ಉತ್ತಮ ತ್ವಚೆ ಬೇಕು ಎಂಬುದು ಪ್ರತಿಯೊಬ್ಬರದು ಆಗಿರುತ್ತದೆ. ಮುಖದಲ್ಲಿ ಚಿಕ್ಕ ಕಲ್ಲಿಯಾದ ಕೂಡ ಟೆನ್ಶನ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ. ಅದಲು ಗ್ಲೋಯಿಂಗ್ ಸ್ಕಿನ್ ಬೇಕು ಎಂದು ಆಸೆ ಪಡುವರು ಕೂಡ ಜಾಸ್ತಿ. ತಮ್ಮ ತ್ವಚೆ ಹೆಚ್ಚು ಗ್ಲೋ ಆಗ್ಬೇಕು ಅಂದ್ರೆ ಈ ಸಿಂಪಲ್ ಪ್ಯಾಕ್ ನ ಟ್ರೈ ಮಾಡಿ.!

ಸೌತೆಕಾಯಿ ಮತ್ತು ಪುದಿನ
ಅರ್ಧ ಸೌತೆಕಾಯಿ ಜೊತೆಗೆ ನಾಲ್ಕೈದು ಎಲೆಯಷ್ಟು ಪುದಿನವನ್ನ ಹಾಕಿ ಚೆನ್ನಾಗಿ ರುಬ್ಬಿ. ನಂತರ ಅದರ ರಸವನ್ನ ತೆಗೆದು ಪ್ರತಿದಿನ ಟೋನರ್ ಆಗಿ ಬಳಸುವುದರಿಂದ ತ್ವಚೆ ಹೈಡ್ರೇಟ್ ಆಗಿರುತ್ತದೆ ಹಾಗೂ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ.

ಓಟ್ಮೀಲ್ ಮತ್ತು ಜೇನುತುಪ್ಪ
ಒಂದು ಟೇಬಲ್ ಸ್ಪೂನ್ ಅಷ್ಟು ಓಟ್ಮೀಲ್ ಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನು ತುಪ್ಪ ಬೆರೆಸಿ ಚೆನ್ನಾಗಿ ರುಬ್ಬಿ , ನಂತರ ಇದನ್ನ ಸ್ಕ್ರಬ್ ಆಗಿ ಬಳಸುವುದರಿಂದ ಮುಖದಲ್ಲಿರುವಂತ ಡೆಡ್ ಸ್ಕಿನ್ ಅನ್ನ ತೆಗೆದುಹಾಕಲು ಸಹಾಯಕಾರಿ ಆಗಿದೆ ಹಾಗೂ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ರೋಜ್ ವಾಟರ್
ರೋಜ್ ವಾಟರ್ ಅನ್ನು ಟೋನರ್ ಆಗಿ ಬಳಸುವುದರಿಂದ ತ್ವಚೆಯ ಪಿಹೆಚ್ ಲೆವೆಲನ್ನು ಹೆಚ್ಚು ಮಾಡುತ್ತದೆ. ಹಾಗೂ ಮುಖದಲ್ಲಿರುವಂತ ಇನ್ಫರ್ಮೇಷನ್ ಕಡಿಮೆ ಮಾಡುವುದಲ್ಲದೆ ಹೆಲ್ತಿ ತ್ವಚೆಯನ್ನು ನಿಮ್ಮದಾಗಿಸುತ್ತದೆ.

ನೀರು
ಪ್ರತಿದಿನ ದಿನಕ್ಕೆ ಎರಡರಿಂದ ಮೂರು ಲೀಟರ್ ಅಷ್ಟು ನೀರನ್ನ ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ ಹಾಗೂ ಕೊಬ್ಬಿದ ತ್ವಚೆ ನಿಮ್ಮದಾಗಿತ್ತದೆ.