ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor darshan) ಅರೆಸ್ಟ್ ಆಗಿರುವ ವಿಚಾರವಾಗಿ ನಟ ಜಗ್ಗೇಶ್ (Actor jaggesh) ಮಾರ್ಮಿಕವಾಗಿ ಟ್ವಿಟ್ ಮಾಡಿದ್ದಾರೆ. ಈ ಹಿಂದೆ ದರ್ಶನ್ ರ ಬಗ್ಗೆ ನಿಂದಿಸಿ ಮಾತನಾಡಿದ್ದರು ಎಂಬ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಜಗ್ಗೇಶ್ ರನ್ನ ಸುತ್ತುವರಿದು ಫೇರಾವ್ ಹಾಕಿದ್ರು.

ಇದೀಗ ರಾಮನಾಗು ರಾವಣನಾದರೆ ಅಂತ್ಯ ಎಂದು ಜಗ್ಗೇಶ್ ಟ್ವಿಟ್ (Tweet) ಮಾಡಿದ್ದಾರೆ .ದರ್ಶನ್ ಮೇಲೆ ಕೊಲೆ ಆರೋಪ ಬೆನ್ನಲ್ಲೇ, ಜಗ್ಗೇಶ್ ಯಾರನ್ನೂ ಕೊಲ್ಲುವ ಹಕ್ಕು ಯಾರಿಗೂ ಇಲ್ಲ .ಕರ್ಮ ಜೀವನದ ಹಿಂದೆ ಹಿಂಬಾಲಿಸುತ್ತದೆ.ಅವನ ಪಾಪ ಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಕರ್ಮಕ್ಕೆ ತಕ್ಷಣ ಫಲಿತಾಂಶ ಉಂಟು.ರಾಮನಾಗು ರಾವಣನಾದರೆ ಅಂತ್ಯ ಎಂದು ಟ್ವಿಟ್ ಮಾಡಿದ್ದಾರೆ.