ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಬೆಂಗಳೂರು ಪೊಲೀಸ್ ಕಮಿಷನರ್ಗೆ 43 ಖಾತೆಗಳನ್ನು ಉಲ್ಲೇಖಿಸಿ 4 ಪುಟಗಳ ದೂರು ನೀಡಿದ್ದರು.

12 ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ ಆಧರಿಸಿ ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಮಾಡಲಾಗಿದೆ. ಇಂದಿನಿಂದ ಟ್ರಯಲ್ ಆರಂಭಿಸಿರೋ ಸೆಷನ್ಸ್ ಕೋರ್ಟ್, ಪ್ರಕರಣದ ಮೊದಲ ಸಾಕ್ಷಿ ಆಗಿರೋ ದೂರುದಾರೆ ರಮ್ಯಾ ಸೇರಿ ಮೂವರಿಗೆ ಸಮನ್ಸ್ ಜಾರಿ ಮಾಡಿತ್ತು.

ಸಮನ್ಸ್ ಜಾರಿ ಹಿನ್ನಲೆ ಇಂದು ನಟಿ ರಮ್ಯಾ ಕೋರ್ಟ್ಗೆ ಹಾಜರಾಗಿದ್ದು, ರಮ್ಯಾ ವಿಚಾರಣೆ ನಡೆಸಿದ ಬಳಿಕ ನಟಿ ರಮ್ಯಾ ಹೇಳಿಕೆ ನೀಡಿದ್ದಾರೆ. ಇವತ್ತು ಎವಿಡೆನ್ಸ್ ಕೊಡಬೇಕಿತ್ತು ಅದಕ್ಕೆ ಬಂದಿದ್ದೆ ನನಗೆ ಆರೋಪಿಗಳನ್ನ ನೋಡಿದ್ರೆ ಬೇಜಾರ್ ಆಗುತ್ತೆ ಎಂದು ನಟಿ ರಮ್ಯಾ ಹೇಳಿದ್ದಾರೆ.ಹೆಣ್ಣು ಮಕ್ಕಳ ವಿಚಾರದಲ್ಲಿ ಎಲ್ಲರು ಒಳ್ಳೆಯ ರೀತಿಯ ನಡೆದುಕೊಳ್ಳಬೇಕು, ಜೊತೆಗೆ ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಬೆದರಿಕೆ ಹಾಕುವವರಿಗೆ ಒಂದ ಭಯ ಬರಬೇಕು ಅನ್ನೋ ಕಾರಣಕ್ಕೆ ನಾನು ಈ ತೀರ್ಮಾನ ಮಾಡಿದ್ದೇವೆ ಎಂದು ರಮ್ಯಾ ಹೇಳಿದ್ದಾರೆ.

ಇದನ್ನ ಹೀಗೆ ಬಿಟ್ಟು ಬಿಟ್ರೆ ಮುಂದೆ ಆದೇ ರೀತಿ ಚಾಳಿ ಮುಂದುವರೆಸುತ್ತಾರೆ ಅನ್ನೋ ಕಾರಣಕ್ಕೆ ಎಲ್ಲಾ ಹೆಣ್ಣುಮಕ್ಕಳ ಪರವಾಗಿ ಈ ಕೇಸ್ ಮುಂದುವರೆಸುತ್ತಿದ್ದೇನೆ ಎಂದು ನಟಿ ರಮ್ಯಾ ಹೇಳಿಕೆ ನೀಡಿದ್ದಾರೆ.






