
Local Economy Accelerator Program ( ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕಮ) ಯೋಜನೆಯಡಿಯಲ್ಲಿ ) ಕಲಬುರಗಿ ಸೇರಿದಂತೆ ರಾಜ್ಯದ ಆರು ಕಡೆ ಬಲವರ್ಧನೆ ಕೇಂದ್ರಗಳ ಸ್ಥಾಪನೆಗೆ ಐಟಿ, ಬಿಟಿ ಇಲಾಖೆ ಆಲೋಚಿಸಿದೆ ಎಂದು ಐಟಿ, ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು ಹೊರತುಪಡಿಸಿದ ಕಲ್ಯಾಣ ಕರ್ನಾಟಕದ ಕಲಬುರಗಿ ಯನ್ನು ಕೇಂದ್ರೀಕರಿಸಿ ಐಟಿ ವಲಯ ವಿಸ್ತರಿಸುವ ಗುರಿಯೊಂದಿಗೆ ಸರ್ಕಾರದ ಉಪಕ್ರಮವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ( Karnataka Digital Economy Mission- KDEM) ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ( CEO) ಸಂಜೀವ್ ಗುಪ್ತಾ ಹಾಗೂ ಕೃಷಿಕಲ್ಪಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ. ಪಾಟೀಲ್ ಅವರೊಂದಿಗೆ ಕಾರ್ಯಯೋಜನೆಗಳ ಕುರಿತು ವಿವರ ನೀಡಿದ ಸಚಿವರು ನೂತನ ಸ್ಟಾರ್ಟ್‌ಅಪ್‌ಗಳು, ಜಿಸಿಸಿಗಳು (ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳು) ಮತ್ತು ನಾವೀನ್ಯತೆಗಳ ಕೇಂದ್ರಗಳ ಸ್ಥಾಪನೆ, ಮಾರುಕಟ್ಟೆ ವೃದ್ದಿ ಹಾಗೂ ನವೋದ್ಯಮ ಸ್ಥಾಪನೆ ಉದ್ದೇಶ ಹೊಂದಲಾಗಿದೆ ಎಂದು ಸಚಿವರ ಹೇಳಿದರು.

ಕೃಷಿಕಲ್ಪ ಸಂಸ್ಥೆ ಸಿಇಓ ಸಿ.ಎಂ. ಪಾಟೀಲ್ ಮಾತನಾಡುತ್ತಾ, ಕಲಬುರಗಿಯಲ್ಲಿ ಕೃಷಿ ಕಲ್ಪ ತನ್ನ ಮೊದಲ ಹೆಜ್ಜಯನ್ನು ಉದ್ಯಮಿತ್ವದ ಮೂಲಕ ಪ್ರಾರಂಭಿಸಿದೆ. ಕರ್ನಾಟಕ ಸರ್ಕಾರದ LEAP ಕಾರ್ಯಕ್ರಮದ ಅಡಿಯಲ್ಲಿ, ಈ ಪ್ರದೇಶದ ಉದ್ಯಮಶೀಲ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಗ್ರಾಮೀಣ ನವೀನತೆ ಮತ್ತು ಉದ್ಯಮಿತ್ವ ಉತಕೃಷ್ಠ ಕೇಂದ್ರ ಹಾಗೂ ಯುವ ಮತ್ತು ಧ್ಯೇಯಚೇತನ ಉದ್ಯಮಿಗಳಿಗೆ ಪ್ರೋಟೋಟೈಪಿಂಗ್ ಲ್ಯಾಬ್ ಅನ್ನು ಸ್ಥಾಪಿಸುತ್ತಿದೆ. ಇದು ಕೃಷಿ, ಸಂಬಂಧಿತ ಕ್ಷೇತ್ರಗಳು ಮತ್ತು ಗ್ರಾಮೀಣ ನವೀನತೆಗಳ ಮೇಲೆ ವಿಶೇಷ ಗಮನಹರಿಸುತ್ತದೆ ಎಂದರು.
ಕಲಬುರಗಿ, ಕರ್ನಾಟಕ ಕೃಷಿಕಲ್ಪಾ ಫೌಂಡೇಶನ್ ಇಂದು ಕರ್ನಾಟಕ ಸರ್ಕಾರದ LEAP ಕಾರ್ಯಕ್ರಮದ ಅಡಿಯಲ್ಲಿ ಪ್ರಾದೇಶಿಕ ಉದ್ಯಮಿತ್ವವನ್ನು ಉತ್ತೇಜಿಸುವ ಹೊಸ ಮಿಷನ್ ಅನ್ನು ಘೋಷಿಸಿದೆ. ಕಲಬುರಗಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಹೆಜ್ಜೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಯುವ ಉದ್ಯಮಿಗಳನ್ನು ಬೆಳೆಸುವ ಮತ್ತು ಧ್ಯೇಯಚೇತನ ಸಂಸ್ಥಾಪಕರಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ, ಎಂದರು.

ಈ ಹೆಜ್ಜೆಯ ಭಾಗವಾಗಿ, ಕಲಬುರಗಿ ಜಿಲ್ಲಾ ಆಡಳಿತವು 15,000 ಚ.ಅಡಿ ವಿಸ್ತೀರ್ಣದ ಸಿದ್ಧ–ಬಳಕೆಯ ಕಾರ್ಯದ ಸ್ಥಳ (workspace) ಒದಗಿಸುತ್ತಿದೆ. ಇದು ಸ್ಟಾರ್ಟ್‌ಅಪ್‌ಗಳು, ನವೀನತಾಕಾರರು ಮತ್ತು ಇತರೆ ಉದ್ಯಮ ಪರಿಸರ ವ್ಯವಸ್ಥೆಯ ಕಾರ್ಯಕ್ರಮಗಳಿಗೆ ಕೇಂದ್ರವಾಗಿರುತ್ತದೆ. ಕೃಷಿಕಲ್ಪಾ ಸಂಸ್ಥೆ ತನ್ನ ಪ್ರಸಿದ್ಧ ಮಾರ್ಗದರ್ಶನ – ಮಾರುಕಟ್ಟೆ ಪ್ರವೇಶ – ಹಣಕಾಸು ಪ್ರವೇಶ ಮಾದರಿಯ ಆಧಾರದ ಮೇಲೆ ಗ್ರಾಮೀಣ ನವೀನತೆ ಮತ್ತು ಉತಕೃಷ್ಠತಾ ಶ್ರೇಷ್ಠತಾ ಕೇಂದ್ರವನ್ನು ನಿರ್ಮಿಸುತ್ತಿದೆ. ಇದು ಆರಂಭಿಕ ಮತ್ತು ಬೆಳವಣಿಗೆ ಹಂತದ ಉದ್ಯಮಿಗಳಿಗೆ ಮಾರ್ಗದರ್ಶನ ಒದಗಿಸುತ್ತದೆ. ಜೊತೆಗೆ, ಅತ್ಯಾಧುನಿಕ ಪ್ರೋಟೋಟೈಪಿಂಗ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದ್ದು, ಇದು ಉತ್ಪನ್ನ-ಆಧಾರಿತ ಸ್ಟಾರ್ಟ್‌ಅಪ್‌ಗಳಿಗೆ ಸ್ಥಳೀಯವಾಗಿ ವಿನ್ಯಾಸ, ನಿರ್ಮಾಣ ಮತ್ತು ಜಾಗತಿಕ ಮಟ್ಟದ ಪರೀಕ್ಷಾ ಸೌಲಭ್ಯ ಒದಗಿಸುತ್ತದೆ. ಮತ್ತು ಈ ಪ್ರದೇಶದ ನವೀನಕರಿಗೆ ಮೂಲಭೂತ ಸೌಕಯ೯ಗಳನ್ನು ಕಡಿಮೆಯಾಗಿಸುತ್ತದೆ.
” ಇಲ್ಲಿನ ಯುವಕರಿಗೆ ಮತ್ತು ನವೀನಕರಿಗೆ ಬೆಂಬಲ ನೀಡುವ ಈ ಪ್ರಯತ್ನದಲ್ಲಿ ಭಾಗಿಯಾಗಿರುವುದು ತುಂಬಾ ಸಂತಸದ ವಿಷಯ. ಇದು ಕೇವಲ ಒಂದು ಕಾರ್ಯಕ್ರಮವಲ್ಲ—ಇದು ದೀರ್ಘಕಾಲಿಕ ಬದ್ಧತೆ. ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶವು ಹೆಮ್ಮೆಪಡುವ ಹೆಗ್ಗಳಿಕೆಯಾಗಿದೆ ಮತ್ತು ಪ್ರಗತಿಪರ ಉದ್ಯಮಿತ್ವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಗುರಿ” ಎಂದು ಹುಬ್ಬಳ್ಳಿ ಮೂಲದವರಾದ ಸಿ.ಎಂ.ಪಾಟೀಲ್ ವಿವರಿಸಿದರು.

ಈ ಯೋಜನೆಯ ಭವ್ಯ ಉದ್ಘಾಟನೆ ಜನವರಿ 2026ರ ಆರಂಭದಲ್ಲಿ ನಡೆಯಲಿದೆ. ಇದು ಪ್ರದೇಶದಲ್ಲಿ ನಿರಂತರ ಮತ್ತು ಗುರಿಪಡಿಸಿದ ಉದ್ಯಮಶೀಲ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ” ಉದ್ಯಮಿತ್ವ ಪರಿಸರವನ್ನು ಅಭಿವೃದ್ಧಿಪಡಿಸುವ ಈ ಉಪಕ್ರಮ ಈಗ ಜಾರಿಗೆ ಬರಲಿದ್ದು, ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದ ಜನರು ಒಗ್ಗಟ್ಟಿನಿಂದ ಪಾಲ್ಗೊಳ್ಳುವಂತೆ ಕೃಷಿಕಲ್ಪಾ ಸಂಸ್ಥೆ ಕರೆ ನೀಡಿದೆ. ಇದು ಸೃಜನಶೀಲತೆ, ಒಳಗೊಂಡ ಮತ್ತು ಭವಿಷ್ಯನಿರ್ದೇಶಿತ ಉದ್ಯಮ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ,ಮುಂದಿನ ಪೀಳಿಗೆಗೆ ನೆರವಾಗುತ್ತದೆ” ಎಂದು ಸಚಿವರು ಹೇಳಿದರು.
ಕೃಷಿ ವಲಯದ ಅಭಿವೃದ್ದಿಗೆ ಕೂಡಾ ಸರ್ಕಾರ ಸಿದ್ದವಿದ್ದು ಕಲಬುರಗಿ ಯಲ್ಲಿ ಅಂದಾಜು ರೂ 50 ಕೋಟಿ ವೆಚ್ಚದಲ್ಲಿ ಕೃಷಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಶ್ರೇಷ್ಠತೆಯ ಕೇಂದ್ರ ಸ್ಥಾಪಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕುಡಾ ಚೇರ್ ಮನ್ ಮಜರ್ ಅಹಮದ್ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಎನ್ ಇ ಕೆ ಆರ್ ಟಿ ಸಿ ಅಧ್ಯಕ್ಷ ಅರುಣ್ ಕುಮಾರ ಎಂ ವೈ ಪಾಟೀಲ್,
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಡಿ ಎಫ್ ಓ ಸುಮಿತ್ ಪಾಟೀಲ್, ಮಹಾನಗರ ಪಾಲಿಕೆ ಕಮಿಷನರ್ ಅವಿನಾಶ್ ಶಿಂಧೆ, ಕುಡಾ ಕಮಿಷನರ್ ಶಿವಕುಮಾರ ಪಾಟೀಲ್, ಸೇರಿದಂತೆ ಹಲವರಿದ್ದರು.

