ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದ್ದು ಸ್ಟ್ರಾಂಗ್ ರೂಮ್ಗೆ ಸಿಬ್ಬಂದಿ ಹಾಗೂ ಏಜೆಂಟ್ಗಳು ಆಗಮಿಸಿದ್ದಾರೆ. ಐಡಿ ಕಾರ್ಡ್ ಹೊಂದಿರುವವರಿಗೆ ಮಾತ್ರ ಸ್ಟ್ರಾಂಗ್ ರೂಮ್ ಎಂಟ್ರಿಗೆ ಅನುಮತಿ ನೀಡಲಾಗುತ್ತಿದೆ.

ಇಂದು ರಾಜ್ಯದ 2600ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಬಾರಿ ಯಾವುದೇ ಕ್ಷೇತ್ರದಲ್ಲಿ ಇವರೇ ಗೆಲ್ಲುವ ಕುದುರೆ ಎಂದು ಹೇಳುವುದು ಕಷ್ಟವಿದ್ದು ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
8 ಗಂಟೆಯಿಂದ ಏಜೆಂಟ್ಗಳ ಸಮ್ಮುಖದಲ್ಲಿ ಚುನಾವಣಾ ಅಧಿಕಾರಿಗಳು ಮತ ಎಣಿಕೆ ಆರಂಭಿಸಲಿದ್ದಾರೆ. 8 ಗಂಟೆಗೆ ಪೋಸ್ಟಲ್ ಮತಗಳ ಎಣಿಕೆ ಆರಂಭಗೊಳ್ಳಲಿದ್ದು 8:30 ರಿಂದ ಇವಿಎಂ ಮತ ಎಣಿಕೆ ಶುರುವಾಗಲಿದೆ.