ನಟ ದರ್ಶನ್ ಹಾಗೂ ಗೆಳತಿ ಪವಿತ್ರಾಗೌಡ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಯಾಗಿ ಸುಮಾರು 6 ತಿಂಗಳ ಕಾಲ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲುಗಳಲ್ಲಿ ಬಂಧಿಯಾಗಿ ಕಾಲ ಕಳೆದಿದ್ದರು. ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ಎಲ್ಲಾ ಆರೋಪಿಗಳಿಗೆ ಜಾಮೀನು ಕೊಟ್ಟ ಬಳಿಕ ಇಬ್ಬರೂ ಪರಸ್ಪರ ಭೇಟಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇವತ್ತು ಕೋರ್ಟ್‌ಗೆ ಹಾಜರಾಗಿದ್ದ ಪವಿತ್ರಾಗೌಡ ಹಾಗು ದರ್ಶನ್ ಪರಸ್ಪರ ಮುಖಾಮುಖಿ ಆಗಿದ್ದರು. ಕೋರ್ಟ್ ಹಾಲ್‌ನಲ್ಲಿ ಗೆಳಯ ಎದುರಾಗ್ತಿದ್ದ ಹಾಗೆ ಗೆಳತಿ ಪವಿತ್ರಾಗೌಡ ಕಣ್ಣುಗಳು ಮಾತನಾಡತೊಡಗಿದವು. ಪವಿತ್ರಾಗೌಡ ಏನನ್ನೂ ಹೇಳದಿದ್ದರೂ ದರ್ಶನ್‌ಗೆ ಎಲ್ಲವೂ ಅರ್ಥವಾಗಿತ್ತು. ಮನಸ್ಸಿನ ಮಾತಿಗೆ ಮರುಗಿನ ದರ್ಶನ್ ಪವಿತ್ರಾಗೌಡರ ಬೆನ್ನು ತಟ್ಟಿ ಸಮಾಧಾನ ಮಾಡಿದ್ದು ಎಲ್ಲರನ್ನೂ ಕ್ಷಣಕಾಲ ದಿಗಿಲು ಹುಟ್ಟಿಸುವಂತಿತ್ತು. ಕೂಡಲೇ ಕಣ್ಣೀರು ಒರೆಸಿಕೊಂಡ ಪವಿತ್ರಾಗೌಡ ಸ್ನೇಹಿತನ ಬೆಂಬಲದಿಂದ ಗೆಲ್ಲುವ ಉತ್ಸಾಹ ತೋರಿಸಿದ್ರು.
ಸುಬ್ಬ-ಸುಬ್ಬಿ ಎಂದು ವಾಟ್ಸಪ್ ಚಾಟ್‌ನಲ್ಲಿ ಮಾತನಾಡುತ್ತಿದ್ದ ದರ್ಶನ್ ಹಾಗು ಪವಿತ್ರಾಗೌಡ ಎಷ್ಟು ಆತ್ಮೀಯರು ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಸ್ನೇಹಿತೆಗೆ ಯಾರೋ ಒಬ್ಬ ಅನಾಮಿಕ ವ್ಯಕ್ತಿಯೊಬ್ಬ ಅಶ್ಲೀಲ ಮೆಸೇಜ್ ಮಾಡಿದ ಅನ್ನೋ ಕಾರಣಕ್ಕೆ ಕಡುಕಷ್ಟವನ್ನೇ ಮೈ ಮೇಲೆ ಎಳೆದುಕಕೊಳ್ಳುವುದು ಅಂದ್ರೆ ಸುಲಭದ ಮಾತಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಅಂತಹ ಸ್ನೇಹಿತನನ್ನು ಸಂಕಷ್ಟಕ್ಕೆ ಸಿಲುಕಿಸಿದ್ನಾ ಅನ್ನೋ ನೋವು ಪವಿತ್ರಾಗೌಡಳಿಗೆ ಕಾಡುತ್ತಿತ್ತು. ಆ ನೋವು ಪವಿತ್ರಾಗೌಡಳ ಕಣ್ಣಲ್ಲಿ ಹೊರ ಬಂದಿತ್ತು. ಎಲ್ಲವನ್ನೂ ಸಮಾಧಾನದಿಂದ ಸ್ವೀಕರಿಸಿದ ದರ್ಶನ್, ಹೇಗಿದ್ದೀಯಾ ಸುಬ್ಬ ಅಂತಾ ಹೇಳದೇ ಇದ್ದರೂ ಸುಬ್ಬಿ ನೀನ್ ಹೇಗಿದ್ಯಾ ಅಂತಾ ದರ್ಶನ್ ಕೇಳದೆ ಬೆನ್ನು ತಟ್ಟಿ ಎಲ್ಲವನ್ನೂ ಹೇಳಿಕೊಂಡರು.
10 ವರ್ಷದ ಹಿಂದೆ ಶುರುವಾದ ಗೆಳಯ ಗೆಳತಿಯ ಸಂಬಂಧಕ್ಕೆ ಜೈಲುವಾಸ ಅಂತ್ಯವಾಗುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇವತ್ತು ಸೆಷನ್ ಕೋರ್ಟ್ನಲ್ಲಿ ಆರೋಪಗಳ ಪಟ್ಟಿ ಮಾಡಬೇಕಿದ್ದ ಕಾರಣ ಕೋರ್ಟ್‌ಗೆ ಹಾಜರಾಗಿದ್ದರು. ದರ್ಶನ್, ಪವಿತ್ರಾ ಭೇಟಿಯಾಗ್ತಾರಾ..? ಏನಾದ್ರೂ ಮಾತುಕತೆ ಆಗುತ್ತಾ..? ಅಂತಾ ಸಾಕಷ್ಟು ಜನರು ಕುತೂಹಲದಿಂದ ಕಾಯುತ್ತಿದ್ರು. ಮೊದಲೇ ಕೋರ್ಟ್ ಹಾಲ್ ತಲುಪಿದ್ದ ಪವಿತ್ರಾಗೌಡ, ದರ್ಶನ್ ಬರ್ತಿದ್ದ ಹಾಗೆ ಎದ್ದು ನಿಂತರು. ದರ್ಶನ್ ನೋಡ್ತಿದ್ದಂತೆ ಕಣ್ಣೀರು ಹಾಕಿದ್ರು. ನಿನ್ನೆಲ್ಲಾ ನೋವುಗಳಿಗೆ ನಾನೇ ಕಾರಣ ಎನ್ನುವಂತೆ ಬೆನ್ನು ತಟ್ಟಿ ಸಮಾಧಾನ ಮಾಡಿದ ದರ್ಶನ್, ನಿನಗೆ ಹೇಳದೆ ರೇಣುಕಾಸ್ವಾಮಿಯನ್ನು ಕರೆಸಿದ್ದು, ನಾನೊಬ್ಬನೇ ಮಾತುಕತೆ ಮಾಡಿ ಕಳುಹಿಸಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗ್ತಿರಲಿಲ್ಲ. ಗುಂಪಿನ ನಡುವೆ ನಿಲ್ಲಿಸಿದ್ದೇ ಇಷ್ಟಕ್ಕೆಲ್ಲಾ ಕಾರಣ ಆಯ್ತು ಕಣೇ ಸುಬ್ಬಿ ಎನ್ನುವ ಭಾವದಲ್ಲಿ ನಿಂತು ಸಮಾಧಾನ ಮಾಡಿದ್ದು ಕಂಡು ಬಂತು.