ನಟ ನಿರ್ದೇಶಕ ನಿರ್ಮಾಪಕ ರಕ್ಷಿತ್ ಶೆಟ್ಟಿ ಮೇಲೆ ದಾಖಲಾಯ್ತು ಎಫ್ ಐ ಆರ್, ಕಿರಿಕ್ ಪಾರ್ಟಿ ಯಲ್ಲಿ ಹಂಸಲೇಖರ ಒಂದು ಟ್ಯೂನ್ ಕದ್ದರು ಎಂದು ಈ ಹಿಂದೆ ಆರೋಪಿಸಲಾಗಿತ್ತು, ಇದೀಗ ಎರಡು ಚಿತ್ರದ ಎರಡು ಹಾಡನ್ನೇ ಕದ್ದಿದ್ದಾರೆಂದು ದೂರು .
ನಟ ದಿಗಂತ್ ಹಾಗು ನಟ ಯೋಗೇಶ್ ನಟನೆಯ ಚಿತ್ರದಲ್ಲಿ ಕದ್ದ ಹಾಡುಗಳನ್ನ ಬಳಸಿರೋ ಆರೋಪ ರಕ್ಷಿತ್ ಶೆಟ್ಟಿ ಹಾಗು ಅವರ ಒಡೆತನದ ಪರವಃ ಸ್ಟೂಡಿಯೋ ಮೇಲೆ ಎಫ್ ಐ ಆರ್ ದಾಖಲು. ಗಾಳಿಮಾತು ಹಾಗು ನ್ಯಾಯ ಎಲ್ಲಿದೆ ಎಂಬ ಹಾಡನ್ನ ಕದ್ದಿರುವ ಆರೋಪ, ಒಟಿಟಿಯಲ್ಲಿ ಚಿತ್ರನೋಡುವಾಗ ಕಾಪಿರೈಟ್ಸ್ ಮಾಲೀಕತ್ವ ಪಡೆದಿದ್ದವರಿಂದ ದೂರು ದಾಖಲು. ನ್ಯಾಯ ಎಲ್ಲಿದೆ ಟೈಟಲ್ ಸಾಂಗ್ ಹಾಗು ‘ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ” ಎಂಬ ಹಾಡಗಳನ್ನ ಕದ್ದಿರುವ ಆರೋಪ.
ಈ ಹಿಂದೆ ನವೀನ್ ಕುಮಾರ್ ಎಂಬುವವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡ್ತಿದ್ದ ಬ್ಯುಸಿನೆಸ್ ಮೆನ್ ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು ಆದರೂ ಆ ಹಾಡನ್ನ ಮಾಲೀಕರ ಅನುಮತಿ ಇಲ್ಲದೆ ಬಳಕೆ ಚಿತ್ರದಲ್ಲಿ ಎರಡೂ ಹಾಡುಗಳನ್ನ ಬಳಕೆ ಮಾಡಿದ್ದಾರೆಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ನವೀನ್ ರಿಂದ ದೂರು ದಾಖಲು..