ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ (Bjp state president) ಸಂಬಂಧಪಪಟ್ಟಂತೆ ವಿಜಯೇಂದ್ರ (Vijayendra) & ಟೀಮ್ ಗೆ ದೆಹಲಿ ನಾಯಕರಿಂದ ಭರವಸೆ ಸಿಕ್ಕಂತೆ ಕಾಣುತ್ತಿದ್ದೆ. ಹೀಗಾಗಿಯೇ ಇಷ್ಟೂ ದಿನ ಸುಮ್ಮನಿದ್ದ ಬಿವೈ ವಿಜಯೇಂದ್ರ ಈಗ ವಿರೋಧಿ ಬಣದ ವಿರುದ್ಧ ಗುಡುಗಲು ಶುರು ಮಾಡಿದ್ದಾರೆ.
![](https://pratidhvani.com/wp-content/uploads/2025/02/IMG_7736.jpeg)
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮುಲು (Sri ramulu) ಪೈಪೋಟಿ ವಿಚಾರವಾಗಿ ಮಾತನಾಡಿದ ಬಿವೈ ವಿಜಯೇಂದ್ರ, ಅವರಿಗೆ ಪೈಪೋಟಿ ಕೊಡುವಷ್ಟು ದೊಡ್ಡ ಮನುಷ್ಯ ನಾನಲ್ಲ, ಶ್ರೀರಾಮುಲು, ಕಾರಜೋಳ, ಯಡಿಯೂರಪ್ಪ, ಅನಂತ್ ಕುಮಾರ ಹಿರಿಯರಿದ್ದಾರೆ ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2025/02/IMG_7650.jpeg)
ಹೀಗೆ ನಮ್ಮ ಪಕ್ಷದ ಅನೇಕ ಹಿರಿಯರ ಜೊತೆ ಶ್ರೀರಾಮುಲು ಪಕ್ಷ ಸಂಘಟನೆ ಮಾಡಿದ್ದಾರೆ ಅಂತ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಯಾರಾಗುತ್ತಾರೆ ಎಂದು ವರಿಷ್ಠರು ತೀರ್ಮಾನ ಮಾಡ್ತಾರೆ.ಹಲವು ಅಂಶಗಳನ್ನು ಆಧಾರವಾಗಿಟ್ಟು ಪಕ್ಷ ತೀರ್ಮಾನ ಮಾಡುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಟಕ್ಕರ್ ಕೊಟ್ಟಿದ್ದಾರೆ.