ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಜನ ಕಾಳಜಿ ಹಾಗೆ ಆರೈಕೆಯನ್ನು ಮಾಡಿಕೊಳ್ಳುತ್ತಾರೆ. ಕೆಲವರು ಮನೆಯಲ್ಲಿ ಹೋಂ ರೆಮಿಡಿಸನ್ನ ಬಳಸ್ತಾರೆ. ಇನ್ನು ಕೆಲವರು ಸಲೂನ್ ಗೆ ಹೋಗಿ ಫೇಶಿಯಲ್, ಫೇಸ್ ಪ್ಯಾಕ್ ,ಸ್ಕ್ರಬ್ ಇವೆಲ್ಲವನ್ನು ಕೂಡ ಮಾಡಿಸಿಕೊಡುತ್ತಾರೆ.ಕಾರಣ ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತದೆ,ಹೊಳಪು ಹೆಚ್ಚುತ್ತದೆ. ಇನ್ನು ತಿಂಗಳಿಗೆ ಒಮ್ಮೆಯಾದ್ರು ಫೇಶಿಯಲ್ ಮಾಡಿಸಿಕೊಳ್ಳಲು ಉತ್ತಮ..ಇನ್ನು ಫೇಶಿಯಲ್ ಮಾಡಿಸಿಕೊಂಡ ೨೪ ಗಂಟೆಗಳ ವರೆಗು ಈ ಕೆಲಸಗಳನ್ನು ಮಾಡಬಾರದು.

ಫೇಸ್ ವಾಶ್
ಫೇಶಿಯಲ್ ಮಾಡಿಸಿಕೊಂಡ ೨೪ ಗಂಟೆಗಳ ವರೆಗು ಕಠಿಣ ಉತ್ಪನ್ನಗಳನ್ನು ಬಳಸಿ ಮುಖ ತೊಳೆಯುವುದನ್ನು ತಪ್ಪಿಸಿ.ಬದಲಿಗೆ ತಣ್ಣೀರಿಂದ ಮುಖ ತೊಳೆಯಿರಿ..ಕಾರಣ ಫೇಶಿಯಲ್ ಮಾಡಿಸಿಕೊಂಡಾಗ ಮುಖದ ತ್ವಚೆ ತುಂಬಾನೆ ಮೃದುವಾಗಿರುತ್ತದೆ.

ಎಫ್ಫೋಲಿಯೇಟ್ ಮಾಡಬೇಡಿ
ಫೇಶಿಯಲ್ ಬಳಿಕ ಮುಖಕ್ಕೆ ಯಾವುದೇ ರೀತಿಯ ಸ್ಕ್ರಬ್ ಗಳನ್ನ, ಕೆಮಿಕಲ್ಸ್ ಹೆಚ್ಚಿರುವ ಪ್ರಾಡಕ್ಟ್ ಗಳನ್ನ ಯೂಸ್ ಮಾಡಬೇಡಿ. ಬ್ರಷಸ್ ಇಂದ ಮುಖವನ್ನು ಉಜ್ಜಬೇಡಿ.

ಸೂರ್ಯನ ಕಿರಣಗಳು
ಫೇಶಿಯಲ್ ಬಳಿಕ ಸೂರ್ಯನ ಕಿರಣಗಳಿಗೆ ತ್ವಚೆಯನ್ನು ಒಡ್ಡಬೇಡಿ. ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಬಳಸಿ.ಇದರಿಂದ ತ್ವಚೆಗೆ ಹಾನಿಯಾಗುವುದಿಲ್ಲ.
ಮೇಕಪ್
ಫೇಶಿಯಲ್ ಮಾಡಿಕೊಂಡ 24 ಗಂಟೆಯವರೆಗೂ ಹೆವಿ ಮೇಕಪ್ ಅನ್ನು ಬಳಸುವುದು ಒಳ್ಳೆಯದಲ್ಲ. ಜೊತೆಗೆ ಯಾವುದೇ ಕಾರಣಕ್ಕೂ ಕೂದಲಿಗೆ ಬಳಸುವಂತಹ ಸ್ಪ್ರೇಗಳನ್ನ ಕೂಡ ಉಪಯೋಗಿಸಬೇಡಿ.
ಇದೆಲ್ಲದರ ಜೊತೆಗೆ ಆಗಾಗ ತ್ವಚೆಯನ್ನ ಮುಟ್ಟುವಂಥದ್ದು ಹಾಗೂ ಪಿಂಪಲ್ಸ್ ಗಳಿದ್ದಾಗ ಅದನ್ನ ಮುಟ್ಟುವಂತದ್ದು ಮಾಡಿದಾಗ ತ್ವಚೆಗೆ ಹಾನಿಯಾಗುತ್ತದೆ.