• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೂತನ ಪ್ರತಿಭೆಗಳ ಸಮಾಗಮದಲ್ಲಿ ಮೂಡಿಬರುತ್ತಿದೆ “ಉಜ್ಜಯಿನಿ ಮಹಾಕಾಲ”

ಪ್ರತಿಧ್ವನಿ by ಪ್ರತಿಧ್ವನಿ
March 14, 2025
in ಕರ್ನಾಟಕ, ಸಿನಿಮಾ
0
ನೂತನ ಪ್ರತಿಭೆಗಳ ಸಮಾಗಮದಲ್ಲಿ ಮೂಡಿಬರುತ್ತಿದೆ “ಉಜ್ಜಯಿನಿ ಮಹಾಕಾಲ”
Share on WhatsAppShare on FacebookShare on Telegram

ಹರಿಪ್ರಸಾದ್ ಎಂ.ಬಿ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿನಯ್ ನಾಯಕ .

ADVERTISEMENT

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ “ಉಜ್ಜಯಿನಿ ಮಹಾಕಾಲ” ಕೂಡ ಒಂದು. ಈಗ ಅದೇ ಶೀರ್ಷಿಕೆಯಲ್ಲಿ ಕನ್ನಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಹರಿಪ್ರಸಾದ್ ಎಂ ಮಂಡ್ಯ ನಿರ್ಮಾಣ – ನಿರ್ದೇಶನದಲ್ಲಿ ವಿನಯ್ ನಾಯಕನಾಗಿ ನಟಿಸುತ್ತಿರುವ “ಉಜ್ಜಯಿನಿ ಮಹಕಾಲ” ಪೌರಾಣಿಕ ಚಿತ್ರವಲ್ಲ. ಹೊಸತಂಡದ ಸಮಾಗಮದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು ಬಿಡುಗಡೆ ಮಾಡಿದರು. ನಿರ್ಮಾಪಕ ನಾಗೇಶ್ ಕುಮಾರ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣ್ಯರು ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮೂಲತಃ ಮಂಡ್ಯದವನು. ಹದಿನೈದು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ಆದರೆ ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಒಂದು ತಿಂಗಳಾಗಿದೆ. ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಈಗ ಶೀರ್ಷಿಕೆ ಅಂತಿಮವಾಗಿದೆ. ನಮ್ಮ ಚಿತ್ರಕ್ಕೆ “ಉಜ್ಜಯಿನಿ ಮಹಾಕಾಲ” ಎಂದು ಹೆಸರಿಡಲಾಗಿದೆ. ಹಾಗಂತ ಈ ಚಿತ್ರ ಪೌರಾಣಿಕ ಚಿತ್ರವಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. “ಉಜ್ಜಯಿನಿ ಮಹಾಕಾಲ” ಎಂದು ಶೀರ್ಷಿಕೆಯಿಡಲು ಕಾರಣವಿದೆ. ಶೀರ್ಷಿಕೆಗೂ ಚಿತ್ರಕ್ಕೂ ಸಂಬಂಧವಿದೆ. ಮುಂದಿನ ಹಂತದಲ್ಲಿ ಉಜ್ಜಯಿನಿಯಲ್ಲೂ ಚಿತ್ರೀಕರಣ ನಡೆಯಲಿದೆ. ಈಗ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇನ್ನೂ ಎಲ್ಲರ ಜೀವನದಲ್ಲೂ ಮಹಾಕಾಲ ಅಂತ ಒಂದು ಬರುತ್ತದೆ. ಅದು ನಮ್ಮ ನಾಯಕನ ಜೀವನದಲ್ಲೂ ಬಂದಾಗ ಏನಾಗಬಹುದು? ಎಂಬುದನ್ನು ಸಹ ತೋರಿಸುತ್ತಿದ್ದೇವೆ. ನಾನೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿದ್ದೇನೆ. ನಿರ್ಮಾಣಕ್ಕೆ ರತ್ನಾಕರ್ ಹಾಗೂ ಮೋಹನ್ ಅವರು ಸಾಥ್ ನೀಡಿದ್ದಾರೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಹರಿಪ್ರಸಾದ್ ಎಂ.ಬಿ ಮಂಡ್ಯ ಮಾಹಿತಿ ನೀಡಿದರು.

ಈ ಹಿಂದೆ ಸಹ ಕಲಾವಿದನಾಗಿ ಅಭಿನಯಿಸುತ್ತಿದ್ದೆ. ನಾಯಕನಾಗಿ ಇದು ಮೊದಲ ಚಿತ್ರ. ನಾನು ಈ ಚಿತ್ರದಲ್ಲಿ ಅನಾಥ. ಸೂರ್ಯ ನನ್ನ ಪಾತ್ರದ ಹೆಸರು ಎಂದರು ನಾಯಕ ವಿನಯ್.

Rakshitha: ಅಪ್ಪು ಸಿನಿಮಾ ನೋಡಿ ಎಮೋಷನಲ್ ಆದ ನಟಿ ರಕ್ಷಿತಾ..! #appu #release #actor #rakshitha

ನಾನು ಈ ಚಿತ್ರದಲ್ಲಿ ನಾಯಕನ ಪ್ರೇಯಸಿ. ಪ್ರಿಯ ನನ್ನ ಪಾತ್ರದ ಹೆಸರು ಎಂದು ಅಶ್ವಿನಿ ಬೇಲೂರು ತಿಳಿಸಿದರು.

ಕೀರ್ತಿ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು ಮತ್ತೊಬ್ಬ ನಾಯಕಿ ಡಯಾನ ಜೆಸಿಕಾ.

ಚಿತ್ರದಲ್ಲಿ ಅಭಿನಯಿಸುತ್ತಿರುವ ಮೋಹನ್ ಚನ್ನಪಟ್ಟಣ ಹಾಗೂ ರಮಣ್ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ರಘು ಅ ರೂಗಿ ಛಾಯಾಗ್ರಹಣ, ಕಲ್ಕಿ ಅಭಿಷೇಕ್ ಸಂಗೀತ ನಿರ್ದೇಶನ ಹಾಗೂ ಗಣಿ ಲಚ್ಚು & ರಘು ಅ ರೂಗಿ ಅವರ ಸಂಕಲನ “ಉಜ್ಜಯಿನಿ ಮಹಾಕಾಲ” ಚಿತ್ರಕ್ಕಿದೆ.

Previous Post

ನೀರಿನ ದರ 1 ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ದೇಶಾದ್ಯಂತ ಮೇರೆ ಮೀರಿದ ಹೋಳಿ ಹಬ್ಬದ ಸಂಭ್ರಮ

Related Posts

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?
ಕರ್ನಾಟಕ

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

by ಪ್ರತಿಧ್ವನಿ
March 4, 2026
0

ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (...

Read moreDetails
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
Next Post

ದೇಶಾದ್ಯಂತ ಮೇರೆ ಮೀರಿದ ಹೋಳಿ ಹಬ್ಬದ ಸಂಭ್ರಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada