ನಿನ್ನೆ ಗುಜರಾತ್‌ನ ವಡೋದರಾದಲ್ಲಿರುವ ಕೋಟಂಬಿಯ BCA ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಡೆಲ್ಲಿ ಕ್ಯಾಪಿಟಲ್ಸ್(DC) ವಿರುದ್ಧ ಆರು ವಿಕೆಟ್‌ಗಳ ಅದ್ಭುತ ಜಯ ಸಾಧಿಸಿದೆ.

ಈ ಐತಿಹಾಸಿಕ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷ ತಂಡದ ಪ್ರಮುಖ ಆಟಗಾರವಿರಾಟ್ ಕೊಹ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, ತಂಡದ ಸಾಧನೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.

ʼಮತ್ತೆ ಚಾಂಪಿಯನ್‌ಗಳು. RCB ಧ್ವಜವನ್ನು ಎತ್ತರಕ್ಕೆ ಹಾರಿಸಿದ್ದಕ್ಕಾಗಿ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ಸ್ಮೃತಿ ಮಂಧಾನ ಹಾಗೂ ಸಂಪೂರ್ಣ ತಂಡ ಮತ್ತು ಮ್ಯಾನೇಜ್‌ಮೆಂಟ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಗೆಲುವಿಗೆ ನೀವು ಸಂಪೂರ್ಣವಾಗಿ ಅರ್ಹರು. ಅಭಿಮಾನಿಗಳು ಈ ಅದ್ಭುತ ಕ್ಷಣವನ್ನು ಆನಂದಿಸಿʼಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

2024ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲುವ ಮೂಲಕ ಆರ್‌ಸಿಬಿ ಮಹಿಳಾ ತಂಡವು ಆರ್‌ಸಿಬಿ ಅಭಿಮಾನಿಗಳದೀರ್ಘಕಾಲದ ಟ್ರೋಫಿ ಕನಸನ್ನು ನನಸು ಮಾಡಿತ್ತು. ಇದರ ಬೆನ್ನಲ್ಲೇ 2025ರಲ್ಲಿ ಪುರುಷರ RCB ತಂಡವು ಐಪಿಎಲ್ ಟ್ರೋಫಿಯನ್ನೂ ಗೆದ್ದು, ಅಭಿಮಾನಿಗಳ ಕನಸು ನನಸು ಮಾಡುವುದರ ಜೊತೆಗೆ ಸಂಭ್ರಮದ ಹೊಳೆ ಹರಿಸಿತ್ತು. ವಿಶ್ವದ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾದ ಆರ್‌ಸಿಬಿಗೆ ಇದೀಗ ಮತ್ತೊಂದು ಟ್ರೋಫಿ ಸೇರ್ಪಡೆಯಾಗಿದ್ದು, ಅಭಿಮಾನಿಗಳು ಕಪ್ ಗೆದ್ದ ಖುಷಿಯಲ್ಲಿದ್ದಾರೆ.





