ಹುಬ್ಬಳ್ಳಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಫೋಟೋಗಳನ್ನು ಉದ್ದೇಶ ಪೂರ್ವಕವಾಗಿಯೇ ರಿಲೀಸ್ ಮಾಡುತ್ತ, ಖುದ್ದು ರಾಜ್ಯ ಸರ್ಕಾರವೇ ವೈಭವೀಕರಿಸುವ ಕೆಲಸ ಮಾಡಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇರ ಆರೋಪ ಮಾಡಿದ್ದಾರೆ.

ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿರುವುದು ರಾಜ್ಯ ಕಂಡಂತಹ ಅತ್ಯಂತ ಕ್ರೂರ ಹತ್ಯೆ ಎಂದಿರುವ ಕೇಂದ್ರ ಸಚಿವರು,
ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಬಂದ ನಂತರ ಅವುಗಳ ಬಗ್ಗೆ ರಾಜ್ಯದಲ್ಲಿ ಚರ್ಚೆ ಜೋರಾಯಿತು. ಆ ಚರ್ಚೆಯನ್ನು ಡೈವರ್ಟ್ ಮಾಡಲು ಮತ್ತೆ ಮತ್ತೆ ದರ್ಶನ್ ಪ್ರಕರಣ ಎಳೆದು ತರಲಾಗ್ತಿದೆ. ಸಂಕುಚಿತ ಷಡ್ಯಂತ್ರ ಮನೋಭಾವದಿಂದ ಹೀಗೆ ಮಾಡಲಾಗಿದೆ ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕು. ಆದರೆ ರಿಟ್ರೀವ್ ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡಿರೋದು ಅಕ್ಷಮ್ಯ ಅಪರಾಧ. ಇದನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಕಾರಣಿಕರ್ತರಾದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ವಿಷಯಾಂತರ ಮಾಡಲೆಂದೇ ಹೀಗೆ ಮಾಡಲಾಗಿದೆ ಎಂದಿದ್ದಾರೆ ಪ್ರಹ್ಲಾದ್ ಜೋಶಿ.

ಆದರೆ ಕೇಂದ್ರ ಸಚಿವರ ಆರೋಪವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅಲ್ಲಗಳೆದಿದ್ದಾರೆ. ಮುಡಾ ಹಗರಣ ಡೈವರ್ಟ್ ಮಾಡೋಕೆ ದರ್ಶನ್ ಪೋಟೋ ರಿವಿಲ್ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆ ಸುಳ್ಳು ಎಂದಿರುವ ಖಂಡ್ರೆ, ಯಾವುದೇ ಡೈವರ್ಟ್ ಮಾಡಲ್ಲ, ಉತ್ತಮ ಆಡಳಿತ ನೀಡ್ತಿದ್ದೇವೆ..




