• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಅನುಮತಿಯಿಲ್ಲದೆ ಭಾರತದ ಸರಹದ್ದಿಗೆ ಪ್ರವೇಶಿಸಿದ ಅಮೇರಿಕನ್‌ ಯುದ್ಧ ಹಡಗು..!

by
April 10, 2021
in ವಿದೇಶ
0
ಅನುಮತಿಯಿಲ್ಲದೆ ಭಾರತದ ಸರಹದ್ದಿಗೆ ಪ್ರವೇಶಿಸಿದ ಅಮೇರಿಕನ್‌ ಯುದ್ಧ ಹಡಗು..!
Share on WhatsAppShare on FacebookShare on Telegram

ಅನಿರೀಕ್ಷಿತ ನಡೆಯೊಂದರಲ್ಲಿ ಅಮೆರಿಕದ ನೌಕಾಪಡೆಯು ಈ ವಾರ ಭಾರತದ ಪೂರ್ವ ಕಡಲ ಗಡಿಯಲ್ಲಿ ಅನುಮತಿಯಿಲ್ಲದೆ ಗಸ್ತು ತಿರುಗುವಿಕೆಯನ್ನು ನಡೆಸಿದೆ. ಇದು ಭಾರತದ ‘ಅತಿಯಾದ ಕಡಲ ಹಕ್ಕುಗಳನ್ನು’ ಪ್ರಶ್ನಿಸುವ ಉದ್ದೇಶವನ್ನು ಹೊಂದಿದೆ ಎಂದೂ ಸಹ ಅಮೆರಿಕ ಘೋಷಿಸಿದೆ.

ADVERTISEMENT

ಯುಎಸ್ ಏಳನೇ ನೌಕಾಪಡೆಯ ಕಮಾಂಡರ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ “ಏಪ್ರಿಲ್ 7 ರಂದು ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ಭಾರತದ ವಿಶೇಷ ಆರ್ಥಿಕ ವಲಯದ (EEZ) ಒಳಗೆ, ಲಕ್ಷದ್ವೀಪ ಸಮೂಹದ ಪಶ್ಚಿಮಕ್ಕೆ ಸುಮಾರು 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಭಾರತದ ಒಪ್ಪಿಗೆ‌ ಪಡೆಯದೆ ಆದರೆ ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣ ನೌಕಾಪಡೆಯ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಪ್ರತಿಪಾದಿಸಿದೆ” ಎಂದು ತಿಳಿಸಿದೆ.

ಈ ಗಸ್ತು ಭಾರತದ ಅತಿಯಾದ ಕಡಲ ಹಕ್ಕುಗಳನ್ನು ಪ್ರಶ್ನಿಸುವ ಮೂಲಕ ಅಂತರರಾಷ್ಟ್ರೀಯ ಕಾನೂನಿನಲ್ಲಿ ಗುರುತಿಸಲ್ಪಟ್ಟ ಸಮುದ್ರದ ಹಕ್ಕುಗಳು, ಸ್ವಾತಂತ್ರ್ಯಗಳು ಮತ್ತು ಕಾನೂನುಬದ್ಧ ಬಳಕೆಗಳನ್ನು ಎತ್ತಿಹಿಡಿದಿದೆ‌ ಎಂದು ಅದು ಹೇಳಿದೆ.

ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಇಲಾಖೆ ಯುಎಸ್ಎಸ್‌ನ ಪಾಲ್ ಜೋನ್ಸ್ ಪರ್ಷಿಯನ್ ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿಯ ಕಡೆಗೆ ಸಾಗುವುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ.

ವಿದೇಶಿ ಮಿಲಿಟರಿ ಹಡಗುಗಳು ತಮ್ಮ EEZ ಒಳಗೆ ಮಿಲಿಟರಿ ಚಟುವಟಿಕೆಗಳನ್ನು ನಡೆಸುವುದರ ಬಗ್ಗೆ ಅಮೆರಿಕ‌ ಹಾಗೂ ಭಾರತದ ನಿಲುವುಗಳಲ್ಲಿ ಮೊದಲಿನಿಂದಲೂ ಭಿನ್ನಾಭಿಪ್ರಾಯಗಳಿವೆ.

1995 ರಲ್ಲಿ ಭಾರತವು ಯುಎನ್ ಕನ್ವೆನ್ಷನ್ ಆಫ್ ದಿ ಸೀ ( UNCLOS)ಅನ್ನು ಅಂಗೀಕರಿಸಿದಾಗ “ಸಮಾವೇಶದ ನಿಬಂಧನೆಗಳು ಇತರ ದೇಶಗಳಿಗೆ ವಿಶೇಷ ಆರ್ಥಿಕ ವಲಯದಲ್ಲಿ ಮತ್ತು ಭೂಖಂಡದಲ್ಲಿ ಮಿಲಿಟರಿ ವ್ಯಾಯಾಮಗಳನ್ನು ನಡೆಸುವ ಅಧಿಕಾರ ನೀಡುವುದಿಲ್ಲ, ನಿರ್ದಿಷ್ಟವಾಗಿ ಕರಾವಳಿ ರಾಜ್ಯಗಳ ಒಪ್ಪಿಗೆಯಿಲ್ಲದೆ ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕಗಳ ಬಳಕೆಯನ್ನು ಮಾಡುವಂತಿಲ್ಲ” ಎಂದು ಘೋಷಿಸಿದೆ. ಆದರೆ ಅಮೆರಿಕವು ಈ ಒಡಂಬಡಿಕೆಯನ್ನು ಅನುಮೋದಿಸಿಲ್ಲ ಮತ್ತು EEZಗಳಲ್ಲಿ ಇತರ ದೇಶಗಳಿಗೂ ಕಾರ್ಯ ನಿರ್ವಹಿಸುವ ಹಕ್ಕು ಇದೆ ಎಂದು ವಾದಿಸುತ್ತಾ ಬಂದಿದೆ.

ಅಲ್ಲದೆ ದಿ ವೈರ್‌ನಲ್ಲಿ ಮನೋಜ್ ಜೋಶಿ ಅವರ 2019 ರ ಲೇಖನವೊಂದರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ನಿಯಮಿತವಾಗಿ ಭಾರತದ EEZನಲ್ಲಿ ಗುಪ್ತಚರ ಮತ್ತು ಸಮೀಕ್ಷೆ ಕಾರ್ಯಾಚರಣೆಗಳನ್ನು ಪದೇ ಪದೇ ನಡೆಸುತ್ತಿದೆ. FONOP (Freedom Of Navigation Operations)ಯ 2018 ರ ವರದಿಯನ್ನು ಹೊರತುಪಡಿಸಿ 2011 ರಿಂದ 2017 ರವರೆಗಿನ ಎಲ್ಲಾ ಹಿಂದಿನ ವರದಿಗಳು ಯುಎಸ್ ಮಿಲಿಟರಿ ಒಂದೇ ವರ್ಷದಲ್ಲಿ ಭಾರತದ ಅನುಮತಿಯಿಲ್ಲದೆ ಅನೇಕ ಬಾರಿ ಭಾರತದ EEZ ಒಳಗೆ ನುಗ್ಗಿವೆ ಎಂದು ತಿಳಿಸುತ್ತದೆ.

ಈ ಹಿಂದೆ ಮಾಡಿದಂತೆ ಭವಿಷ್ಯದಲ್ಲೂ‌ ಯುಎಸ್‌ನ ಪಡೆಗಳು ನಿಯಮಿತವಾಗಿ ನ್ಯಾವಿಗೇಷನ್ ಕಾರ್ಯಾಚರಣೆಗಳ ಸ್ವಾತಂತ್ರ್ಯವನ್ನು (FONOP ಗಳು) ನಡೆಸುತ್ತವೆ ಎಂದೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಭಾರತದ ‘ಮೊದಲೇ ಅನುಮತಿ ಪಡೆದುಕೊಳ್ಳಬೇಕು’ ಎನ್ನುವ ನಿಯಮವು ಅಂತರರಾಷ್ಟ್ರೀಯ ಕಾನೂನಿಗೆ ಹೊಂದಿಕೆಯಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಪ್ರತಿಪಾದಿಸಿದೆ.

ಭಾರತವು 7,000 ಕಿಲೋಮೀಟರ್ (4,300 ಮೈಲಿ) ಗಿಂತ ಹೆಚ್ಚು ಕಡಲ ಗಡಿಯನ್ನು ಹೊಂದಿದ್ದು, ಏಳು ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಯುಎಸ್ ಮಿಲಿಟರಿಯ ಅನಿರೀಕ್ಷಿತ ನಡೆಯು ಈ ಏಳೂ ಗಡಿಗಳಲ್ಲಿ ಬೀರುವ ಪರಿಣಾಮಗಳ ಬಗ್ಗೆ ಮತ್ತು ಅಂತರರಾಷ್ಟ್ರೀಯ ಒಡಂಬಡಿಕೆಯನ್ನು ಮೀರುವ ಅಮೆರಿಕದ ಉದ್ದಟತನಕ್ಕೆ ಕೇಂದ್ರ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದರ ಮೇಲೆ ನಮ್ಮ ಗಡಿ ಸುರಕ್ಷತೆಯು ಅಡಕವಾಗಿದೆ.

Previous Post

ನೈಟ್ ಕರ್ಫ್ಯೂ ಕರೋನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು -ಸಿದ್ದರಾಮಯ್ಯ

Next Post

ಕಾಂಗ್ರೆಸ್‌ ಮುಕ್ತವಲ್ಲ, ಬಿಜೆಪಿ ಮುಕ್ತ ಆಗೋ ದಿನಗಳು ಹತ್ತಿರ ಬಂದಿಂದೆ –ಹೆಚ್‌ಡಿಕೆ

Related Posts

ಖಮೇನಿ ಹತ್ಯೆ ಖಂಡಿಸಿದ ಭಾರತ : ಇರಾನ್‌ ರಾಯಬಾರಿ ಕಚೇರಿ ಬುಕ್‌ನಲ್ಲಿ ವಿಕ್ರಂ ಮಿಸ್ರಿ ಬರೆದಿದ್ದೇನು..?
Top Story

ಖಮೇನಿ ಹತ್ಯೆ ಖಂಡಿಸಿದ ಭಾರತ : ಇರಾನ್‌ ರಾಯಬಾರಿ ಕಚೇರಿ ಬುಕ್‌ನಲ್ಲಿ ವಿಕ್ರಂ ಮಿಸ್ರಿ ಬರೆದಿದ್ದೇನು..?

by ಪ್ರತಿಧ್ವನಿ
March 5, 2026
0

ನವದೆಹಲಿ : ಇರಾನ್‌ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲಾ ಅಲಿ ಖಮೇನಿಯ ಹತ್ಯೆಯನ್ನು ಭಾರತ ಖಂಡಿಸಿದೆ. ಕಳೆದ ಐದು ದಿನಗಳಿಂದಲೂ ಈ ವಿಚಾರ ಸಾಕಷ್ಟು ಚರ್ಚೆಯಲ್ಲಿತ್ತು. ವಿಪಕ್ಷಗಳು ಖಮೇನಿ...

Read moreDetails
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಇರಾನ್‌ನ ಮುಂದಿನ ಸರ್ವಾಧಿಕಾರಿ ಯಾರೇ ಆಗಿರಲಿ ಕೊಲ್ಲುವುದೇ ನಮ್ಮ ಗುರಿ: ಇಸ್ರೇಲ್‌

ಇರಾನ್‌ನ ಮುಂದಿನ ಸರ್ವಾಧಿಕಾರಿ ಯಾರೇ ಆಗಿರಲಿ ಕೊಲ್ಲುವುದೇ ನಮ್ಮ ಗುರಿ: ಇಸ್ರೇಲ್‌

March 5, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
Next Post
ಕಾಂಗ್ರೆಸ್‌ ಮುಕ್ತವಲ್ಲ, ಬಿಜೆಪಿ ಮುಕ್ತ ಆಗೋ ದಿನಗಳು ಹತ್ತಿರ ಬಂದಿಂದೆ –ಹೆಚ್‌ಡಿಕೆ

ಕಾಂಗ್ರೆಸ್‌ ಮುಕ್ತವಲ್ಲ, ಬಿಜೆಪಿ ಮುಕ್ತ ಆಗೋ ದಿನಗಳು ಹತ್ತಿರ ಬಂದಿಂದೆ –ಹೆಚ್‌ಡಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada