ಕಲ್ಪತರು ನಾಡಿನ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ (siddaganga mata) ಸಂಭ್ರಮ ಸಡಗರ ಮನೆ ಮಾಡಿದೆ.. ಈ ಸಂಭ್ರಮಕ್ಕೆ ಕಾರಣ ನಡೆದಾಡುವ ದೇವರು, ಶಿವೈಕ್ಯ ಡಾ.ಶ್ರೀ ಶಿವಕುಮಾರ ಶ್ರೀಗಳ Dr. sri shivakumara swamiji) ಜಯಂತೋತ್ಸವ ಹಾಗೂ ಗುರುವಂದನ ಕಾರ್ಯಕ್ರಮ. ನಡೆದಾಡುವ ದೇವರು, ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತ್ಯೋತ್ಸವ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಇಂದು ಬೆಳಗಿನ ಜಾವದಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಿವೆ.. ಬೆಳ್ಳಿಗೆ 5 ಗಂಟೆಯಿಂದಲೇ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿದೆ.. ಬಳಿಕ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುತ್ತಳಿ ಮೆರವಣಿಗೆ ನಡೆಯಲಿದೆ.. ಇನ್ನು ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.. ಈ ಬಾರಿ ವಿಶೇಷವಾಗಿ ಪತಾಂಜಲಿ ಖ್ಯಾತಿಯ ಬಾಬಾ ರಾಮದೇವ್ (baba rammadev), ಸುತ್ತೂರು ಶ್ರೀಗಳು (sutturu sri), ಮುಂಡರಗಿಯ ಅನ್ನದಾನೇಶ್ವರ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಗದಗಿನ ವೀರಶೈವ ಪುಣ್ಯಾಶ್ರಮದ ಅಧ್ಯಕ್ಷರಾಗಿರುವ ಕಲ್ಲಯ್ಯ ಅಜ್ಜರವರು ಸೇರಿದಂತೆ, ಹಲವು ಪರಮ ಪೂಜ್ಯರು ಜಯಂತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ (code of onduct) ಜಾರಿ ಇರೋ ಹಿನ್ನೆಲೆ ರಾಜಕಾರಣಿಗಳಿಗೆ ಜಯಂತ್ಯೋತ್ಸವಕ್ಕೆ ಆಹ್ವಾನ ನೀಡಿಲ್ಲ.. ಅಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ (sslc exams) ಇರುವ ಹಿನ್ನೆಲೆ ಆದಷ್ಟು ಸರಳವಾಗಿ ಕಾರ್ಯಕ್ರಮ ಆಚರಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.. ಇನ್ನು ಶ್ರೀಗಳ ಜಯಂತ್ಯೋತ್ಸವದ ಹಿನ್ನಲೆ, ಶ್ರೀ ಮಠದ ಆವರಣದಲ್ಲಿ ಪ್ರತಿ ವರ್ಷದಂತೆ 117 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಯವರ ಹೆಸರು ನಾಮಕರಣ ಮಾಡುವ ಕಾರ್ಯಕ್ರಮವನ್ನು ಅನ್ನದಾನ ಟ್ರಸ್ಟ್ ಆಯೋಜನೆ ಮಾಡಿದೆ.