• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಶಾಲೆ ಸಮೀಪ ಅಕ್ರಮ ಮದ್ಯ ಮಾರಾಟ : ದೂರು ನೀಡಿದ ಅಂಧ ವ್ಯಕ್ತಿಯನ್ನು ಥಳಿಸಿದ ಪೊಲೀಸರು

ಪ್ರತಿಧ್ವನಿ by ಪ್ರತಿಧ್ವನಿ
March 21, 2022
in ದೇಶ
0
ಶಾಲೆ ಸಮೀಪ ಅಕ್ರಮ ಮದ್ಯ ಮಾರಾಟ : ದೂರು ನೀಡಿದ ಅಂಧ ವ್ಯಕ್ತಿಯನ್ನು ಥಳಿಸಿದ ಪೊಲೀಸರು
Share on WhatsAppShare on FacebookShare on Telegram

ತಂದೆ ಮಗನ ಜೋಡಿ ಕೊಲೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ತಮಿಳುನಾಡಿನ ಪೊಲೀಸ್‌ ದೌರ್ಜನ್ಯದ ಪಟ್ಟಿಗೆ ಇನ್ನೊಂದು ಪ್ರಕರಣ ಸೇರಿಕೊಂಡಿದೆ. ದೃಷ್ಟಿ ದೋಷವುಳ್ಳ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ADVERTISEMENT

ಕವರಪಟ್ಟಿ ಗ್ರಾಮದ 29 ವರ್ಷದ ಶಂಕರ್ ಎಂಬ ವ್ಯಕ್ತಿ ಪುದುಕೊಟ್ಟೈ ಜಿಲ್ಲೆಯ ಶಾಲೆಯೊಂದರ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೂರು ನೀಡಿದ್ದಕ್ಕಾಗಿ ಪೊಲೀಸ್  ದೌರ್ಜನ್ಯಕ್ಕೆ ಒಳಗಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಾರ್ಚ್ 17 ರಂದು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಆರೋಪಿ ಪೊಲೀಸರನ್ನು ಅಮಾನತು ಮಾಡಿದ ಕೆಲವು ದಿನಗಳ ನಂತರ, ಪೊಲೀಸರು ನಡೆಸಿದ್ದ ದೌರ್ಜನ್ಯವನ್ನು ಸಂತ್ರಸ್ತ ವಿವರಿಸುತ್ತಿರುವ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್‌ ಆಗಿದೆ.

 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರ್‌ ಅವರು ಹಾಸಿಗೆ ಮೇಲೆ ಮಲಗಿಕೊಂಡೇ ತಮಗಾದ ದೌರ್ಜನ್ಯವನ್ನು ವಿವರಿಸಿದ್ದಾರೆ. ದೃಷ್ಟಿ ದೋಷ ಇರುವ ಶಂಕರ್‌, ಪುದುಕೊಟ್ಟೈ ಜಿಲ್ಲೆಯ ವಿರಾಲಿಮೈಲ್‌ ಶಾಲೆ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಾಗಿ ಪೊಲೀಸ್‌ ಕಂಟ್ರೋಲ್‌ ರೂಮ್‌(100)ಗೆ ಕರೆ ಮಾಡಿ ದೂರು ನೀಡಿದ್ದರು. ಈ ದೂರನ್ನು ವಿರಾಲಿಮಲೈ ಠಾಣೆಗೆ ವರ್ಗಾಯಿಸಲಾಗಿತ್ತು.


ವಿರಾಲಿಮಲೈ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರು ತನಗೆ ಕರೆ ಮಾಡಿ ಮೊದಲಿಗೆ ವಿವರಗಳನ್ನು ಕೇಳಿದ್ದಾರೆ. ಬಳಿಕ ನಿನಗೆ ಇದೆಲ್ಲಾ ಯಾಕೆ? ಬೇಕಾದರೆ ನೀನೂ ಮದ್ಯ ಮಾರಾಟ ಎಂದು ಜೋರು ಮಾಡಿರುವುದಾಗಿ ಶಂಕರ್‌ ತಿಳಿಸಿದ್ದಾರೆ.

ಬಳಿಕ ತನ್ನನ್ನು ವಿರಾಲಿಮಲೈ ಠಾಣೆಗೆ ತನ್ನನ್ನು ಕರೆದೊಯ್ದು ಮೂರು ಗಂಟೆಗಳ ಕಾಲ ಥಳಿಸಿದ್ದಾರೆ. ಯಾವುದರಿಂದ ಥಳಿಸಲಾಯಿತು ಅನ್ನುವುದು ಗೊತ್ತಿಲ್ಲ. ಬಹುಷ ಮರದ ದಿಮ್ಮಿನಿಂದ ನನ್ನ ಮೇಲೆ ಹಲ್ಲೆ ಮಾಡಿರಬಹುದು. ಶಬ್ಧದ ಆಧಾರದಲ್ಲಿ ಹೇಳುವುದಾದರೆ, ನನ್ನ ಮೇಲೆ ಹಲ್ಲೆ ನಡೆಸಿದ ನಾಲ್ವರಲ್ಲಿ ಒಬ್ಬರು ಮಹಿಳೆಯೂ ಇದ್ದರೂ ಎಂದು ಶಂಕರ್‌ ಆರೋಪಿಸಿದ್ದಾರೆ.  

ಶಂಕರ್ ಅವರು ಮೊದಲು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ, ಅವರು ತಮ್ಮ ದೂರನ್ನು ನಿರ್ಲಕ್ಷಿಸಿದರು ಮತ್ತು “ತನಗೆ ಮಾಡಲು ಬೇರೆ ಕೆಲಸವಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ. ಶಂಕರ್ ಅವರು ಆಕೆಯೊಂದಿಗೆ ತರ್ಕಿಸಲು ಪ್ರಯತ್ನಿಸಿ, ಬಳಿಕ ಅದನ್ನು ಕೈಬಿಟ್ಟರು ಎಂದು ಶಂಕರ್‌ ತಿಳಿಸಿದ್ದಾರೆ.  ಈ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಇತರ ಮಕ್ಕಳನ್ನು ಒತ್ತಾಯಿಸಲಾಗುತ್ತಿದೆ ಎಂದು ಶಾಲಾ ಮಕ್ಕಳು ತನಗೆ ತಿಳಿಸಿದ್ದಾರೆ, ಅದರ ಆಧಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದೆ ಎಂದು ಅವರು ಹೇಳಿದ್ದಾರೆ.

Shankar (29) with visual impairment, who was victim of police high handedness in Viralimalai for complaining about illegal liquor sale, is seen narrating his ordeal in this video. He says he was assaulted by four police personnel with a log. Three of them have been suspended. pic.twitter.com/BySWY3IxbS

— azeefa (@AzeefaFathima) March 20, 2022

ಕವರಪಟ್ಟಿಯ ಶಾಲೆಯೊಂದರ ಬಳಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಮಾರ್ಚ್ 15 ರಂದು ಶಂಕರ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ನಂತರ ಅದನ್ನು ವಿರಾಲಿಮಲೈ ಪೊಲೀಸ್ ಠಾಣೆ ಗಮನಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಶಂಕರ್ ಸರ್ಕಾರಿ ಶಾಲೆಯ ಬಳಿ ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ. ‌

 ವಿರಾಲಿಮಲೈ ಪೊಲೀಸರು ಕರೆ ಮಾಡಿದವರ ಸ್ಥಳವನ್ನು ಪತ್ತೆಹಚ್ಚಿ ಶಂಕರ್‌ನನ್ನು ಎತ್ತಿಕೊಂಡು ಬುಧವಾರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಆದರೆ, ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಶಂಕರ್ ಹೇಳಿದ್ದರಿಂದ, ಅವರ ನಡುವೆ ವಾಗ್ವಾದ ನಡೆಯಿತು ಎಂದು ದಿ ನ್ಯೂಸ್‌ ಮಿನಿಟ್‌ (TNM) ವರದಿ ಮಾಡಿದೆ.

TNM ಪುದುಕೊಟ್ಟೈ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಪಾರ್ಥಿಬನ್ ಅವರನ್ನು ಸಂಪರ್ಕಿಸಿದಾಗ, ಈ ವಿಷಯವು ಇಲಾಖಾ ಮಟ್ಟದ ತನಿಖೆಯಲ್ಲಿದೆ ಎಂದು ಹೇಳಿದ್ದಾರೆ. ವಿರಾಲಿಮಲೈ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ತಿರುಚ್ಚಿ ಡಿಐಜಿ ಶರವಣ ಸುಂದರ್ ಹೇಳಿದ್ದಾರೆ.

Tags: BJPCongress PartyCovid 19ಅಕ್ರಮ ಮದ್ಯ ಮಾರಾಟಅಂಧ ವ್ಯಕ್ತಿಪೊಲೀಸರುಬಿಜೆಪಿಶಾಲೆ ಸಮೀಪ
Previous Post

ಬಿಜೆಪಿಗೆ ಓಟ್‌ ಹಾಕಿದ ಮುಸ್ಲಿಂ ಮಹಿಳೆಗೆ ತ್ರಿವಳಿ ತಲಾಖ್‌ ಬೆದರಿಕೆ!

Next Post

ಉಕ್ರೇನ್ ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯದ ಮೆಡಿಕಲ್ ಕಾಲೇಜಿನಿಂದ ಉಚಿತ ಅವಕಾಶ : ಸಚಿವ ಸುಧಾಕರ್

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಉಕ್ರೇನ್ ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯದ ಮೆಡಿಕಲ್ ಕಾಲೇಜಿನಿಂದ ಉಚಿತ ಅವಕಾಶ : ಸಚಿವ ಸುಧಾಕರ್

ಉಕ್ರೇನ್ ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯದ ಮೆಡಿಕಲ್ ಕಾಲೇಜಿನಿಂದ ಉಚಿತ ಅವಕಾಶ : ಸಚಿವ ಸುಧಾಕರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada