ಕನಕಪುರ ವಿಧಾನಸಭಾ ಕ್ಷೇತ್ರವನ್ನು 2004 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಪ್ರತಿನಿಧಿಸುವ ಮೂಲಕ ರಾಜಕೀಯ ರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟು ದೊಡ್ಡ ಗೌಡರನ್ನೆ ಸೋಲಿಸಿದ ಗಟ್ಟಿಗಿತ್ತಿ ತೇಜಸ್ವಿನಿ ಗೌಡ, 2014 ರಲ್ಲಿ ಕುಮಾರಸ್ವಾಮಿಯವರ ವಿರುದ್ಧ ಸೋತ ನಂತರ ಬಿಜೆಪಿಯ ಕಡೆ ಮುಖ ಮಾಡಿದ್ದರು.
ಬಿಜೆಪಿ ಇವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು ಆದರೆ ಲೋಕಸಭಾ ಟಿಕಟ್ಟಿನ ಆಕಾಂಕ್ಷಿಯಾಗಿದ್ದ ಇವರು ಅವಧಿಗೂ ಮುನ್ನವೇ ವಿಧಾನ ಪರಿಷತ್ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಅಥವಾ ಮೈಸೂರು ಉಡುಪಿ ಭಾಗದಿಂದ ಟಿಕೆಟ್ಟನ್ನ ನಿರೀಕ್ಷೆ ಮಾಡಿದ್ದ ತೇಜಸ್ವಿನಿಗೌಡ, ಟಿಕೆಟ್ ಕೈ ತಪ್ಪಿ ಹೋದ ಕಾರಣ ಮತ್ತೆ ತಮ್ಮ ತವರು ಪಕ್ಷಕ್ಕೆ ವಾಪಸ್ಸಾಗಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೇಸ್ಸಿಗೆ ಸೇರ್ಪಡೆಗೊಂಡಿರುವ ತೇಜಸ್ವಿನಿ ಮಾಧ್ಯಮದ ಮುಂದೆ ಮಾತನಾಡುತ್ತ ನಾನು ನನ್ನ ಮನೆಗೆ ವಾಪಸ್ಸು ಬಂದಿದ್ದೇನೆ, ನನಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾಜೀ,ಸಿದ್ದರಾಮಯ್ಯ, ಡಿಕೆಶಿ ಎಲ್ಲರೂ ನನಗೆ ಪ್ರೇರಣೆ ಎಂದಿದ್ದಾರೆ.ಕನಕಪುರ ವಿಧಾನಸಭಾ ಕ್ಷೇತ್ರವನ್ನು 2004 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಪ್ರತಿನಿಧಿಸುವ ಮೂಲಕ ರಾಜಕೀಯ ರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟು ದೊಡ್ಡ ಗೌಡರನ್ನೆ ಸೋಲಿಸಿದ ಗಟ್ಟಿಗಿತ್ತಿ ತೇಜಸ್ವಿನಿ ಗೌಡ, 2014 ರಲ್ಲಿ ಕುಮಾರಸ್ವಾಮಿಯವರ ವಿರುದ್ಧ ಸೋತ ನಂತರ ಬಿಜೆಪಿಯ ಕಡೆ ಮುಖ ಮಾಡಿದ್ದರು. ಬಿಜೆಪಿ ಇವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು ಆದರೆ ಲೋಕಸಭಾ ಟಿಕಟ್ಟಿನ ಆಕಾಂಕ್ಷಿಯಾಗಿದ್ದ ಇವರು ಅವಧಿಗೂ ಮುನ್ನವೇ ವಿಧಾನ ಪರಿಷತ್ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಅಥವಾ ಮೈಸೂರು ಉಡುಪಿ ಭಾಗದಿಂದ ಟಿಕೆಟ್ಟನ್ನ ನಿರೀಕ್ಷೆ ಮಾಡಿದ್ದ ತೇಜಸ್ವಿನಿಗೌಡ, ಟಿಕೆಟ್ ಕೈ ತಪ್ಪಿ ಹೋದ ಕಾರಣ ಮತ್ತೆ ತಮ್ಮ ತವರು ಪಕ್ಷಕ್ಕೆ ವಾಪಸ್ಸಾಗಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೇಸ್ಸಿಗೆ ಸೇರ್ಪಡೆಗೊಂಡಿರುವ ತೇಜಸ್ವಿನಿ ಮಾಧ್ಯಮದ ಮುಂದೆ ಮಾತನಾಡುತ್ತ ನಾನು ನನ್ನ ಮನೆಗೆ ವಾಪಸ್ಸು ಬಂದಿದ್ದೇನೆ, ನನಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾಜೀ,ಸಿದ್ದರಾಮಯ್ಯ, ಡಿಕೆಶಿ ಎಲ್ಲರೂ ನನಗೆ ಪ್ರೇರಣೆ ಎಂದಿದ್ದಾರೆ.