ದೇಶದ ಪ್ರಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಸಂತಸವನ್ನು ಪೋಸ್ಟ್ ಮೂಲಕ ಹಂಚಿಕೊಂಡಿರುವ ದಿಲ್ಜಿತ್ 2025ಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರೊಂದಿಗಿನ ಈ ಭೇಟಿ ನನ್ನ ಪಾಲಿಗೆ ಅತ್ಯಂತ ಸ್ಮರಣೀಯ ಎಂದು ಹೇಳಿಕೊಂಡಿದ್ದಾರೆ.

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರಫಾನಿ ಮೋದಿ, ನಾವು ಸಹಜವಾಗಿ ಸಂಗೀತ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ! ಅವರು ನಿಜವಾಗಿಯೂ ಬಹು-ಪ್ರತಿಭಾವಂತರು, ಪ್ರತಿಭೆ ಮತ್ತು ಸಂಪ್ರದಾಯದ ಸಂಯೋಜನೆ. ನಾವು ಸಂಗೀತ, ಸಂಸ್ಕೃತಿ ಮತ್ತು ಹೆಚ್ಚಿನವುಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.

ದಲ್ಜಿತ್ ಕಳೆದ ತಿಂಗಳು ತಮ್ಮ ಸಂಗೀತ ಪ್ರದರ್ಶನ SAREGAMA INDIA LIMITED ಆಯೋಜಿಸಿದ್ದ ದಿಲ್-ಲುಮಿನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು.










