
ಭೋಪಾಲ್:ಶಿಕ್ಷಣ ಇಲಾಖೆಯ ಕಿರಿಯ ಲೆಕ್ಕ ಪರಿಶೋಧಕ ರಮೇಶ್ ಹಿಂಗೋರಾಣಿ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಹಿಂಗೋರಾಣಿ ಅಕ್ರಮ ಆಸ್ತಿ ಹೊಂದಿರುವ ಆರೋಪ ಹೊತ್ತಿದ್ದು ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ, ದಾಳಿಯ ವೇಳೆ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ ಹಿಂಗೋರಾಣಿ ಅವರ ಮನೆಯಲ್ಲಿ ಕೇವಲ 90 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇದಲ್ಲದೇ ಲಕ್ಷಾಂತರ ಮೌಲ್ಯದ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ದೊಡ್ಡ ಪ್ರಮಾಣದಲ್ಲಿ ನಗದು ಕೂಡ ಪತ್ತೆಯಾಗಿದ್ದು, ಇದರ ಎಣಿಕೆಗೆ ಯಂತ್ರವನ್ನು ತರಲಾಗಿದೆ ಎಂದು ಹೇಳಿದ್ದಾರೆ.