಿಂತ ಕಡೆಯಾಗಲಿದೆ ಎಂದು ಹೇಳಿದ್ದಾರೆ.






