ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa moyli) ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ರನ್ನ (Dk Shivakumar) ಭೇಟಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇವಾಡಿಗ ಸಂಘದ ದೇವಾಡಿ ಸಂಘದ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಜನರಲ್ ಆಗಿ ರಾಜಕೀಯ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಧರ್ಮಸ್ಥಳದ ಮೇಲಿನ ಆರೋಪಗಳ ಕುರಿತು ಎಸ್ಐಟಿ ನೇಮಕ ಮಾಡಿದ್ದಾರೆ.ನಾವೆಲ್ಲ ಜವಾಬ್ದಾರಿ ಉಳ್ಳವರಾಗಿರೋದ್ರಿಂದ ಎಸ್ಐಟಿ ವರದಿ ಬರ್ಲಿ. ಆ ಮೇಲೆ ನೋಡೋಣ.. ಈ ಮಧ್ಯೆ ಇದೆಲ್ಲವೂ ಕಾಂಗ್ರೆಸ್ ಷಡ್ಯಂತ್ರ ಎಂಬ ಆರೋಪ ಮಾಡುತ್ತಿರುವ ಬಿಜೆಪಿಯವರೇ ವಾತಾವರಣ ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.

ಸ್ವತಃ ಧರ್ಮಸ್ಥಳದವರೇ ಎಸ್ಐಟಿಯನ್ನ ಸ್ವಾಗತ ಮಾಡಿದ್ದಾರೆ . ತನಿಖೆಯ ವರದಿ ಬರಲಿ ಅಲ್ಲಿವರೆಗೂ ಮಾತನಾಡಲ್ಲ ಎಂದು ಹೇಳಿದ್ದಾರೆ. ಆದ್ರೆ ಬಿಜೆಪಿ ಅವರಿಗೆ ತಿಳುವಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೇನು ಎಸ್ಐಟಿ ರಚನೆ ಮಾಡಿ ತನಿಖೆ ನಡೆದು ಅಂತಿಮ ವರದಿ ಬರುವಾಗ ಸಿಬಿಐ, ಎನ್ ಐಎ ಅಂತ ಹೇಳ್ತಾ ಹೋದ್ರೆ..ಇದರ ಅರ್ಥ ಬಿಜೆಪಿ ಅವ್ರಿಗೆ ಈ ಪ್ರಹಸನ ಮುಗಿಯುವುದು ಬೇಕಿಲ್ಲ. ಹೀಗಾಗಿ ಅವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.