
ಒಂದು ಕಡೆ ಎಕ್ಸ್ ಪೈರಿ ಆಗಿರೋ ಹ್ಯಾಂಡ್ ಗ್ಲೌಸ್
ಮತ್ತೊಂದೆಡೆ ಅವಧಿ ಮುಗಿದ ರಾಶಿ-ರಾಶಿ ಪಿನಾಯಿಲ್ ಬಾಕ್ಸ್
ಆಸ್ಪತ್ರೆ ನೋಡಿದ್ರೆ ವೈದ್ಯರು, ಸಿಬ್ಬಂದಿಗಳಿಲ್ಲದೇ ಖಾಲಿ-ಖಾಲಿ
ಕಾರಣ ಕೇಳಿದ್ರೆ ಹಬ್ಬ ಹಾಗಾಗಿ ಯಾರು ಇಲ್ವಂತೆ
ಗದಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೇ ಬೇಕಿದೆ ಸೂಕ್ತ ಚಿಕಿತ್ಸೆ

ಗದಗನ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿರೋ ಸರಕಾರಿ ಸಮುದಾಯ ಆಸ್ಪತ್ರೆ ದುಸ್ಥಿತಿ
ಸರ್ಕಾರ ಕೋಟಿ-ಕೋಟಿ ಸುರಿದು ಸುಸಜ್ಜಿತ ಕಟ್ಟಡ ನಿರ್ಮಿಸಿದ್ರೆ
ಅಧಿಕಾರಿಗಳ ಬೇಜವಾಬ್ದಾರಿಗೆ ಮೂಲೆಗುಂಪಾದ ವೈದ್ಯಕೀಯ ಉಪಕರಣಗಳು
ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಇರೋದೇ ಇಲ್ಲ ಅನ್ನೋ ಆರೋಪ
ಸ್ಕ್ಯಾನ್ ಮಾಡಬೇಕಾದ್ರೆ ಖಾಸಗಿ ಸ್ಕ್ಯಾನ್ ಸೆಂಟರ್ ಗಳಿಗೆ ರೆಫರ್ ಮಾಡ್ತಾರೆ ಅನ್ನೋ ಬಹುದೊಡ್ಡ ಆರೋಪ
35 ಬೆಡ್ ಗಳನ್ನ ಹೊಂದಿದ್ರೂ ಕೂಡಾ ಆಸ್ಪತ್ರೆ ಮಾತ್ರ ಖಾಲಿ ಖಾಲಿ
ಜ್ವರ, ಕೆಮ್ಮಿಗೆ ಮಾತ್ರ ಚಿಕಿತ್ಸೆ, ಬೇರೆ ಏನಾದ್ರು ಆದ್ರೆ ಮತ್ತೊಂದು ಆಸ್ಪತ್ರೆಗೆ ರೆಫರ್ ಮಾಡ್ತಾರಂತೆ
ಹೆರಿಗೆ ಸೌಲಭ್ಯ ಇದ್ರೂ ಕೂಡಾ ಬೇರೆಡೆ ಕಳಿಸ್ತಾರೆ ಅನ್ನೋ ಗಂಭೀರ ಆರೋಪ
ವೈದ್ಯರೇ ಇರಲ್ಲ ಅಂದ್ರೆ ತುರ್ತು ಚಿಕಿತ್ಸೆ ಅಂತೂ ಮರೀಚಿಕೆ ಮಾತು

ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಬೇಸತ್ತ ಸ್ಥಳೀಯರು
ಇಬ್ಬರು ತಜ್ಞ ವೈದ್ಯರು, ಒಬ್ಬ ಆಯುಶ್ ವೈದ್ಯಾಧಿಕಾರಿ ಒಟ್ಟು 24 ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಕೆಲಸ
ಆದ್ರೆ ಒಬ್ರು,ಇಬ್ರೊ ನರ್ಸ್ ಗಳು ಮಾತ್ರ ಇರ್ತಾರೆ ಅವ್ರೆ ಇಲ್ಲಿ ವೈದ್ಯರು ಅಂತೀರೊ ಸ್ಥಳೀಯರು

ದೇವರು ವರ ಕೊಟ್ರು,ಪೂಜಾರಿ ಫಲಸಲಿಲ್ಲ ಅನ್ನೊ ಹಾಗೇ ಸರ್ಕಾರ ಅನುದಾನ ಕೊಟ್ಟು ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದ್ರು
ಅಧಿಕಾರಿಗಳ ಬೇಜವಾಬ್ದಾರಿಗೆ ಬಡವರ ಪರದಾಟ













