
Minister Kj George Negligence Reply For Guarantee Installment Delay Is It Is Monthly Salary To Give On Time
ಸರ್ಕಾರದ ಗ್ಯಾರಂಟಿ ಯೋಜನೆಗಳು ತಡೆ ಆಗ್ತಿರುವ ವಿಚಾರದ ಬಗ್ಗೆ ಮಾತನಾಡಿದ್ದ ಸಚಿವ ಕೆ.ಜೆ ಜಾರ್ಜ್, ತಿಂಗಳ ಸಂಬಳ ಅಲ್ಲ.. ಸರ್ಕಾರ ಕೊಡುತ್ತಿರುವ ಹಣ ಕೆಲವೊಮ್ಮೆ ತಡವಾಗುತ್ತದೆ ಎಂದಿದ್ದರು. ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಒಳ್ಳೆಯ ಆಡಳಿತ ಕೊಡ್ತಿದ್ದಾರೆ. ಗೃಹಜೋತಿ ಹಾಗು ವಿದ್ಯುತ್ ದರಕ್ಕೂ ಸಂಬಂಧ ಇಲ್ಲ. ಗೃಹಜೋತಿಗೆ ರಾಜ್ಯ ಸರ್ಕಾರ ಹಣ ಕೊಡ್ತಿರೋದು. ವಿದ್ಯುತ್ ದರ ಏರಿಕೆ ಮಾಡಿದ್ರೆ ರಾಜ್ಯ ಸರ್ಕಾರ ಸಬ್ಸಿಡಿ ಜಾಸ್ತಿ ಕೊಡಬೇಕಾಗುತ್ತದೆ. ಗೃಹ ಲಕ್ಷ್ಮಿ ಹಣ ಕೊಡ್ತಿವಿ, ಮುಖ್ಯಮಂತ್ರಿ ಅವರೆ ಹೇಳಿದ್ದಾರೆ. ಮುಖ್ಯಮಂತ್ರಿ ಮೇಲೆ ನಂಬಿಕೆ ಇಲ್ವಾ ಎಂದು ಕೆ.ಜೆ.ಜಾರ್ಜ್ ಪ್ರಶ್ನಿಸಿದ್ದರು. (K J George’s comment on guarantee schemes draws flak)

ಕಾಂಗ್ರೆಸ್ ಸರ್ಕಾರ ಏನು ಭರವಸೆ ಕೊಟ್ಟಿದ್ದೆವೆ ಅದರ ಪ್ರಕಾರ ಎಲ್ಲವನ್ನೂ ಕೊಡ್ತಿವಿ, ಸ್ವಲ್ಪ ತಡ ಆಗುತ್ತದೆ ಎಂದಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತಿಗೆ ಬಿಜೆಪಿ ತಿರುಗೇಟು ನೀಡಿದೆ. ಗ್ಯಾರಂಟಿಗಳು ತಿಂಗಳ ಸಂಬಳ ಅಲ್ಲವಲ್ಲ ಎಂಬ ಸಚಿವ ಕೆ ಜೆ ಜಾರ್ಜ್ ಹೇಳಿಕೆಗೆ ಬಿಜೆಪಿ ನಾಯಕ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಗ್ಯಾರಂಟಿಗಳಿಗೆ ಕಳಂಕ ಹಚ್ಚುವ ಮಾತಾಡಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ, ನೌಕರರಿಗೆ ವೇತನ ಕೊಡಕ್ಕಾಗ್ತಿಲ್ಲ. ಎಲ್ಲ ಪದಾರ್ಥಗಳ ಬೆಲೆ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಲು ಅಧಿಕಾರಕ್ಕೆ ಬಂದ್ರಾ..? ಮೋಸ ಮಾಡೋಕ್ಕೆ ಗ್ತಾರಂಟಿಗಳ ಘೋಷಣೆ ಮಾಡಿದ್ರಾ..? ಎಂದು ಪ್ರಶ್ನಿಸಿದ್ದು, ಈ ಸರ್ಕಾರ ಪಾಪರ್ ಆಗಿದೆ ಎಂದಿದ್ದಾರೆ. (Energy Minister K.J. George’s statement)
ಗ್ಯಾರಂಟಿ ಬಗ್ಗೆ ಸಚಿವ ಕೆ.ಜೆ ಜಾರ್ಜ್ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದು, ಗ್ಯಾರಂಟಿ ಪ್ರತೀ ತಿಂಗಳು ಕೊಡ್ತೀವಿ ಅಂದವರು ನೀವು. ಈಗ ಆರು ತಿಂಗಳಿಗೂ ಕೊಡ್ತಿಲ್ಲ. ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದು ಟೀಕಿಸಿದ್ದಾರೆ. ಬೆಂಗಳೂರಿನ ಕೆಲವು ಆಸ್ಪತ್ರೆಗಳ ವೈದ್ಯರಿಗೆ ಎರಡು ತಿಂಗಳಿಗೊಮ್ಮೆ ವೇತನ ಕೊಡ್ತಿದ್ದಾರೆ. ಸ್ಕಾಲರ್ ಶಿಪ್ ಬರ್ತಿಲ್ಲ, ವಿದ್ಯಾರ್ಥಿಗಳು ಕೋರ್ಟ್‌ಗೆ ಹೋಗ್ತಿದ್ದಾರೆ. ಇದೆಲ್ಲ ಸರ್ಕಾರಕ್ಕೆ ನಾಚಿಕೆಗೇಡು, ಇದು ಮನೆ ಮುರುಕ ಸರ್ಕಾರ, ಓಟಿಗಾಗಿ ಗ್ಯಾರಂಟಿ ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆದ ಸರ್ಕಾರ ಇದು. ತಿಂಗಳು ತಿಂಗಳು ಗ್ಯಾರಂಟಿಗೆ ಹಣ ಕೊಡುವ ಗ್ಯಾರಂಟಿಯೇ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 1 ಲಕ್ಷದ 90 ಸಾವಿರ ಕೋಟಿ ಸಾಲ ಮಾಡಿದೆ. ಕಾಂಗ್ರೆಸ್ ಬಂದ ನಂತರ ರಾಜ್ಯ ಕೆಟ್ಟ ಪರಿಸ್ಥಿತಿಗೆ ಬಂದಿದೆ. ಕೆ.ಜೆ ಜಾರ್ಜ್ ಅವರು, ಇಂಧನ ಸಚಿವರು ಹೇಳಿದ್ದಾರೆ. ಇಲಾಖೆಗಳ ಕಚೇರಿಗಳಿಂದ ಸುಮಾರು 6 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು. ವಿದ್ಯುತ್ ಬಿಲ್ ಭರಿಸದೆ ವಿವಿಧ ಇಲಾಖೆಗಳು ಪರದಾಡುತ್ತಿದ್ದಾರೆ. ಇಂತಹ ಧಾರುಣ ಪರಿಸ್ಥಿತಿಗೆ ಬಂದಿದೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ದೇಶದಲ್ಲಿ ಎಲ್ಲಿಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೆಟ್ರೋ ದರ ಏರಿಕೆ ಮಾಡಿರಲಿಲ್ಲ. ಆದರೆ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ಮೆಟ್ರೋ ದರ ಸಮಿತಿ ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.