ಬೆಳಗಾವಿ (Belagavi): ದಶಕಗಳಿಂದ ದಲಿತ ಸಿಎಂ (Dalit CM) ಕೂಗು ಇದೆ ಎಂದು ಸಚಿವರಾದ ಸತೀಶ್ ಜಾರಕಿಹೊಳಿ (satish jarkiholi) ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹೊತ್ತಲ್ಲಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಎದ್ದಿರುವ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ದಶಕಗಳಿಂದ ದಲಿತ ಸಿಎಂ ಕೂಗು ಇದೆ ಎಂದಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ (D.K.Shivakumar) ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಮತ್ತೊಮ್ಮೆ ತೇಲಿಬಿಟ್ಟಿರುವುದರಿಂದ ದಲಿತ ಸಿಎಂ ವಿಷಯ ಮುನ್ನೆಲೆಗೆ ಬಂದಿದೆಯೇ ಎಂವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಕಳೆದ 20-25 ವರ್ಷಗಳಿಂದ ಮುಖ್ಯಮಂತ್ರಿಯಾಗುವ ಕನಸು ಹೊತ್ತಿದ್ದಾರೆ. ಈ ವಿಷಯವೇ ಬೇರೆ. ಖರ್ಗೆ ಕಾಲದಿಂದಲೂ ದಲಿತ ಸಿಎಂ ಬೇಡಿಕೆ ಈಡೇರಿಲ್ಲ ಎಂದರು.
ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ನಲ್ಲೂ ದಲಿತ ಸಿಎಂ ಕೂಗು ಇದೆ. ಆದರೆ ಇದುವರೆಗೆ ಯಾವುದೇ ಪಕ್ಷದಲ್ಲೂ ದಲಿತ ವ್ಯಕ್ತಿ ಮುಖ್ಯಮಂತ್ರಿಯಾಗಿಲ್ಲ. ಈ ವಿಷಯದಲ್ಲಿ ನಮ್ಮ ಪಕ್ಷ 99 ರವರೆಗೆ ಬಂದು ಔಟಾಗಿಬಿಡುತ್ತದೆ. ಸೆಂಚುರಿ ಬಾರಿಸಲ್ಲ ಎಂದು ಸತೀಶ್ ಜಾರಕಿಹೊಳಿ ನಗುತ್ತಾ ಪ್ರತಿಕ್ರಿಯಿಸಿದ್ದಾರೆ.
2013ರಲ್ಲಿ ಜಿ. ಪರಮೇಶ್ವರ್ (G.Parmeshwar) ಅವರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಇತ್ತು. ಆದರೆ ಅವರಿಗೂ ಸಿಎಂ ಆಗುವ ಭಾಗ್ಯ ಸಿಗಲಿಲ್ಲ. ಪರಿಶಿಷ್ಟರು ಕಾಂಗ್ರೆಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಅವರಿಗೆ ದೊಡ್ಡ ಸ್ಥಾನ ಸಿಗಬೇಕು. ಆದರೆ ಹೈಕಮಾಂಡ್ ಮೇಲೆ ಪ್ರಭಾವ ಬೀರಲು ನಾವು ವಿಫಲವಾಗಿದ್ದೇವೆ. ಲೋಕಸಭೆ ಚುನಾವಣೆ ನಂತರ ಈ ಕುರಿತು ಚರ್ಚಿಸುತ್ತೇವೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ.
#karnataka #belagavi #dalitcm #satishjarkiholi #mallikarjunakharge






