ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಭಾಷಣ ಮಾಡಿದ್ದಾರೆ. ನಮ್ಮನ್ನು ನೋಡಿ ಅಲ್ಲ, ಜೊಲ್ಲೆಯವರನ್ನು ನೋಡಿ ಅಲ್ಲ, ಹಿಂದುತ್ವ, ಸನಾತನ ಧರ್ಮ ಉಳಿಸಲು ಬಿಜೆಪಿಗೆ ಮತ ನೀಡಬೇಕು ಎಂದಿದ್ದಾರೆ. ಮೊದಲೆಲ್ಲ ಸ್ಮಶಾನಕ್ಕೆ ಹೋಗಿ ಹೊಸ ಕಾರಿನ ಪೂಜೆ ಮಾಡ್ತಿದ್ರು. ಈಗೀಗ ದೇವಸ್ಥಾನಗಳ ಕಡೆ ಮುಖ ಮಾಡಿದ್ದಾರೆ. ಎಷ್ಟು ದಿನ ಅಂತ ಸಾಹುಕಾರ್‌ಗೆ ಕೈ ಮುಗಿತೀರಾ. ನಿಮ್ಮಲ್ಲಿ ಸ್ವಾಭಿಮಾನಿ ಇಲ್ಲವಾ..? ಇನ್ಮುಂದೆ ಸಾಹುಕಾರ್‌ನ ಬೆಕ್ಕು, ನಾಯಿಗಳಿಗೆ ಸಲಾಂ ಹೊಡೆಯಬೇಕಾಗುತ್ತದೆ ಎಂದು ಪರೋಕ್ಷವಾಗಿ ಸತೀಶ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ಬೆಳಗಾವಿಯ ಎಲ್ಲ ಸಮಾಜದವರು ಎಂಎಲ್‌ಎ, ಎಂಪಿಗಳು ಆಗಬೇಕು ಎಂದಿರುವ ಯತ್ನಾಳ್, ಹಿಂದೂ ಅನ್ನೋದ್ರ ಅರ್ಥ ಅಸಹ್ಯ ಎಂದು ಹೇಳಿದ್ರು. ಹನ್ನೊಂದು ರೂಪಾಯಿ ಪಟ್ಟಿ ನೀಡುವವರೆಂದು ಜರಿದ್ರು. ಯಾರೂ ಸಹ ಅಂಜುವ ಅವಶ್ಯಕತೆ ಇಲ್ಲ.
ಬಸಗೌಡರನ್ನು ಚುನಾವಣೆಯಲ್ಲಿ ಸೋಲಿಸಲು ವಿಜಯಪುರಕ್ಕೆ 15 ಜನರನ್ನು ಜಾರಕಿಹೊಳಿ ಕಳುಹಿಸಿದ್ರು. ಸೋಲಿಸಲು ಅನೇಕ ಕಡೆಗಳಿಂದ ದುಡ್ಡು ಬಂತು. ಆದರೂ ನನ್ನನ್ನು ಸೋಲಿಸಲು ಆಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ದೇಶಕ್ಕೆ ಒಬ್ಬ ನೆಹರೂ ತರಲು ಲಕ್ಷಾಂತರ ಭಾರತೀಯರ ಮಾರಣಹೋಣ ಮಾಡಬೇಕಾಯಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್ ಸೋಲಿಸಿತು. ಗಾಂಧಿ ಕುಟುಂಬದವರು ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಘೋಷಿಸಿಕೊಂಡರು. ಅಂಬೇಡ್ಕರ್‌ವರು ನಿಧನರಾದಾಗ ಒಂದು ಎಕರೆ ಜಾಗ ನೀಡಲಿಲ್ಲ. ನೆಹರೂ ನಿಧನರಾದಾಗ ಭಾರತ ಸರ್ಕಾರ 58 ಎಕರೆ ಜಾಗ ನೀಡಿದೆ ಎಂದು ಟೀಕಿಸಿದರು.
ರೈತರು ಎರಡು ವರ್ಷಕ್ಕೊಮ್ಮೆ ಪರಿಹಾರ ಬರಲೆಂದು ಆಶಿಸುತ್ತಾರೆ ಎಂದು ಹೇಳಿಕೆ ನೀಡಿದ್ರು. ರೈತರಾದವರು ಯಾರಾದ್ರೂ ಹಾಗೇ ಮಾಡುತ್ತಾರೆಯೇ..? ಎಂದು ಪ್ರಶ್ನಿಸಿದ ಯತ್ನಾಳ್, ನಾನು ಹೇಳ್ತೀನಿ ನಿನಗೆ ಐದು ಕೋಟಿ ಕೊಡ್ತೀನಿ, ನೀನು ಆತ್ಮಹತ್ಯೆ ಮಾಡಿಕೋ. ಡಿ.ಕೆ ಶಿವಕುಮಾರ್‌ಗೆ ಹೇಳಿದೆ 50 ಕೋಟಿ ಕೊಡ್ತೇನೆ, ನೀನು ಉರುಳು ಹಾಕಿಕೊ ಎಂದು. ರೈತರ ಬಗ್ಗೆ ಇಷ್ಟು ಕೀಳು ಮಟ್ಟದಲ್ಲಿ ಮಾತನಾಡುವ ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇಲ್ಲ. ಯಾವುದೇ ಕಾರಣಕ್ಕೂ
ಲಕ್ಷ್ಮಣ ಸವದಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ ಅಂತ ಚಿಕ್ಕೋಡಿಯಲ್ಲಿ ಸಿಟಿ ರವಿ ಲೇವಡಿ ಮಾಡಿದ್ದಾರೆ. ಭಾರತ್ ಮಾತಾ ಕೀ ಜೈ ಅನ್ನೋದಕ್ಕೂ ಎಐಸಿಸಿ ಅಧ್ಯಕ್ಷರ ಪರ್ಮಿಶನ್ ತೆಗೆದುಕೊಳ್ಳುವ ಪರಿಸ್ಥಿತಿ ಸವದಿಗೆ ಬಂದಿದೆ. ಜಾತಿ ರಾಜಕಾಣದಿಂದ ದೇಶ ಗೆಲ್ಲುವುದಿಲ್ಲ. ನೀತಿ ರಾಜಕಾರಣದಿಂದ ದೇಶ ಗೆಲ್ಲುತ್ತದೆ. ಸಿದ್ದರಾಮಯ್ಯರ ಗ್ಯಾರಂಟಿ ಅಂದ್ರೆ ಗಂಡನ ಹತ್ರ ಕಿತ್ಕೊಟ್ಟು ಹೆಂಡತಿಗೆ ಕೊಟ್ಟಂತಾಗಿದೆ. ನಾನು, ಬಸಗೌಡರಂತಹ ನಾಯಕರು ರಾಜಕಾರಣಕ್ಕೆ ಬಂದದ್ದು, ಹಿಂದುತ್ವಕ್ಕಾಗಿ. ರಾಜಕಾರಣಕ್ಕಾಗಿ ಹಿಂದುತ್ವ ಅಲ್ಲ, ಹಿಂದುತ್ವಕ್ಕಾಗಿ ರಾಜಕಾರಣ ಎಂದು ಗುಡುಗಿದ್ದಾರೆ.
ಕೃಷ್ಣಮಣಿ