• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

UP; ಗೂಂಡಾ ಪ್ರವೃತ್ತಿ ಮೂಲಕ ಪ್ರಸಿದ್ದಿ ಹೊಂದುತ್ತಿರುವ ಹಿಂದೂ ಸಂಘಟನೆಗಳು

by
January 3, 2021
in ದೇಶ
0
UP; ಗೂಂಡಾ ಪ್ರವೃತ್ತಿ ಮೂಲಕ ಪ್ರಸಿದ್ದಿ ಹೊಂದುತ್ತಿರುವ ಹಿಂದೂ ಸಂಘಟನೆಗಳು
Share on WhatsAppShare on FacebookShare on Telegram

ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯ ಮೊಹಮ್ಮದ್ ವಾಲಿ ಎಂಬಲ್ಲಿ 42 ವರ್ಷದ ಹಿಂದೂ ಮಹಿಳೆ ರಾಜ್ಯದ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ 27 ವರ್ಷದ ಮೊಹಮ್ಮದ್ ಸಯೀದ್ ಎಂಬುವವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಮಹಿಳೆಯ ನೆರೆಹೊರೆಯವರು ಸಯೀದ್ ಮಹಿಳೆಯ ಮನೆಗೆ ಪದೇ ಪದೇ ಹೋಗುತ್ತಿದ್ದರು ಮತ್ತು ಇದು ಹಳಸಿದ ಸಂಬಂದ ಅಷ್ಟೇ
ಎಂದು ಹೇಳಿದರೆ ಮಹಿಳೆಯು ಸಯೀದ್ ತನ್ನನ್ನು ಗನ್ಪಾಯಿಂಟ್ನಲ್ಲಿ ಅತ್ಯಾಚಾರ ಮಾಡಿದ ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಎಂದು ಆರೋಪಿಸಿದ್ದಾಳೆ.

ADVERTISEMENT

ನವೆಂಬರ್ 28 ರಂದು ಉತ್ತರಪ್ರದೇಶದ ಕಾನೂನುಬಾಹಿರ ಮತಾಂತರದ ನಿಷೇಧವು ಜಾರಿಗೆ ಬಂದಾಗಿನಿಂದ ಇಂತಹ ಹಲವಾರು ಪ್ರಕರಣಗಳನ್ನು ಹಿಂದೂ ಸಂಘಟನೆಗಳು ಮುನ್ನಡೆಸುತ್ತಿವೆ. ವಿಹೆಚ್‌ಪಿ, ಭಜರಂಗ ದಳ, ಆರ್‌ ಎಸ್ ಎಸ್,ಜತೆಗೇ ರಾಷ್ಟ್ರೀಯ ಯುವ ವಾಹಿನಿ , ಹಿಂದೂ ಆರ್ಮಿ, ಹಿಂದೂ ಯುವ ವಾಹಿನಿ ಭಾರತ್ , ವಿಶ್ವ ಹಿಂದೂ ದಳ ಮುಂತಾದ ಸಂಘಟನೆಗಳು ಹಿಂದೂ ಮುಸ್ಲಿಂ ವಿವಾಹಗಳನ್ನು ತಡೆಯಲು ಮುಂದಾಗಿದೆ. ಈ ಸಂಸ್ಥೆಗಳಲ್ಲಿ ಕೆಲವು ರಾಜ್ಯದಾದ್ಯಂತ ಅನೇಕ ಜಿಲ್ಲೆಗಳಲ್ಲಿ ಕಚೇರಿಗಳನ್ನು ಹೊಂದಿವೆ. ಫೇಸ್ಬುಕ್ ಪ್ರೊಫೈಲ್ಗಳು ಮತ್ತು ಪುಟಗಳನ್ನು ಸಾವಿರಾರು ಬೆಂಬಲಿಗರು ಅನುಸರಿಸುವಂತೆ ಮಾಡುವ ಮೂಲಕ ಅವು ಜನರನ್ನು ಸೆಳೆಯುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಪ್ರಕರಣದಲ್ಲಿ ವಧು ಮತ್ತು ವರರಿಬ್ಬರ ಪೋಷಕರು ಒಪ್ಪಿಗೆ ನೀಡಿದ್ದರೂ ಸಹ ಡಿಸೆಂಬರ್ ನ ಮೊದಲ ವಾರದಲ್ಲಿ ಲಖನೌದಲ್ಲಿ ಅಂತರ್ ಧರ್ಮೀಯ ವಿವಾಹವನ್ನು ನಿಲ್ಲಿಸುವುದರ ಹಿಂದೆ ಬಿಜೆಪಿಯ ಸ್ವಯಂ ಘೋಷಿತ ಮಿತ್ರ ಲಖನೌನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಷ್ಟ್ರೀಯ ಯುವ ವಾಹಿನಿ ಇತ್ತು. ವಾಹಿನಿಯ ರಾಷ್ಟ್ರೀಯ ಅಧ್ಯಕ್ಷ ಕೆ.ಡಿ. ಶರ್ಮಾ ಅವರು ವಾಹಿನಿಯನ್ನು 2016 ರಲ್ಲಿ ಸ್ಥಾಪಿಸಲಾಗಿದ್ದು, ಅದರ ಮುಖ್ಯ ಉದ್ದೇಶಗಳು ಹಸುವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನವನ್ನು ನೀಡುವಂತೆ ಮತ್ತು ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ತರಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ ಎಂದು ತಿಳಿಸಿದರು. ಈ ಸಂಸ್ಥೆ 24 ರಾಜ್ಯಗಳಲ್ಲಿ ಸಕ್ರಿಯವಾಗಿದೆ ಮತ್ತು ಉತ್ತರ ಪ್ರದೇಶದ ಪ್ರತೀ ಜಿಲ್ಲೆಯಲ್ಲೂ ತನ್ನ ಅಸ್ತಿತ್ವವನ್ನು ಹೊಂದಿದೆ ಎಂದು ಶರ್ಮಾ ಹೇಳಿದ್ದಾರೆ.

ನಾವು ಪ್ರತಿ ಜಿಲ್ಲೆಯಲ್ಲೂ ನೂರಾರು ಕಾರ್ಯಕರ್ತರು ಮತ್ತು ಸ್ವಯಂಸೇವಕರನ್ನು ಹೊಂದಿದ್ದೇವೆ, ಅವರು ಪ್ರತಿದಿನವೂ ಮಾಹಿತಿಗಳನ್ನು ಕಳುಹಿಸುತ್ತಿದ್ದಾರೆ. ‘ಲವ್ ಜಿಹಾದ್’ ಅಥವಾ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾವು ಪಡೆದಾಗಲೆಲ್ಲಾ ನಾವು ನಮ್ಮ ಸ್ವಯಂಸೇವಕರನ್ನು ಆ ಸ್ಥಳಕ್ಕೆ ರವಾನಿಸುತ್ತೇವೆ, ಎಂದು ಅವರು ಹೇಳಿದರು.

2018 ರಲ್ಲಿ ಸ್ಥಾಪಿತವಾದ ಲಖನೌ ಮೂಲದ ಹಿಂದೂ ಆರ್ಮಿಯು ಮಥುರಾದ ಕೃಷ್ಣ ದೇವಾಲಯದ ಪಕ್ಕದಲ್ಲಿರುವ ಶಾಹಿ ಇದ್ಗಾ ಮಸೀದಿಯನ್ನು ತೆರವುಗೊಳಿಸುವ ಆಂದೋಲನಕ್ಕೆ ಮುಂದಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ, ಮಸೀದಿಯನ್ನು ತೆರವುಗೊಳಿಸಲು ಕೃಷ್ಣ ಜನ್ಮಭೂಮಿ ಆಂದೋಲನ ಘೋಷಿಸಿದ ನಂತರ ಹಿಂದೂ ಆರ್ಮಿಯ 22 ಸದಸ್ಯರನ್ನು ಬಂಧಿಸಲಾಯಿತು. ಕೃಷ್ಣನ ಜನ್ಮಸ್ಥಳದಿಂದ ಇಸ್ಲಾಮಿಕ್ ರಚನೆಗಳನ್ನು ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ ಮತ್ತು ಸದರಿ ನಿವೇಶನವನ್ನು ನಮಗೆ ಹಸ್ತಾಂತರಿಸಬೇಕು ಎಂದು ಅದರ ಮುಖ್ಯಸ್ಥ ಮನೀಶ್ ಯಾದವ್ ಹೇಳುತ್ತಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯ ಸಂದರ್ಭದಲ್ಲಿ ಯಾದವ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಪೊಲೀಸರು ದೆಹಲಿಯಿಂದ ಐದು ನಿಮಿಷಗಳ ಕಾಲ ದೂರ ಹೋದರೆ ಇಸ್ಲಾಂನಿಂದ ನಗರವನ್ನು ಮುಕ್ತಗೊಳಿಸುವುದಾಗಿ ಹೇಳಿದ್ದರು. ದ್ವೇಷ ಭಾಷಣಕ್ಕಾಗಿ ಯಾದವ್ ವಿರುದ್ಧ ಲಕ್ನೋದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

2019 ರ ಅಕ್ಟೋಬರ್ನಲ್ಲಿ ಲಖನೌದಲ್ಲಿ ಹತ್ಯೆಗೀಡಾದ ಹಿಂದುತ್ವ ಪರ ನಾಯಕ ಕಮಲೇಶ್ ತಿವಾರಿ ಅವರು 2017 ರಲ್ಲಿ ಸ್ಥಾಪಿಸಿದ ಹಿಂದೂ ಸಮಾಜ ಪಕ್ಷವು ಈಗ ಅವರ ಪತ್ನಿ ಕಿರಣ್ ಕಮಲೇಶ್ ತಿವಾರಿ ನೇತೃತ್ವದಲ್ಲಿದೆ. ಅವರ ನಾಯಕತ್ವದಲ್ಲಿ, ಪಕ್ಷವು ಇತ್ತೀಚೆಗೆ ಲಕ್ನೋದಲ್ಲಿ ಎಂಎಲ್ಸಿ ಪದವೀಧರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತ್ತೊಂದು ಸಣ್ಣ ಪಕ್ಷವಾದ ಭಾರತೀಯ-ಜನ-ಜನ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತು. ಕಮಲೇಶ್ ನಂತೆಯೇ, ಕಿರಣ್ ಕೂಡ ಹಿಂದೂತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ . ಫೇಸ್ಬುಕ್ ಪೇಜ್ ಮೂಲಕ, ಅವರು ಹಿಂದೂತ್ವವನ್ನು ರಕ್ಷಿಸಲು ಮತ್ತು ಹಿಂದೂ ಸಮಾಜವನ್ನು ಒಂದುಗೂಡಿಸಲು ಮನವಿಗಳನ್ನು ನಿರಂತರವಾಗಿ ಮಾಡುತಿದ್ದು ಮಹಾತ್ಮ ಗಾಂಧಿಯ ಹಂತಕ ನಾಥುರಾಮ್ ಗೋಡ್ಸೆ ಅವರನ್ನೂ ಅವರು ಹೊಗಳಿದ್ದಾರೆ. ಹಿಂದೂ ರಾಷ್ಟ್ರವನ್ನು ರಚಿಸುವುದು ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಆದರೆ ಸಮಾಜವು ಚುನಾವಣಾ ಆಕಾಂಕ್ಷೆಗಳನ್ನು ಹೊಂದಿದೆ. 2022 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ನಮ್ಮ ಗುರಿ ಎಂದು ಪಕ್ಷದ ಸಂಯೋಜಕ ಗೌರವ್ ವರ್ಮಾ ಹೇಳುತ್ತಾರೆ. ಇದಕ್ಕಾಗಿ ನಾವು ಪ್ರತಿ ಜಿಲ್ಲೆಯಲ್ಲೂ ನಮ್ಮ ಸಂಘಟನೆಯನ್ನು ಸ್ಥಾಪಿಸುತ್ತಿದ್ದೇವೆ. ನಾವು ಬಿಹಾರದಲ್ಲಿ 40 ಸ್ಥಾನಗಳಿಗೆ ಸ್ಪರ್ಧಿಸಿದ್ದೆವು. ಹಿಂದುತ್ವಕ್ಕಾಗಿ ಹೋರಾಡುವ ಸಂದರ್ಭದಲ್ಲಿ ನಮ್ಮ ಸಂಘಟನೆಯನ್ನೂ ವಿಸ್ತರಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ ಎಂದೂ ಅವರು ಹೇಳಿದರು.

ಕಳೆದ ವರ್ಷ ವಿಶ್ವ ಹಿಂದೂ ದಳ ಎಂಬ ಇನ್ನೊಂದು ಸಂಘಟನೆಯ ಕಾರ್ಯಕರ್ತರು ಲಖನೌದಲ್ಲಿ ಒಣ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕಾಶ್ಮೀರಿ ವರ್ತಕರನ್ನು ಥಳಿಸಿದ ಬಳಿಕ ಪ್ರಸಿದ್ದಿಗೆ ಬಂದಿತು. ಈ ಪ್ರಕರಣದಲ್ಲಿ ಸಂಸ್ಥೆಯ ಪದಾಧಿಕಾರಿ ಅಂಬುಜ್ ನಿಗಮ್ ಅವರನ್ನು ಬಂಧಿಸಲಾಗಿದ್ದರೂ ಜಾಮೀನಿನ ಮೇಲೆ ಹೊರಗಿದ್ದಾರೆ.ಈ ಸಂಸ್ಥೆ ಮುಖ್ಯವಾಗಿ ಲಕ್ನೋ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದೆ.

ಹಿಂದೂ ಯುವ ವಾಹಿನಿ (ಭಾರತ್) ಹಿಂದೂ ಯುವ ವಾಹಿನಿಯ ಒಂದು ಶಾಖೆಯಾಗಿದೆ. ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2002 ರಲ್ಲಿ ಸ್ಥಾಪಿಸಿದರು. ಇದನ್ನು ಹಿಂದೂ ಯುವ ವಾಹಿನಿ ಭಾರತ್ ನ್ನು ಅಂದಿನ ರಾಜ್ಯ ಅಧ್ಯಕ್ಷ ಸುನಿಲ್ ಸಿಂಗ್ ಅವರು 2018 ರಲ್ಲಿ ರಚಿಸಿದರು. ಈ ಸಂಸ್ಥೆ ಹಿಂದುತ್ವದ ಹಳೆಯ ಕಾರ್ಯಸೂಚಿಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಇದು ರಾಜ್ಯಾದ್ಯಂತ ಕಚೇರಿಗಳು ಮತ್ತು ಕಾರ್ಯಕರ್ತರನ್ನು ಹೊಂದಿದೆ,

ಈ ಎಲ್ಲ ಸಂಘಟನೆಗಳು ಬಿಜೆಪಿ ಸರ್ಕಾರದ ಮೌನ ಬೆಂಬಲವನ್ನು ಹೊಂದಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.. ಈ ಸಂಘಟನೆಗಳ ಸದಸ್ಯರು ಈಗ ಅಂತರ್ ಧರ್ಮೀಯ ಮದುವೆಗಳನ್ನು ನಿಲ್ಲಿಸಲು ಪ್ರಯತ್ನಿಸುತಿದ್ದಾರೆ ಎಂದು ವಿಪಕ್ಷಗಳು ಅರೋಪಿಸಿವೆ. ಅದರೆ ಆಡಳಿತಾರೂಢ ಬಿಜೆಪಿ ಇದನ್ನು ನಿರಾಕರಿಸಿದೆ. ಉತ್ತರ ಪ್ರದೇಶ ಬಿಜೆಪಿ ವಕ್ತಾರ ವಾಜಪೇಯಿ ಅವರು ಯಾರಾದರೂ ನಮಗೆ ಬಿಜೆಪಿ ಬೆಂಬಲವಿದೆ ಎಂದು ಹೇಳಿಕೊಂಡರೆ ನಾವು ಹೇಗೆ ಜವಾಬ್ದಾರರು ಎಂದು ಪ್ರಶ್ನಿಸುತ್ತಾರೆ.

Tags: UPಹಿಂದೂ ಸಂಘಟನೆ
Previous Post

ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯ ಕಾಲ

Next Post

ಬಿಜೆಪಿ ವಿರುದ್ದ ಹೆಚ್‌ಡಿಕೆ ವಾಗ್ದಾಳಿ

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
Next Post
ಬಿಜೆಪಿ ವಿರುದ್ದ ಹೆಚ್‌ಡಿಕೆ ವಾಗ್ದಾಳಿ

ಬಿಜೆಪಿ ವಿರುದ್ದ ಹೆಚ್‌ಡಿಕೆ ವಾಗ್ದಾಳಿ

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada