• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, February 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬಿಹಾರದಲ್ಲಿ ಕಾಂಗ್ರೆಸ್‌ – ಆರ್‌ಜೆಡಿ ಗೆಳತನದಲ್ಲಿ ಬಿರುಕು: ಲಾಲೂ ಜೊತೆ ಸೋನಿಯಾ ಗಾಂಧಿ ಗೌಪ್ಯ ಚರ್ಚೆ!

ಕರ್ಣ by ಕರ್ಣ
October 27, 2021
in ದೇಶ, ರಾಜಕೀಯ
0
ಬಿಹಾರದಲ್ಲಿ ಕಾಂಗ್ರೆಸ್‌ – ಆರ್‌ಜೆಡಿ ಗೆಳತನದಲ್ಲಿ ಬಿರುಕು: ಲಾಲೂ ಜೊತೆ ಸೋನಿಯಾ ಗಾಂಧಿ ಗೌಪ್ಯ ಚರ್ಚೆ!
Share on WhatsAppShare on FacebookShare on Telegram

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮುರಿಯಲಿದೆ ಎಂಬ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದು, ಉಭಯ ನಾಯಕರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

Congress interim chief Sonia Gandhi spoke with RJD leader Lalu Prasad Yadav yesterday over phone after the meeting of the party's general secretaries, State in-charges and Pradesh Congress Committee Presidents in Delhi. Details awaited.

(File photos) pic.twitter.com/76ZXeCF3U8

— ANI (@ANI) October 27, 2021

ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಬಿಹಾರ ಉಸ್ತುವಾರಿ ಮತ್ತು ಬಿಹಾರದ ರಾಜ್ಯಾಧ್ಯಕ್ಷರೊಂದಿಗೆ ದೆಹಲಿಯಲ್ಲಿ ನಡೆದ ಅತ್ಯಂತ ಮಹತ್ವದ ಸಭೆಯ ನಂತರ ಸೋನಿಯಾ ಗಾಂಧಿಯವರು ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಭಕ್ತ ಚರಣ್ ದಾಸ್ ಮತ್ತು ಇತರ ನಾಯಕರು ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ.

ಆದರೆ ಹೈಕಮಾಂಡ್ ಇದಕ್ಕೆ ಸಿದ್ಧವಿಲ್ಲ ಎಂಬುದು ಉಭಯ ನಾಯಕರ ಫೋನ್ ಮಾತುಕತೆ ಮೂಲಕ ತಿಳಿದುಬಂದಿದೆ. ಬಿಹಾರದ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಈ ಸಂಭಾಷಣೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತಿದೆ. ಅದಾಗ್ಯೂ, ಉಭಯ ನಾಯಕರ ನಡುವಿನ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ವಾಸ್ತವವಾಗಿ, ಬಿಹಾರದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ವಿಚಾರದಲ್ಲಿ ಮಹಾಘಟಬಂಧನ್‌ನ ಎರಡು ಮಿತ್ರಪಕ್ಷಗಳಾದ ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ನಡುವೆ ಒಡಕು ಏರ್ಪಟ್ಟಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್‌ಗೆ ಎರಡು ಸ್ಥಾನಗಳಲ್ಲಿ ಒಂದನ್ನು ಸಹ ನೀಡದಿರುವ ನಿರ್ಧಾರವನ್ನೂ ತೆಗೆದುಕೊಂಡಿರುವುದರ ಬಗ್ಗೆ ಬಹಿರಂವಾಗಿ ಹೇಳಿಕೆ ನೀಡಿದ್ದರು. ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭಕ್ಚೋನ್‌ಹರ್ ಎಂದು ಸಂಬೋಧಿಸಿದ್ದರು. ಅಂದಿನಿಂದ,  ಮಹಾಮೈತ್ರಿಕೂಟದಲ್ಲಿ ಕಹಿ ವಿಷಯಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದವು ಮತ್ತು ತಮ್ಮ ಈ ಹೇಳಿಕೆಯನ್ನು ಹಿಂಪಡೆಯುವಂತೆ ಲಾಲು ಯಾದವ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತು. ಇದಾದ ನಂತರ, ಇತ್ತೀಚಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಮಾಡಿದಷ್ಟು ಯಾರೂ ಕಾಂಗ್ರೆಸ್‌ಗೆ ಸಹಾಯ ಮಾಡಿಲ್ಲ ಎಂದು ಹೇಳಿದ್ದರು. ಇದರೊಂದಿಗೆ, ದೇಶಕ್ಕೆ ಅಗತ್ಯವಿರುವ ರಾಷ್ಟ್ರೀಯ ಪರ್ಯಾಯವಾಗಿ ಕಾಂಗ್ರೆಸ್ ಅನ್ನು ಈಗಲೂ ಪರಿಗಣಿಸುವುದಾಗಿಯೂ ಸ್ಪಷ್ಟಪಡಿಸಿದ್ದರು. 

Tags: BJPCongress Partyಆರ್‌ಜೆಡಿಕಾಂಗ್ರೆಸ್‌ಬಿಜೆಪಿಬಿಹಾರ ಚುನಾವಣೆಲಾಲೂ ಪ್ರಸಾದ್ ಯಾದವ್ಸೋನಿಯಾ ಗಾಂಧಿ
Previous Post

ದಿಶಾ ರವಿ ವಿರುದ್ದ ಸಾಕ್ಷ್ಯಾಧಾರಗಳ ಕೊರತೆ: ʻಟೂಲ್ ಕಿಟ್’ ಪ್ರಕರಣ ಮುಚ್ಚಲಿದ್ದಾರೆಯೇ ಪೊಲೀಸರು?

Next Post

ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೇಸ್ ತೆಗೆದುಕೊಂಡಿರಿ ಸಿದ್ದರಾಮಯ್ಯ, ಈಗಲಾದರೂ ಜನರಿಗೆ ಸತ್ಯ ಹೇಳಿ – ಹೆಚ್.ಡಿ.ಕೆ ವಾಗ್ದಾಳಿ

Related Posts

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ
Top Story

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

by ಪ್ರತಿಧ್ವನಿ
February 8, 2026
0

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ನಮ್ಮ ಜೊತೆ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಸ್ಪಷ್ಟವಾಗಿ...

Read moreDetails
Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

February 8, 2026
ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

February 7, 2026
Next Post
ಬಿಜೆಪಿ ನಾಯಕರ ಭಂಡವಾಳ ಹೊರ ತೆಗೆದರೆ ಅವರ ನಿಜವಾದ ಬಣ್ಣ ಬಯಲಾಗುತ್ತದೆ : HDKumarswamy ಗರಂ

ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೇಸ್ ತೆಗೆದುಕೊಂಡಿರಿ ಸಿದ್ದರಾಮಯ್ಯ, ಈಗಲಾದರೂ ಜನರಿಗೆ ಸತ್ಯ ಹೇಳಿ - ಹೆಚ್.ಡಿ.ಕೆ ವಾಗ್ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada