ಚಿಕ್ಕಮಗಳೂರು(Chikkamagaluru): ನಿಯಂತ್ರಣ ತಪ್ಪಿದ ಪರಿಣಾಮ ಕಾರು ಕೆರೆಗೆ ಉರುಳಿ ಬಿದ್ದ ಘಟನೆ ನಡೆದಿದೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ನಡೆದಿದೆ. ಕಾರು ಕೆರೆಗೆ ಉರುಳಿ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದರೆ, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![](https://pratidhvani.com/wp-content/uploads/2024/04/accident-new-symbol-1024x475.jpg)
ಮೃತನನ್ನು ಗ್ರಾಮದ ದಿನೇಶ್(Dinesh) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿಗೆ ಹೋಗಿ ಗ್ರಾಮಕ್ಕೆ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಕೆರೆಗೆ ಉರುಳಿ ಬೀಳುತ್ತಿದ್ದಂತೆ ಕಾರಿನ ಒಳಗೆ ನೀರು ತುಂಬಿದ್ದು ಒಳಗಿದ್ದ ಚಾಲಕ ಕೋಡಲೇ ಹೊರಗೆ ಬಂದಿದ್ದಾನೆ. ಆದರೆ, ದಿನೇಶ್ ಹೊರಗೆ ಬರಲು ಆಗದೆ ಸಾವನ್ನಪ್ಪಿದ್ದಾರೆ.
![](https://pratidhvani.com/wp-content/uploads/2024/04/accident-1024x576.jpg)
ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಮಳೆಯಾಗುತ್ತಿದ್ದು, ಕೆರೆಯಲ್ಲಿ ನೀರು ಹೆಚ್ಚಾಗಿತ್ತು. ಕೆರೆಯಿಂದ ಮೃತ ದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.