ಬೆಂಗಳೂರು : ಇರಾನ್ – ಇಸ್ರೇಲ್ ನಡುವಿನ ಯುದ್ಧವು ಇಂದಿಗೆ 6ನೇ ದಿನಕ್ಕೆ ತಲುಪಿದೆ. ಈಗಾಗಲೇ ತನ್ನ ನಾಯಕನನ್ನು ಹೊಡೆದುರುಳಿಸಿದ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಇರಾನ್ ಪ್ರತೀಕಾರದ ರಣ ಕಹಳೆ ಮೊಳಗಿಸಿದೆ. ಇಸ್ರೇಲ್ ಹಾಗೂ ಅಮೆರಿಕದ ವಾಯು ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಮುಂದುವರೆಸಿದೆ.

ಈ ರಣ ಭೀಕರ ಯುದ್ಧದಿಂದ ಇರಾನ್‌ನಲ್ಲಿ 1,097, ಲೆಬನಾನ್‌ನಲ್ಲಿ 60 ಜನರು, ಇಸ್ರೇಲ್‌ನಲ್ಲಿ 12 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಅಲ್ಲದೆ ಆರು ಜನ ಅಮೆರಿಕದ ಯೋಧರು ಸಾವನ್ನಪ್ಪಿದ್ದಾರೆ. ಯುದ್ಧದ ತೀವ್ರತೆ ಏರಿದಂತೆಯೇ ಸಾವು- ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆಯೇ ಭಾರತ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ರಾಜತಾಂತ್ರಿಕವಾಗಿ ಪ್ರಯತ್ನದಲ್ಲಿದೆ. ವಿದೇಶಾಂಗ ಸಚಿವಾಲಯ (MEA) ಈ ಯುದ್ಧ ಪೀಡಿತ ಪ್ರದೇಶಗಳಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ನಿಗಾವಹಿಸಿದೆ.
ಇದನ್ನೂ ಓದಿ : ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್
ಇರಾನ್ ಇಸ್ರೇಲ್ ಮೇಲೆ ಮಿಸೈಲ್ ಉಡಾಯಿಸಿದೆ, ಯುದ್ಧದ ವ್ಯಾಪ್ತಿಯೂ ಕೂಡ ದಿನಕಳೆದಂತೆ ಅಕ್ಕಪಕ್ಕದ ದೇಶಗಳಿಗೂ ವಿಸ್ತರಿಸುತ್ತಿದೆ. ಇನ್ನೂ ಇರಾನಿನ ಡ್ರೋನ್ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು (CIA) ಹಾನಿಗೊಳಿಸಿದೆ. ಇಸ್ರೇಲ್ ಲೆಬನಾನ್ ಮತ್ತು ಇರಾನ್‌ನಲ್ಲಿರುವ ಹೆಜ್ಬೊಲ್ಲಾ ಮತ್ತು ಇರಾನಿನ ಪ್ರಮುಖ ಸೃಳಗಳನ್ನು ಗುರಿಯಾಗಿಸಿ ಮಿಸೈಲ್ ದಾಳಿಗಳನ್ನು ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.
ಅಮೆರಿಕ ಹಾಗೂ ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯು, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಬೃಹತ್ ಸಮರ ಮುಂದುವರೆಸಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆ ಅಮೆರಿಕದ ಸಂಪನ್ಮೂಲಗಳಿಗೆ ಆಗಿರುವ ಹಾನಿಯಿಂದ ಕಂಗಾಲಾಗಿರುವ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಇರಾನ್ ವಿರುದ್ಧ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಅಪಾಯಕಾರಿ ನೌಕೆಯನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿದೆ. ಅದು ಇರಾನ್‌ನಿಂದ 600 ಕಿ.ಮೀ ದೂರದಲ್ಲಿದ್ದು, ಗದರ್-380 ಮತ್ತು ತಲೈಹ್ ಕ್ಷಿಪಣಿಗಳು ನೌಕೆಯನ್ನು ಪೈಪೋಟಿ ನೀಡಿವೆ. ಈ ಮೂಲಕ ದೂರದಲ್ಲಿದ್ದರೂ ನಿಮ್ಮನ್ನು ಹಾಗೂ ನಿಮ್ಮ ವಾಯು ನೆಲೆಗಳನ್ನು ಧ್ವಂಸಗೊಳಿಸುತ್ತೇವೆ ಎಂಬ ನೇರ ಎಚ್ಚರಿಕೆಯನ್ನು ಇರಾನ್ ಅಮೆರಿಕಕ್ಕೆ ರವಾನಿಸಿದೆ.






