ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ 170 ಕ್ಕೂ ಹೆಚ್ಚು ಮಕ್ಕಳನ್ನು ದಾಖಲು ಮಾಡಲಾಗಿದೆ. ದೀರ್ಘಕಾಲದ ಕಾಯಿಲೆಗಳು ಮತ್ತು ಆಕ್ಸಿಜನ್ ಬೆಂಬಲ ಅಗತ್ಯವಿರುವ ಎನ್ಸೆಫಾಲಿಟಿಸ್ ಮತ್ತು ನ್ಯುಮೋನಿಯಾದಂತಹ ವೈರಲ್ ಜ್ವರದಿಂದಾಗಿ ಇಲ್ಲಿ ದಾಖಲಾಗಿದ್ದಾರೆ ಎಂದು ಪ್ರಯಾಗರಾಜ್ ಸಿಎಂಒ ಡಾ ನಾನಕ್ ಸರನ್ ಭಾನುವಾರ ಹೇಳಿದ್ದಾರೆ.
“ಕೆಲವು ದಿನಗಳ ಹಿಂದೆ, ನಾನು ಮಕ್ಕಳ ವಿಭಾಗವನ್ನು ಪರೀಕ್ಷಿಸಿದಾಗ, 120 ಹಾಸಿಗೆಗಳು ಇದ್ದವು. ನಾವು 171 ರೋಗಿಗಳನ್ನು ಸ್ವೀಕರಿಸಿದ್ದೇವೆ. ಆದ್ದರಿಂದ, ನಾವು 2-3 ಮಕ್ಕಳನ್ನು ಒಂದೇ ಹಾಸಿಗೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಡೆಂಗ್ಯೂ ಪ್ರಕರಣಗಳು ಇಲ್ಲಿ ಕಡಿಮೆ. ಕೆಲವು ದೀರ್ಘಕಾಲದ ರೋಗಗಳು ಎನ್ಸೆಫಾಲಿಟಿಸ್ ಮತ್ತು ನ್ಯುಮೋನಿಯಾದಂತೆ ಅವರಿಗೆ ಇಲ್ಲಿ ಆಮ್ಲಜನಕದ ಬೆಂಬಲ ಬೇಕಾಗುತ್ತದೆ, “ಎಂದು ಅವರು ಹೇಳಿದ್ದಾರೆ.
“200 ಹಾಸಿಗೆಗಳ ವಾರ್ಡ್ ನಿರ್ಮಾಣ ಹಂತದಲ್ಲಿದೆ. ನಾವು ಮಕ್ಕಳಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಹವು ಕಡಿಮೆಯಾಗುತ್ತಿರುವುದರಿಂದ, ಮಕ್ಕಳಲ್ಲಿ ದೀರ್ಘಕಾಲದ ಕಾಯಿಲೆಗಳು ಮತ್ತು ವೈರಲ್ ಜ್ವರದ ಅನೇಕ ಪ್ರಕರಣಗಳು ಕಂಡುಬರುತ್ತಿವೆ.

ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ, ಮೂರ್ನಾಲ್ಕು ರೋಗಿಗಳನ್ನು ಒಂದೇ ಹಾಸಿಗೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಕೆಲವರನ್ನು ನೆಲದ ಮೇಲೆ ಹಾಸಿದ ಹಾಸಿಗೆಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಸ್ಟ್ ಪೋಸ್ಟ್ ವರದಿ ಮಾಡಿದೆ.
ANI ಯೊಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ಮಗುವಿನ ತಂದೆಯಾದ ನರೇಂದ್ರ ಕುಮಾರ್ ಮಾತನಾಡಿ, “ನನ್ನ ಮಗುವನ್ನು ಇಲ್ಲಿ ಸೇರಿಸಲಾಗಿದೆ, ವೈದ್ಯರು ಗಮನ ನೀಡುತ್ತಿಲ್ಲ. ಹಾಸಿಗೆ ಇಲ್ಲ. ಆಸ್ಪತ್ರೆ ನೀಡಿದ ಔಷಧದಿಂದ ನನ್ನ ಮಗುವಿಗೆ ಸೋಂಕು ತಗಲುತ್ತಿದೆ” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಮಯಾಂಕ್ ಕುಮಾರ್ ಮಾತನಾಡಿ, ಅವರ ಮಗು ಆಮ್ಲಜನಕದ ಬೆಂಬಲದಲ್ಲಿದ್ದು, “ಆಡಳಿತವು ಸಂಪೂರ್ಣವಾಗಿ ಅಸಡ್ಡೆ ತೋರುತ್ತಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ಅನೇಕ ಮಕ್ಕಳು ಇಲ್ಲಿ ಇದ್ದಾರೆ” ಎಂದು ಹೇಳಿದ್ದಾರೆ.