ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್ಡಿಎ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿ ಎಂದು ಅಮೆರಿಕದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿದೆ.

ಈ ಬಾರಿಯ ಚುನಾವಣೆಯಲ್ಲೂ ಎನ್ಡಿಎ ಭರ್ಜರಿ ಜಯ ಗಳಿಸಿ ಮತ್ತೆ ನರೇಂದ್ರ ಮೋದಿಯವರು (Narendra Modi) 3ನೇ ಅವಧಿಗೆ ಪ್ರಧಾನಿಯಾಗಲೆಂದು ಅಮೆರಿಕಾದ ಹೌಸ್ಟನ್ನಲ್ಲಿ ವಿಶೇಷ ಸಂಕಲ್ಪ ಪೂಜೆ ನಡೆಸಲಾಯಿತು.

ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಪಡೆಯುವುದು ಖಚಿತ ಎಂದು ಬಿಜೆಪಿ ಹೇಳುತ್ತಿದೆ. ಪ್ರಧಾನಿ ಮೋದಿ ಅವರು ಹ್ಯಾಟ್ರಿಕ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿದ್ದಾರೆ. ಜೂನ್ 1ರ ಸಂಜೆಯವರೆಗೂ ಪ್ರಧಾನಿ ಧ್ಯಾನ ಮಾಡಲಿದ್ದಾರೆ.