• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇಹಕ್ಕೆ ಅಂಗವೈಕಲ್ಯ ಇರಬಹುದು, ಆದರೆ ಕನಸುಗಳಿಗಲ್ಲಾ : ನಿತೀಶ್‌ ಸರ್ಕಾರದ ವೈಫಲ್ಯತೆ ಬಿಚ್ಚಿಟ್ಟ ನೆಟ್ಟಿಗರು..

ಸುದೀರ್ಘ ವರ್ಷಗಳಿಂದ ಬಿಹಾರದವನ್ನು ಆಳುತ್ತಿರುವ ಮುಖ್ಯಮಂತ್ರಿ ನಿತೀಶ್‌ ದುರಾಡಳಿತದ ವಿರುದ್ಧ ನೆಟ್ಟಿಗರ ಆಕ್ರೋಶ...!

ಪ್ರತಿಧ್ವನಿ by ಪ್ರತಿಧ್ವನಿ
March 12, 2026
in Top Story, ಇದೀಗ, ದೇಶ, ರಾಜಕೀಯ, ವಿಶೇಷ
0
ದೇಹಕ್ಕೆ ಅಂಗವೈಕಲ್ಯ ಇರಬಹುದು, ಆದರೆ ಕನಸುಗಳಿಗಲ್ಲಾ : ನಿತೀಶ್‌ ಸರ್ಕಾರದ ವೈಫಲ್ಯತೆ ಬಿಚ್ಚಿಟ್ಟ ನೆಟ್ಟಿಗರು..
Share on WhatsAppShare on FacebookShare on Telegram

ಪ್ರತಿಧ್ವನಿ ವಿಶೇಷ ವರದಿ :

ADVERTISEMENT

ಬೆಂಗಳೂರು : ಮನುಷ್ಯನ ಅಂಗಕ್ಕೆ ವೈಕಲ್ಯ ಇರಬಹುದು ಆದರೆ ಕನಸುಗಳಿಗೆ ಅಲ್ಲಾ ಎಂಬುವುದಕ್ಕೆ ಇದೀಗ ದೇಶಾದ್ಯಂತ ಭಾರತೀಯರ ಗಮನ ಸೆಳೆದಿರುವ ದಿವ್ಯಾಂಗ ಬಾಲಕಿಯೇ ಸಾಕ್ಷಿಯಾಗಿದ್ದಾಳೆ.

Amit Shah: ಸಂಸತ್‌ನಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ದ ರೊಚ್ಚೆಗೆದ್ದ ಅಮಿತ್‌ ಶಾ..!#congress #parliament

ಬಿಹಾರದ ಗೋಪಾಲ್‌ ಗಂಜ್‌ ಜಿಲ್ಲೆಯ ರಾಮನಗರದ ಭೋರೆ ಬ್ಲಾಕ್‌ನ ಹುಸಾಪುರ ಗ್ರಾಮದ 15 ವರ್ಷದ ಸೋನಿ ಕುಮಾರಿಯ ಧೈರ್ಯ ಸರ್ಕಾರ ಮತ್ತು ಸಮಾಜದ ಗಮನ ಸೆಳೆದಿದೆ. ಎರಡೂ ಕಾಲುಗಳಲ್ಲಿ ಅಂಗವೈಕಲ್ಯವಿದ್ದರೂ, ಅವಳು ಪ್ರತಿದಿನ ಎರಡು ಕಿಲೋಮೀಟರ್‌ಗಳಷ್ಟು ಶಾಲೆಗೆ ನಡೆದುಕೊಂಡು, ಕುಂಟುತ್ತ ಸಾಗುತ್ತಾಳೆ ಎನ್ನುವುದು ನಿಜಕ್ಕೂ ಅವಳ ಶೈಕ್ಷಣಿಕ ತುಡಿತವನ್ನು ಎತ್ತಿ ತೋರಿಸುತ್ತದೆ.

ತಂದೆ ಇಲ್ಲದ ಈ 15 ವರ್ಷದ ಬಾಲಕಿಯು ತಾಯಿಯ ಆಸರೆಯಲ್ಲಿ ಬೆಳೆಯುತ್ತಿದ್ದಾಲೆ. ಕೂಲಿ ಕೆಲಸ ಮಾಡಿ ಮಗಳನ್ನು ಸಾಕಿ ಸಲಹುತ್ತಿರುವ ಬಡ ಜೀವದ ಬದುಕಿನಲ್ಲಿ ಈ ರೀತಿಯ ಅಗ್ನಿ ಪರೀಕ್ಷೆ ಎದುರಾದರೂ, ಇಂದಿಗೂ ಎದೆಗುಂದದೆ ಮಗಳ ಶಿಕ್ಷಣಕ್ಕಾಗಿ ತಾಯಿ ಶ್ರಮಿಸುತ್ತಿದ್ದಾಳೆ.

ನಿತೀಶ್‌ ಕುರುಡು ಆಡಳಿತಕ್ಕೆ ಸಾಕ್ಷಿಯಾದ ವೀಡಿಯೋ..

ಇನ್ನೂ ಸರ್ಕಾರದಿಂದ ವೀಲ್‌ಚೇರ್‌ಗಾಗಿ ಪಡೆಯುವುದಕ್ಕಾಗಿ ಬಾಲಕಿ ಸೋನಿ ಕುಮಾರಿ ಅರ್ಜಿ ಸಲ್ಲಿಸಿದ್ದಳು, ಆದರೆ ಅದನ್ನು ತಿರಸ್ಕರಿಸಲಾಗಿದೆ ಎಂದು ನೀವು ಯಾರಾದರೂ ಅವರ ಸಹಾಯಕ್ಕೆ ಬರುವಿರಾ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪ್ರಮುಖವಾಗಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಎನ್‌ಡಿಎ ಸರ್ಕಾರವೇ ಇರುವ ಬಿಹಾರದಲ್ಲಿ ಈ ಬಾಲಕಿಯ ಸಂಕಷ್ಟ ಪರಿಹಾರವಾಗದಿರುವುದು ನಿಜಕ್ಕೂ ದುರಂತದ ಸನ್ನಿವೇಶವಾಗಿದೆ. ಅರ್ಜಿ ಹಾಕಿದರೂ ಅದನ್ನು ತಿರಸ್ಕರಿಸಲಾಗಿರುವ ವಿಚಾರವೂ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸುದೀರ್ಘ ಕಾಲದಿಂದ ಬಿಹಾರವನ್ನು ಆಳುತ್ತಿರುವ ನಿತೀಶ್‌ ಕುಮಾರ್‌ ಸರ್ಕಾರದ ಕುರುಡು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಬಾಲಕಿ ಸೋನಿ ಕುಮಾರಿ ಶಾಲೆಗೆ ಹೋಗಿ ಬರಲು ಪರದಾಡುವ ಪರಿಸ್ಥಿತಿಯ, ಆ ಹೋರಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ದೇಶಾದ್ಯಂತ ಜನರು ಅವಳ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. ಬಡತನ ಮತ್ತು ದೈಹಿಕ ಅಂಗವೈಕಲ್ಯದ ಹೊರತಾಗಿಯೂ, ಶಿಕ್ಷಣದ ಮೇಲಿನ ಅವಳ ಉತ್ಸಾಹವು ಜನರ ಮನ ಮುಟ್ಟಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆಯೇ ಸೋನಿ ಕುಮಾರಿಯ ನೆರವಿಗೆ ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಾರೆ.

PM Modi : ದೇಶದ ಜನರನ್ನು ಸಂಕಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಸಿದ್ದವಾಗಿದೆ..! #pratidhvani

ಸೋನಿ ಕುಮಾರಿಯ ಕಷ್ಟದ ಕಥೆ ವೈರಲ್‌ ಆದ ಬಳಿಕ ಅಲಿನಗರ ಕ್ಷೇತ್ರದ ಬಿಜೆಪಿ ಶಾಸಕಿ ಮತ್ತು ಖ್ಯಾತ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಕೂಡ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರು ವೈರಲ್ ಆದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಕ್ಷಣವೇ ಈ ಬಾಲಕಿಯ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಒದಗಿಸುವಂತೆ ಗೋಪಾಲ್‌ ಗಂಜ್‌ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.

ನಂತರ ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಸಿನ್ಹಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬಾಲಕಿಗೆ ವೀಲ್‌ ಚೇರ್‌ ಒದಗಿಸುವಂತೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ತ್ರಿಚಕ್ರ ವಾಹನವನ್ನು ಒದಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ತ್ವರಿತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿನ್ಹಾ ತಿಳಿಸಿದ್ದಾರೆ.

ಇದನ್ನೂ ಓದಿ : ಊಟದ ಜೊತೆ ಹಸಿ ಈರುಳ್ಳಿ ತಿನ್ನುವವರ ಗಮನಕ್ಕೆ: ಇಂತವರು ತಿನ್ನಬಾರದು 

ಬಡತನ ಕಷ್ಟಗಳ ನಡುವೆಯೂ ಬತ್ತದ ಓದಿನ ಹಸಿವು..

ರಾಮನಗರದ ಹುಸೇಪುರ್ ಗ್ರಾಮದ ನಿವಾಸಿ ಸೋನಿ ಕುಮಾರಿ ತುಂಬಾ ಬಡ ಕುಟುಂಬದಿಂದ ಬಂದ ಬಾಲಕಿಯಾಗಿದ್ದಾಳೆ. ತಂದೆ ನಂದಕಿಸೋರ್‌ ರಾಮ್‌ ಅವರು ಸೋನಿ ಬಾಲ್ಯದಲ್ಲಿದ್ದಾಗಲೇ ಅಸುನೀಗುತ್ತಾರೆ. ಆರ್ಥಿಕ, ಕಿತ್ತು ತಿನ್ನುವ ಬಡತನ, ಆರ್ಥಿಕ ಸಂಕಷ್ಟದ ಕಾರಣಕ್ಕೆ ಶಿಕ್ಷಣವನ್ನು ತಡವಾಗಿ ಶಾಲೆಗೆ ಸೇರುವಂತಾಗಿದೆ. 15 ನೇ ವಯಸ್ಸಿನಲ್ಲಿ ಅವಳು ಈಗ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕುಟುಂಬಕ್ಕೆ ಯಾರೊಬ್ಬರೂ ಆಸರೆಯಿಲ್ಲದ ಕಾರಣಕ್ಕೆ, ಅವಳು ಶಾಲೆಗೆ ಹೋಗಿ ಬರಲು ಪ್ರತಿದಿನ ಎರಡು ಕಿಲೋಮೀಟರ್ ಕುಂಟುತ್ತಾ ಸಾಗುತ್ತಿರುವುದನ್ನು ಗಮನಿಸಿದಾಗ ಶಿಕ್ಷಣಕ್ಕೆ ಯಾವುದರೆ ಹಂಗಿಲ್ಲ ಎಂಬುವುದು ಸಾಬೀತಾಗುತ್ತದೆ.

ವೈದ್ಯೆಯಾಗಿ ಬಡವರ ಸೇವೆ ಮಾಡುವ ತುಡಿತ..

ಇನ್ನೂ ಇಷ್ಟೊಂದು ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸದೇ ಇಂದಿಗೂ ಅದೇ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದಾಳೆ. ಜೀವನದ ಹಲವು ಸವಾಲುಗಳನ್ನು ಮೀರಿಯೂ ಸೋನಿ ಕುಮಾರಿಯು, ಸಾಧನೆಯ ಹಸಿವಿರುವವರಿಗೆ ಯಾವುದರ ಅಡಚಣೆಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾಳೆ.

ಬದುಕಿನ ಕಠಿಣ ಪರಿಸ್ಥಿತಿಗಳ ನಡುವೆಯೂ, ಸೋನಿ ಕುಮಾರಿಯ ಚೈತನ್ಯವು ಅಚಲವಾಗಿದೆ. ಓದನ್ನು ಮುಂದುವರೆಸಿ ಬಡವರು ಮತ್ತು ನಿರ್ಗತಿಕರ ಸೇವೆ ಮಾಡಲು ಅವಳು ವೈದ್ಯೆಯಾಗುವ ಕನಸು ಕಂಡಿದ್ದಾಳೆ. ತಾನು ಒಬ್ಬ ಅಂಗವೈಕಲ್ಯೆ ಎಂಬುವುದನ್ನು ಮರೆತು ಇತರರಂತೆ ಸೋನಿ ಕುಮಾರಿಯು ಸಮಾಜದ ಒಳಿತಿಗಾಗಿ ಹಾಗೂ ಆರೋಗ್ಯ ಕ್ಷೇತ್ರಕ್ಕಾಗಿ ತನ್ನ ಸೇವೆಯನ್ನು ಸಮರ್ಪಿಸುವ ಮನೋಭಾವ ತಾಳಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

Tags: Bihar Viral GirlBJP MLAChief Minister Nitish Kumar'Gopalganj newsGovernment of BiharJDU GovernmentMaithili ThakurNDA GovernmentPhysically Challenged GirlPratidhvaniSchool EducationSocial Media Power
Previous Post

BREAKING NEWS : ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ; ತೈಲ ಸಮಸ್ಯೆಗೆ ಪರಿಹಾರ ನೀಡಿದ ಕೇಂದ್ರ ಸರ್ಕಾರ..

Next Post

ಫಾರೂಕ್‌ ಅಬ್ದುಲ್ಲಾ ಮೇಲಿನ ಹಲ್ಲೆ ಖಂಡನೀಯ : ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ..

Related Posts

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ
Top Story

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

by ಪ್ರತಿಧ್ವನಿ
April 11, 2026
0

2019ರಲ್ಲಿ ಒಂದು ಕನಸು ಆರಂಭವಾಯಿತು…ಸತ್ಯದ ಧ್ವನಿಯನ್ನು ಜನರಿಗೆ ತಲುಪಿಸುವ ಕನಸು…ಆ ಕನಸಿನ ಹೆಸರು – ಪ್ರತಿಧ್ವನಿ ನ್ಯೂಸ್. ಇಂದು, 2026ರ ಏಪ್ರಿಲ್ 11… ಪ್ರತಿಧ್ವನಿ ತನ್ನ ಏಳು...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
Next Post
ಫಾರೂಕ್‌ ಅಬ್ದುಲ್ಲಾ ಮೇಲಿನ ಹಲ್ಲೆ ಖಂಡನೀಯ : ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ..

ಫಾರೂಕ್‌ ಅಬ್ದುಲ್ಲಾ ಮೇಲಿನ ಹಲ್ಲೆ ಖಂಡನೀಯ : ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada