• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಂದರ್ಶಕನ ಪ್ರಶ್ನೆಗೆ ಸಿಡಿಮಿಡಿಗೊಂಡ ಜಗ್ಗಿ ವಾಸುದೇವ್ : ಕೆಮರಾ ಆಫ್‌ ಮಾಡುವಂತೆ ಸೂಚನೆ

Any Mind by Any Mind
June 12, 2022
in ದೇಶ
0
ಸಂದರ್ಶಕನ ಪ್ರಶ್ನೆಗೆ ಸಿಡಿಮಿಡಿಗೊಂಡ ಜಗ್ಗಿ ವಾಸುದೇವ್ : ಕೆಮರಾ ಆಫ್‌ ಮಾಡುವಂತೆ ಸೂಚನೆ
Share on WhatsAppShare on FacebookShare on Telegram

ಜನಪ್ರಿಯ ಸ್ವಯಂ-ಘೋಷಿತ ದೇವಮಾನವ ಜಗ್ಗಿ ವಾಸುದೇವ್‌ ಅಲಿಯಾಸ್‌ ʼಸದ್ಗುರುʼ ಅವರು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ಕೋಪಗೊಂಡಿದ್ದು, ಕೆಮರಾ ಆಫ್‌ ಮಾಡುವಂತೆ ಎಗರಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಜಗ್ಗಿ ವಾಸುದೇವ್‌ ಸ್ಥಾಪಿಸಿರುವ ಇಶಾ ಫೌಂಡೇಶನ್‌ ಸಂಸ್ಥೆಯ ಯೋಜನೆಯೊಂದರಲ್ಲಿ ಕಾನೂನು ಉಲ್ಲಂಘನೆಯ ಕುರಿತಂತೆ ನಿರೂಪಕ ಸದ್ಗುರುವನ್ನು ಪ್ರಶ್ನಿಸಿದ್ದು, ಈ ಪ್ರಶ್ನೆಯಿಂದ ವಿಚಲಿತರಾದ ಜಗ್ಗಿ ವಾಸುದೇವ್ ಸಿಡಿಮಿಡಿಗೊಂಡಿದ್ದಾರೆ. ಮಾತ್ರವಲ್ಲ, ನಿರೂಪಕನಲ್ಲಿ ಸುಮ್ಮನಿರುವಂತೆ ಸೂಚಿಸಿ, ತನ್ನ ಜನರಲ್ಲಿ ಕೆಮರಾ ಬಂದ್‌ ಮಾಡಿ ಎಂದು ಹೇಳುವುದು ವೈರಲ್‌ ಆಗಿರುವ ವಿಡಿಯೋದಲ್ಲಿ ಕಂಡು ಬಂದಿದೆ.

ADVERTISEMENT

ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್‌ ಸಂಸ್ಥೆಯ ಯೋಜನೆಗಳಿಗೆ ಪರಿಸರ ಅನುಮತಿಯನ್ನು ಏಕೆ ಪಡೆದಿಲ್ಲ ಎಂದು ʼಬಿಬಿಸಿ ತಮಿಳುʼ ವಾಹಿನಿಯ‌ ನಿರೂಪಕ ಸದ್ಗುರು ಬಳಿ ಪ್ರಶ್ನಿಸಿದ್ದಾರೆ. ಇದರಿಂದ ಇರಿಸು-ಮುರಿಸುಗೊಳಗಾದ ಜಗ್ಗಿ ವಾಸುದೇವ್‌, “ಯಾವುದೇ ಅಕ್ರಮ ನಡೆದಿಲ್ಲ, ಎಲ್ಲವೂ ಪರಿಪೂರ್ಣವಾಗಿದೆ ಎಂದು ಸರಕಾರ ಹೇಳಿದೆ….ಈ ನೆಲದಲ್ಲಿ ಕಾನೂನು ಇಲ್ಲವೇ? ಸರಕಾರ ಇಲ್ಲವೇ? ಅವರ ಕೆಲಸ ಅವರೇ ಮಾಡಲಿ. ನೀವು ಏನಕ್ಕೆ ಮಾಡುತ್ತಿದ್ದೀರಿ?” ಎಂದು ಪ್ರಶ್ನೆಗೆ ಮರು ಪ್ರಶ್ನೆ ಹಾಕಿ ಸಂದರ್ಶಕನನ್ನು ಮೌನವಾಗಿಸಲು ಪ್ರಯತ್ನಿಸಿದ್ದಾರೆ.

ಆದರೆ, ವಾಸುದೇವ್ ಪ್ರಯತ್ನಕ್ಕೆ ಹಿಂಜರಿಯದ ಸಂದರ್ಶಕ “ನಿಮಗೆ ಪರಿಸರದ ಬಗ್ಗೆ ತುಂಬಾ ಕಾಳಜಿ ಇದ್ದರೆ, ನೀವು ಈ ಕಟ್ಟಡಗಳನ್ನು ಪ್ರಾರಂಭಿಸುವ ಮೊದಲು ಏಕೆ ಸರಿಯಾದ ರೀತಿ ಅನುಮತಿ ತೆಗೆದುಕೊಳ್ಳಬಾರದು?” ಎಂದು ಪುನಃ ಪ್ರಶ್ನಿಸಿದ್ದಾರೆ.

Esha Yoga Jaggi Vasudev become violent once the BBC Tamil asked about allegations about the violations of Esha in Coimbatore hill area.

It's really funny to see that those who are all preaching about Yoga and its power looses the coolness once you touched allegations of them.😁 https://t.co/jyXEc9u8Da

— 𝓢𝓪𝓷𝓴𝓪𝓻 (@CodeNDrive) June 10, 2022

ಸಂದರ್ಶಕ ತನ್ನ ಪ್ರಶ್ನೆಯಿಂದ ಹಿಂದೆ ಸರಿಯದಾದಾಗ, “ನಿಮ್ಮ ನಾನ್ಸೆನ್ಸ್ ನೀವು ಹೇಳುತ್ತಿರುವಿರಿ … ಅವರ ಕ್ಯಾಮೆರಾವನ್ನು ಆಫ್ ಮಾಡಿ. ಸಾಕು … ಕೇಳು, ಮನುಷ್ಯ, ನನ್ನ ಮಾತುಗಳನ್ನು ಕೇಳು. ದೇಶದಲ್ಲಿ ಇರುವ ಪ್ರತಿಯೊಂದು ಕಾನೂನನ್ನು ಅನುಸರಿಸಲಾಗಿದೆ. ಸಣ್ಣ ಪುಟ್ಟ ತಕರಾರಿದ್ದದ್ದನ್ನು ಬಹಳ ಹಿಂದೆಯೇ, 20 ವರ್ಷಗಳ ಹಿಂದೆ, ಸರಿ ಮಾಡಿದ್ದೇವೆ…” ಎಂದು ವಾಸುದೇವ್ ಹೇಳಿದ್ದಾರೆ. ಆಗಲೇ ಮಧ್ಯಪ್ರವೇಶಿಸಿದ ಸಂದರ್ಶಕ, ನಾನು 2012 ರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ ಎನ್ನುತ್ತಾರೆ. ಈ ಹಂತದಲ್ಲಿ ಸಂದರ್ಶನವನ್ನು ಕಡಿತಗೊಳಿಸಲಾಗಿದೆ.

ಈ ವೇಳೆ “ಜಗ್ಗಿ ವಾಸುದೇವ್ ಜೊತೆಗಿದ್ದ ಜನರು BBC ಯ ಮೂರು ಕ್ಯಾಮೆರಾಗಳನ್ನು ಬಲವಂತವಾಗಿ ಬಂದ್‌ ಮಾಡಿದರು” ಎಂದು BBC ನ್ಯೂಸ್ ಹೇಳಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಡಿಬೇಟುಗಳಲ್ಲಿ ನಿರರ್ಗಳ ಮಾತನಾಡಿ ಜನಪ್ರಿಯರಾಗಿರುವ ಸ್ವಯಂಘೋಷಿತ ದೇವಮಾನವಜಗ್ಗಿ ವಾಸುದೇವ್‌ ಪತ್ರಕರ್ತರ ಒಂದು ಪ್ರಶ್ನೆಗೆ ಉತ್ತರಿಸದೆ ಕೆಮರಾ ಆಫ್‌ ಮಾಡಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

“Do not be under the impression that you are not bound by law because you are a spiritual organisation.”

Message to Jaggi: You can stop a journalist’s camera but you can’t stop the courts!https://t.co/zcKTGO8oUB via @thewire_in

— Siddharth (@svaradarajan) June 11, 2022

ಅಲ್ಲದೆ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಸ್ವಘೋಷಿತ ದೇವಮಾನವ ತನ್ನ ಭಕ್ತರಲ್ಲಿ ಸಿಟ್ಟಾಗದಂತೆ ಕರೆ ನೀಡುತ್ತಾರೆ, ಆದರೆ, ಸ್ವತಃ ಪಾಲಿಸುವುದಿಲ್ಲ ಎಂದು ನೆಟ್ಟಿಗರು ಸದ್ಗುರು ನಡೆಯನ್ನು ಟೀಕಿಸಿದ್ದಾರೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ನಮ್ಮ ಕುಟುಂಬ ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗೆ ಒಳಗಾಗುವ ಸಾಧ್ಯತೆ ಇದೆ : ನವೀನ್ ಜಿಂದಾಲ್ ಆತಂಕ

Next Post

ರಾಷ್ಟ್ರೀಯ ಅಭಿವೃದ್ಧಿಯ ಒಂದು ಕಾರ್ಯಸೂಚಿ

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ರಾಷ್ಟ್ರೀಯ ಅಭಿವೃದ್ಧಿಯ ಒಂದು ಕಾರ್ಯಸೂಚಿ

ರಾಷ್ಟ್ರೀಯ ಅಭಿವೃದ್ಧಿಯ ಒಂದು ಕಾರ್ಯಸೂಚಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada