• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸರ್ವ ಜಾತಿ, ಧರ್ಮಗಳ ಜನರ ರಕ್ತ ಕೆಂಪು, ಬೆವರು ಉಪ್ಪು: ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
September 8, 2025
in Top Story, ಕರ್ನಾಟಕ, ರಾಜಕೀಯ
0
ಸರ್ವ ಜಾತಿ, ಧರ್ಮಗಳ ಜನರ ರಕ್ತ ಕೆಂಪು, ಬೆವರು ಉಪ್ಪು: ಡಿಸಿಎಂ ಡಿ.ಕೆ.ಶಿವಕುಮಾರ್
Share on WhatsAppShare on FacebookShare on Telegram

ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ

ADVERTISEMENT

ಬಂಗಾರಪ್ಪನವರು ನನ್ನ ತಿದ್ದಿ, ತೀಡಿ ಬೆಳೆಸಿದ ಗುರುಗಳು

ಬೆಂಗಳೂರು, ಸೆ.07:

“ಜಗತ್ತಿನ ಯಾವುದೇ ಧರ್ಮದವರ, ಜಾತಿಯ, ಕರಿಯ, ಬಿಳಿಯ ಜನಾಂಗದ ವ್ಯಕ್ತಿಗಳ ರಕ್ತದ ಬಣ್ಣ ಕೆಂಪಾಗಿರುತ್ತದೆ. ಎಲ್ಲರ ಕಣ್ಣೀರು, ಬೆವರಿನ ರುಚಿ ಉಪ್ಪಾಗಿಯೇ ಇರುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

“ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ ದೇವನೊಬ್ಬ ನಾಮ ಹಲವು. ಇದೇ ತತ್ವವನ್ನು ನಾರಾಯಣ ಗುರುಗಳು ಸಾರಿದ್ದು” ಎಂದು ಹೇಳಿದರು.

Siddaramaiah: ಬಸವಣ್ಣವರ ವಚನ ಹೇಳ್ತಾರೆ.. ಆದ್ರೆ ಅದೇ ಕ್ಷಣದಲ್ಲಿ ನಿಮ್ಮ ಜಾತಿ ಯಾವುದೇ ಅಂತಾ ಕೇಳ್ತಾರೆ

ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ

“ಜಾತಿ ಹೇಳಬೇಡ, ಜಾತಿ ಕೇಳಬೇಡ, ಜಾತಿ ಮಾಡದೆ ಬದುಕನ್ನು ಸಾಗಿಸು ಎಂದವರು ನಾರಾಯಣ ಗುರುಗಳು. ಶೋಷಿತ ವರ್ಗಗಳಿಗೆ ದೇವರನ್ನು ತೋರಿಸಿದ ಸಂತಶ್ರೇಷ್ಠರು. ಇವರ ಆಚಾರ, ವಿಚಾರದಲ್ಲಿ ನಾವುಗಳು ನಡೆಯಲೇ ಬೇಕು. ನಾನು ಜಾತಿ ಮೇಲೆ ನಿಂತಿರುವ ವ್ಯಕ್ತಿಯಲ್ಲ. ಪ್ರೀತಿ, ವಿಶ್ವಾಸಕ್ಕೆ, ಮಾನವನ ಬದುಕಿನ ಉನ್ನತಿ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುವವನು. ನನ್ನನ್ನು ಬಳಸಿಕೊಂಡು ಕೆಲಸ ಮಾಡಿಕೊಳ್ಳಿ” ಎಂದರು.

ಬಂಗಾರಪ್ಪನವರು ನನ್ನ ತಿದ್ದಿ, ತೀಡಿ ಬೆಳೆಸಿದ ಗುರುಗಳು

“ಬಂಗಾರಪ್ಪ ಅವರು ಪಕ್ಷಕ್ಕೆ ರಾಜಿನಾಮೆ ನೀಡುವ ಸಂದರ್ಭ ಬಂದಿತು. ಆಗ ನಾನು ಮತ್ತು ಬೆಳ್ಳಿಯಪ್ಪ ಅವರ ಬಳಿ ಹೋಗಿ ‘ನಾವು ಏನು ಮಾಡುವುದು’ ಎಂದೆವು. ಅವರ ತಲೆಯಲ್ಲಿ ಬೇರೆ ಪಕ್ಷ ಕಟ್ಟುವ ಆಲೋಚನೆಯಿತ್ತು. ಆದರೂ ನನ್ನ ಬೆಳವಣಿಗೆ ಬಗ್ಗೆ ಕಳಕಳಿಯಿದ್ದ ಅವರು ಎಸ್.ಎಂ.ಕೃಷ್ಣ ಅವರ ಜೊತೆಯಲ್ಲಿ ಹೋಗು ಎಂದರು. ನನಗೆ ಎಸ್.ಎಂ.ಕೃಷ್ಣ ಅವರು ಬೇರೆ ರೀತಿಯಲ್ಲಿ ಗುರುವಾದರೆ. ನನಗೆ ಮಾರ್ಗದರ್ಶನ ನೀಡಿ, ಅಡಿಪಾಯ ಹಾಕಿ, ತಿದ್ದಿ ತೀಡಿದವರು ಬಂಗಾರಪ್ಪನವರು” ಎಂದರು.

“1979 ರಿಂದಲೂ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆಯಲೇ ಬೇಕು. ನನ್ನ ರಾಜಕಾರಣದ ಬದುಕಿನಲ್ಲಿ ಅವರ ಶಿಷ್ಯನಾಗಿ ಬೆಳೆದೆ. ನನ್ನನ್ನು ಚಿಕ್ಕ ವಯಸ್ಸಿಗೆ ಮಂತ್ರಿ ಮಾಡಿ ಬೆಳೆಸಿದವರು” ಎಂದರು.

“ವಿದ್ಯಾರ್ಥಿ ನಾಯಕನಾಗಿದ್ದ ನನ್ನ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದರು. ನನ್ನಲ್ಲಿ ನಾಯಕತ್ವದ ಗುಣವಿದೆ ಎಂದು ಇವನನ್ನು ಬೆಳೆಸಬೇಕು ಎಂದು ನನ್ನ ಬಗ್ಗೆ ವಿಶೇಷವಾದ ಅನ್ಯೂನ್ಯತೆಯನ್ನಿಟ್ಟುಕೊಂಡಿದ್ದರು” ಎಂದರು.

“ಮಧು ಬಂಗಾರಪ್ಪ ಅವರು ಅವರ ತಂದೆಯ ಜೊತೆಯಲ್ಲಿಯೇ ಬೇರೆ ಪಕ್ಷಕ್ಕೆ ಹೋಗಿದ್ದರು. ನಾನು ಆ ಕಡೆ ಸರಿಯಿಲ್ಲ ಎಂದು ಎಳೆದುಕೊಂಡು ಬಂದೆ. ನಾನು ಜೊತೆಯಲ್ಲಿ ಇದ್ದೇನೆ ಎಂದು ಅವರಿಗೆ ಹೇಳಿದೆ.‌ ಖಾತೆ ಹಂಚಿಕೆ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾಗಿತ್ತು. ನಾನು,‌‌ ಸಿದ್ದರಾಮಯ್ಯ ಅವರು, ಸುರ್ಜೇವಾಲ ಅವರು ಚರ್ಚೆ ಮಾಡಿ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ನೀಡಿದೆವು. ಇಂದು ನಾರಾಯಣ ಗುರುಗಳ ಹಾದಿಗೆ ಆಧಾರ ಸ್ಥಂಭವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ” ಎಂದರು.

“ಜನಾರ್ದನ ಪೂಜಾರಿಯವರನ್ನು ಸಹ ನಾನು ಮರೆಯುವಂತಿಲ್ಲ. ಈ ಹಿಂದೆ ಮಾರವಾಡಿಗಳ ಬಳಿ ಅಡವಿಟ್ಟು ಹೆಚ್ಚಿನ ಬಡ್ಡಿಗೆ ಹಣ ಪಡೆಯಬೇಕಿತ್ತು. ಇಂತಹ ಸಂದರ್ಭದಲ್ಲಿ ಬಡವರಿಗೆ ಸಾಲಮೇಳ ಮಾಡಿ ಹಣಕಾಸಿನ ನೆರವು ನೀಡಿದವರು. ಬ್ಯಾಂಕ್ ನವರೇ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುವ ಸೌಲಭ್ಯ ಒದಗಿಸಿದರು” ಎಂದು ಹೇಳಿದರು.

Tags: Bangarappabangarappa familyBJPCongress PartyDKShivakumarಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಅತಿವೃಷ್ಟಿಯಿಂದ ಅಪಾರ ಹಾನಿ – ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ 

Next Post

ರಾಜ್ಯದಲ್ಲಿ ಮತಾಂಧರ ಹಾವಳಿ ಮಿತಿ ಮೀರಿದೆ – ಹಿಂದೂಗಳು ಗಣೇಶ ಹಬ್ಬವನ್ನೂ ನೆಮ್ಮದಿಯಾಗಿ ಆಚರಿಸಲಿಲ್ಲ : ಬಿ.ವೈ ವಿಜಯೇಂದ್ರ 

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
Next Post
ರಾಜ್ಯದಲ್ಲಿ ಮತಾಂಧರ ಹಾವಳಿ ಮಿತಿ ಮೀರಿದೆ – ಹಿಂದೂಗಳು ಗಣೇಶ ಹಬ್ಬವನ್ನೂ ನೆಮ್ಮದಿಯಾಗಿ ಆಚರಿಸಲಿಲ್ಲ : ಬಿ.ವೈ ವಿಜಯೇಂದ್ರ 

ರಾಜ್ಯದಲ್ಲಿ ಮತಾಂಧರ ಹಾವಳಿ ಮಿತಿ ಮೀರಿದೆ - ಹಿಂದೂಗಳು ಗಣೇಶ ಹಬ್ಬವನ್ನೂ ನೆಮ್ಮದಿಯಾಗಿ ಆಚರಿಸಲಿಲ್ಲ : ಬಿ.ವೈ ವಿಜಯೇಂದ್ರ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada