ತೆಲುಗು ನಟ ಅಲ್ಲು ಅರ್ಜುನ್ ಭೇಟಿ ಮಾಡಲು 42 ನಿಯಮಗಳಿವೆ, ಅವೆಲ್ಲವನ್ನೂ ಪಾಲಿಸಿದರೆ ಮಾತ್ರ ನಿಮಗೆ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ! ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಿವುಡ್‌ನ ಖ್ಯಾತ ಬ್ರ್ಯಾಂಡ್ ಸ್ಟ್ರ್ಯಾಟಜರ್ ಕಾವೇರಿ ಬರುವಾ ನಾನು ಸಾಕಷ್ಟು ಜನರೊಟ್ಟಿಗೆ ಕೆಲಸ ಮಾಡಿದ್ದೀನಿ. ಆದರೆ ಅಲ್ಲು ಅರ್ಜುನ್ ಭೇಟಿಗೆ ಹೋದಾಗ 42 ಷರತ್ತುಗಳ ಪಟ್ಟಿ ಕೊಟ್ಟರು. ಮ್ಯಾನೇಜರ್‌ಗೆ ಮ್ಯಾನೇಜರ್, ಆ ಮ್ಯಾನೇಜರ್‌ಗೆ ಮತ್ತೊಬ್ಬ ಹೀಗೆ ವ್ಯವಸ್ಥೆ ಇರುತ್ತೆ” ಎಂದಿದ್ದಾರೆ.

ಅಲ್ಲು ಅರ್ಜುನ್ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು, ಅವರಿಗೆ ಹಸ್ತಲಾಘವ ನೀಡಬಾರದು, ಅನುಮತಿ ಇಲ್ಲದೆ ಮಾತನಾಡಬಾರದು, ಮಧ್ಯದಲ್ಲಿ ಅಲುಗಾಡಬಾರದು” ಎಂಬಿತ್ಯಾದಿ ಅನೇಕ ನಿಬಂಧನೆಗಳಿವೆ ಎಂದೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ಕುರಿತು ಅಲ್ಲು ಅರ್ಜುನ್ ತಂಡದಿಂದ ಪ್ರೆಸ್‌ನೋಟ್ ರಿಲೀಸ್ ಮಾಡಿದ್ದಾರೆ. ಅಲ್ಲು ಅರ್ಜುನ್ ವಿರುದ್ಧದ ಹೇಳಿಕೆಗಳೆಲ್ಲಾ ಸುಳ್ಳು. ಅವರು ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುತ್ತಾರೆ. ನಾವು ಈ ಸುಳ್ಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಕಾನೂನು ತಂಡವು ಇದಕ್ಕೆ ಕಾರಣರಾದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಾಗಿದೆ. ದಯವಿಟ್ಟು ಸತ್ಯಾಂಶ ಗೊತ್ತಿಲ್ಲದೇ ಯಾವುದೇ ಮಾಹಿತಿಯನ್ನು ಹರಡಬೇಡಿ” ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.






