ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರ ರ್ಯಾಲಿಗೆ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆ ಅಡ್ಡಿಯಾಗಿ ಅವರು ಪ್ರವಾಸ ಮೊಟಕುಗೊಳಿಸಿ ವಾಪಸ್ ಆದ ವಿಷಯ ಇದೀಗ ರಾಜಕೀಯ ಕೆಸರೆರಚಾಟದ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ಈಗ ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಸಾಲು ಸಾಲು ಪ್ರಶ್ನೆಯನ್ನು ಮೋದಿಯವರ ಮುಂದಿರಿಸಿದ್ದಾರೆ.
ಈ ಕುರಿತು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೋದಿಯವರೆ, ಇನ್ನೆಷ್ಟು ದಿನ ನಿಮ್ಮ RSS ಕೃಪಾಪೋಷಿತ ನಾಟಕ ಮಂಡಳಿಯ ಅತಿ ಮುಖ್ಯ ಪಾತ್ರಧಾರಿಯಾಗ್ತೀರಿ.? ನೀವು 42,570 ಕೋಟಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲು ಪಂಜಾಬ್‌ನ ಫಿರೋಜ್‌ಪುರಕ್ಕೆ ಹೋಗುವುದಿತ್ತು. ಆ Rally ಯಲ್ಲಿ 70 ಸಾವಿರ ಜನ ಸೇರುವ ನಿರೀಕ್ಷೆಯಿತ್ತು. ಆದರೆ ಸೇರಿದ್ದು 700 ಜನ ಮಾತ್ರ. ಆಗ ರೂಟ್ ಮ್ಯಾಪ್ ಬದಲಾಗಿದ್ಯಾಕೆ.? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೇ ನೀವು ಪ್ರಧಾನಿಯಾದರೂ ನಿಮ್ಮನ್ನು ಆಡಿಸುವ ಸೂತ್ರಧಾರ ಯಾರು.? ನೀವ್ಯಾರ ಕೀಲುಗೊಂಬೆ ಎಂದು ಜಗತ್ತಿಗೆ ಗೊತ್ತಿದೆ. ಆದರೂ ನೀವು ಪ್ರಧಾನಿಯಾಗುವ ಮೊದಲು CM ಆದವರು. ಹೆಲಿಕಾಪ್ಟರ್‌ನಲ್ಲಿ ಹೋಗಬೇಕಾಗಿದ್ದ ನೀವು ಕೇವಲ 20 ನಿಮಿಷದಲ್ಲಿ ರೂಟ್‌ಮ್ಯಾಪ್ ಚೇಂಜ್ ಮಾಡಿದರೆ, ಪಂಜಾಬ್ CM ಮ್ಯಾಟ್ರಿಕ್ಸ್‌ನಂತೆ ಮ್ಯಾಜಿಕ್ ಮಾಡಬೇಕೆ.? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೇ ನೀವು BJPಯವರು ಎನ್ನುವುದಕ್ಕಿಂತ, ನೀವು ಈ ದೇಶದ ಪ್ರಧಾನಿ ಎಂಬ ಅಭಿಮಾನ ಮತ್ತು ಗೌರವ ನಮ್ಮ ಪಕ್ಷಕ್ಕಿದೆ. VVIP ಗಳ ಭದ್ರತಾ ವ್ಯವಸ್ಥೆ SPG ಯವರದ್ದು. ಹುಸೈನಿವಾಲದ ಹುತಾತ್ಮರ ಸ್ಮಾರಕಕ್ಕೆ ನೀವು ಭೇಟಿ ನೀಡುವುದು SPG ಯವರ TPಯಲ್ಲಿರುತ್ತದೆ. ಅದ್ಯಾಕೆ ನೀವು ಹೆಲಿಕಾಪ್ಟರ್ ಮಾರ್ಗ ಬಿಟ್ಟು ರಸ್ತೆ ಮಾರ್ಗ ಆರಿಸಿಕೊಂಡಿರಿ.? ಎಂದಿದ್ದಾರೆ.
ಪ್ರಿಯ ಮೋದಿಯವರೆ, ನಿಮ್ಮ ವಿರುದ್ಧ ಪಂಜಾಬ್‌ನ ರೈತರು ಸಿಡಿದಿರುವುದು ನಿಮಗೆ ಗೊತ್ತಿತ್ತು. ನಿಮ್ಮ ಆಗಮನ ಅಲ್ಲಿಯ ರೈತರನ್ನು ರೊಚ್ಚಿಗೆಬ್ಬಿಸಿತ್ತು. ಆದರೂ ಹುಸೈನಿವಾಲಕ್ಕೆ ವಾಯುಮಾರ್ಗದಲ್ಲಿ ತೆರಳಬೇಕಿದ್ದ ನೀವು ಹವಾಮಾನದ ಕಾರಣ ನೀಡಿ ಪ್ರತಿಭಟನಾಕಾರರು ಇರುವ ರಸ್ತೆ ಮಾರ್ಗವನ್ನೇ ಆರಿಸಿಕೊಂಡಿದ್ಯಾಕೆ.? ಸಿಂಪಥಿ ಪಡೆಯುವ ನಾಟಕವೆ ಇದು.? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೆ, ಪಂಜಾಬ್‌ನಲ್ಲಿ ನಡೆದ ಘಟನೆಯ ಬಗ್ಗೆ ನಿಮ್ಮ ಪಕ್ಷದ ನಾಯಕರು ಇದು ಕಾಂಗ್ರೆಸ್ ಪಕ್ಷದ ಪಿತೂರಿ ಎಂದು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಮಾನವೀಯತೆಯ ಮೇಲೆ ನಂಬಿಕೆ ಇಟ್ಟಿದೆ. ದಯವಿಟ್ಟು ನಿಮ್ಮ ಪಕ್ಷದವರಿಗೂ ಮಾನವೀಯತೆಯ ಪಾಠ ಕಲಿಸಿ. ಕೊಂದು ಉಳಿಸಿಕೊಳ್ಳುವ ಧರ್ಮ ಜಗತ್ತಿನಲ್ಲೇ ಇಲ್ಲ ಎಂಬುದು ಕಾಂಗ್ರೆಸ್‌ಗೂ ಅರಿವಿದೆ.
IB,RAW,CBI,ಮಿಲಿಟರಿ ಇಂಟಲಿಜೆನ್ಸ್, ಅಷ್ಟ್ಯಾಕೆ NSA ಮುಖ್ಯಸ್ಥರು ಕೂಡ PMಗೆ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಪಂಜಾಬ್ ಘಟನೆಯ ಬಗ್ಗೆ ಅವರ್ಯಾರು PMಗೆ ಪೂರ್ವಭಾವಿ ಮಾಹಿತಿಯೇ ಕೊಡಲಿಲ್ಲವೆ.? ಒಂದು ವೇಳೆ ಆ ಮಾಹಿತಿ PMಗೆ ಇಲ್ಲವೆಂದರೆ ಅದು ಪಂಜಾಬ್ ರಾಜ್ಯ ಸರ್ಕಾರದ ಭದ್ರತಾ ಲೋಪವೋ?ಅಥವಾ ಕೇಂದ್ರ ಸರ್ಕಾರದ ಲೋಪವೋ. ಭದ್ರತಾ ಲೋಪ ಯಾರದ್ದು.? ಎಂದು ಮೋದಿಯನ್ನು ಸಾಲು ಸಾಲು ಪ್ರಶ್ನೆಯನ್ನು ಮುಂದಿರಿದ್ದಾರೆ.