ಸ್ಯಾಂಡಲ್‌ವುಡ್ ನ ಶೋಕ್ದಾರ್ ಧನ್ವೀರ್ (Danveer) ನಟನೆಯ ವಾಮನ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.ಈಗಾಗಲೆ ಸಿನಿಮಾ ಟೀಸರ್ (Teaser) ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದು, ಸಿನಿಮಾ ಯಾವಾಗಪ್ಪ ರಿಲೀಸ್ ಎಂದು ಕಾತುರದಿಂದ ಕಾಯ್ತಾ ಇದ್ರು..

ಇನ್ನು ಧನ್ವೀರ್ ಅಭಿಮಾನಿಗಳಿಗೆ ಸದ್ಯ ಗುಡ್ ನ್ಯೂಸ್ ಸಿಕ್ಕಿದ್ದು ಇದೆ ಏಪ್ರಿಲ್ 10ರಂದು ಚಿತ್ರ ಅಬ್ಬರದಿಂದ ಆಗಿ ಬಿಡುಗಡೆ ಆಗಲಿದೆ.. ವಾಮನ ಧನ್ವೀರ್ ನಟನೆಯ ನಾಲ್ಕನೆ ಚಿತ್ರವಾಗಿದ್ದು ,ನಟಿ ರೀಷ್ಮಾ ನಾಣಯ್ಯ (Reeshma Nanaiah) ಸಿನಿಮಾಗೆ ನಾಯಕಿಯಾಗಿದ್ದಾರೆ.

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮಂಟ್ ಲಾಂಛನದಡಿ ಚೇತನ್ ಗೌಡ ಬಂಡವಾಳ ಹೂಡಿದ್ದು,ಶಂಕರ್ ರಾಮನ್ (Shankar Raman) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ, ಮಾತ್ರವಲ್ಲದೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರೆ ಬರೆದಿದ್ದಾರೆ..

ಸಂಪತ್ ರಾಜ್(Sampath Raj), ಶಿವರಾಜ್ ಕೆ.ಆರ್. ಪೇಟೆ,(Shivaraj KR Pete) ತಾರಾ ,(Tara) ಅವಿನಾಶ್,(Avinash) ಅಚ್ಯುತ್ ಕುಮಾರ್(Achyuth Kumar) ಹೀಗೆ ದೊಡ್ಡ ತಾರ ಬಳಗವೆ ಇರುವ ಈ ಸಿನಿಮಾ ಮೂಲಕ ಮತ್ತೊಮ್ಮೆ ಕ್ಲಾಸ್ ಗು ಸೈ ಮಾಸ್ ಗು ಸೈ ಎಂದು ಧನ್ವೀರ್ ಪ್ರೂವ್ ಮಾಡಲಿದ್ದಾರೆ ಎಂಬುವುದು ಅಭಿಮಾನಿಗಳ ಮಾತಾಗಿದೆ..