2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election 2023) ಕೌಂಟ್‌ಡೌನ್ ಶುರುವಾಗಿದೆ. ಇದೇ ಮೇ 10ರಂದು ಎಲೆಕ್ಷನ್(election) ನಡೆಯಲಿದ್ದು, ಮದ್ದೂರು ಕ್ಷೇತ್ರದಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಪರ ಸ್ಯಾಂಡಲ್‌ವುಡ್ ನಟ ದರ್ಶನ್(sandalwood actor darshan) ಮತ ಪ್ರಚಾರ ನಡೆಸಲು ಅಖಾಡಕ್ಕಿಳಿದಿದ್ದಾರೆ. ಮದ್ದೂರು ಸುತ್ತಮುತ್ತಲಿನ ಹಳ್ಳಿ ಹಳ್ಳಿಗಳಿಗೂ ತಿರುಗಿ ನಟ ದರ್ಶನ್ , ʻಕೈʼ ಅಭ್ಯರ್ಥಿ ಪರ ಅಬ್ಬರದ ಪ್ರಚಾರ(campaign) ನಡೆಸುತ್ತಿದ್ದಾರೆ.
ಡಿ ಬಾಸ್‌ರನ್ನ ನೋಡಲು ಗಲ್ಲಿ ಗಲ್ಲಿಗಳಲ್ಲೂ ಜನ ಕಿಕ್ಕಿರಿದು ಸೇರಿದ್ದಾರೆ. ಒಂದು ಕಡೆ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಸೇರ್ಪಡೆಯಾದ ಸಂಸದೆ ಸುಮಲತಾ ಅಂಬರೀಶ್,(sumalata ambareesh) ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ(BJP candidate) ಪರ ಮತಯಾಚಿಸುತ್ತಿದ್ದಾರೆ. ಇದೀಗ ಮತ್ತೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್(congress) ಅಭ್ಯರ್ಥಿ ಪರವಾಗಿ ಮತಬೇಟೆಗಿಳಿದಿದ್ದಾರೆ. ಒಟ್ನಲ್ಲಿ ಮದ್ದೂರು ಕ್ಷೇತ್ರದಲ್ಲಿ ಚುನಾವಣಾ(election) ರಣರಂಗವೇ ನಡೆಯುತ್ತಿದೆ.