• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನನ್ನನ್ನು ಜೈಲಿಗೆ ಕಳುಹಿಸಲು ಸಿದ್ದರಾಮಯ್ಯ ಕುತಂತ್ರ ಹೆಣೆದಿದ್ದಾರೆ: ಎಚ್‌ ಡಿ ಕುಮಾರಸ್ವಾಮಿ ಆರೋಪ

ಪ್ರತಿಧ್ವನಿ by ಪ್ರತಿಧ್ವನಿ
August 21, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಬೆಂಗಳೂರು :ಏನಾದರೂ ಮಾಡಿ ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕುತಂತ್ರ ಹೆಣೆದಿದ್ದಾರೆ. ನಾನು ಒಂದು ದಿನವಾದರೂ ಜೈಲಿನಲ್ಲಿರಬೇಕು ಎಂಬುದು ಅವರ ಆಸೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದರು.

ADVERTISEMENT

ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಯಾವುದೋ ಸತ್ತು ಹೋಗಿರುವ ಪ್ರಕರಣ ಇಟ್ಟುಕೊಂಡು ನನ್ನ ಹಣಿಯಲು ಪ್ರಯತ್ನಿಸುತ್ತಿದ್ದಾರೆ. ಹಿಡಿದರೆ ಸ್ವಲ್ಪ ದೊಡ್ಡ ಕೇಸ್‌ಗಳನ್ನು ಹಿಡಿಯಿರಿ” ಎಂದು ವ್ಯಂಗ್ಯವಾಡಿದರು.

“2017ರಲ್ಲಿ ಎಸ್‌ಐಟಿ ನನಗೆ ನೋಟಿಸ್‌ ಕೊಟ್ಟಿತು. ನಮ್ಮ ವಕೀಲರ ಸಲಹೆ ಜಾಮೀನು ತಗೊಂಡು ಎಸ್‌ಐಟಿ ತಂಡ ಭೇಟಿಯಾದೆ. ಆದರೆ, ಅಲ್ಲಿಗೆ ಹೋದಾಗ ‘ಇದು ಜಾಮೀನು ತೆಗೆದುಕೊಳ್ಳುವ ಪ್ರಕರಣವೇ ಅಲ್ಲ’ ಎಂದು ಅಧಿಕಾರಿಗಳು ಹೇಳಿದ್ದರು” ಎಂದರು.

ಅಧಿಕಾರಿ ಮಗನ ಖಾತೆಗೆ ₹20 ಲಕ್ಷ ಹೋಗಿದ್ದನ್ನು ಪತ್ತೆ ಹಚ್ಚಿದ್ದು ನಾನು.

ನಾನು ಸಾಯಿ ವೆಂಕಟೇಶ್ವರ ಕಡತಕ್ಕೆ ಸಹಿ ಹಾಕಿದೇನೆ ಎಂದು ಯಾರೋ ಈಗ ದಾಖಲೆ ತೆಗೆದಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಸಹಿ ಹಾಕಿದ್ದು ಯಾವುದು ಅಂತ ತನಿಖೆ ಮಾಡಿದ್ದೀರಾ? ಎಸ್ ಐಟಿ ತನಿಖೆ ಮಾಡಿದೆಯಾ? ಏನೆಲ್ಲಾ ಅಕ್ರಮ ಆಗಿದೆ ಎಂಬುದು ಸರ್ಕಾರಕ್ಕೆ ಗೊತ್ತಿದೆಯಾ? ಅಧಿಕಾರಿ ಮಗನ ಬ್ಯಾಂಕ್ ಖಾತೆಗೆ ₹20 ಲಕ್ಷ ಹಣ ಹೋಗಿದ್ದನ್ನು ಪತ್ತೆ ಹಚ್ಚಿದ್ದು ಎಸ್ ಐಟಿ ಅಲ್ಲ, ಪೊಲೀಸರೂ ಅಲ್ಲ.ನಾನು ಅದನ್ನು ಪತ್ತೆ ಹಚ್ಚಿದ್ದು. ಪೊನ್ನಣ್ಣ ನಿಮಗಿಂತ ಹೆಚ್ಚು ಕಾನೂನು ಬಲ್ಲವರು ಇದ್ದಾರೆ.ನನಗೂ ಅಲ್ಪಸ್ವಲ್ಪ ಕಾನೂನು ಗೊತ್ತಿದೆ ಎಂದು ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

“ನಾನು ಸಿಎಂ ಆಗಿದ್ದಾಗ ಮನಸ್ಸು ಮಾಡಿದ್ದರೆ ನನ್ನ ಈ ಕೇಸುಗಳನ್ನು ಮುಚ್ಚಿ ಹಾಕಿಸಬಹುದಿತ್ತು.ನನಗೆ ಎರಡು ಸೆಕೆಂಡ್‌ ಆಗುತ್ತಿರಲಿಲ್ಲ. ನನ್ನ ಕಡೆ ಯಾವ ತಪ್ಪು ಆಗಿಲ್ಲ ಅಂತ ಸುಮ್ಮನಿರುವೆ. ಸಾಯಿ ವೆಂಕಟೇಶ್ವರ್‌ ಕಂಪನಿಗೆ ಸಂಬಂಧಪಟ್ಟ ಎಲ್ಲ ಕಡತಗಳು ನನ್ನ ಬಳಿ ಇವೆ.ನಾನು ಯಾವ ಕಡತಕ್ಕೂ ಸಹಿ ಮಾಡಿಲ್ಲ. ನನ್ನ ಹೆಸರಿನಲ್ಲಿ ನಕಲಿ ಸಹಿ ಮಾಡಲಾಗಿದೆ”ಎಂದು ದೂರಿದರು.

“ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದರೆ ಸುಪ್ರೀಂ ಕೋರ್ಟ್‌ ಮುಂದೆ ಯಾಕೆ ಇನ್ನೂ ಸಲ್ಲಿಸಿಲ್ಲ? ಇದನ್ನು ಸುಪ್ರೀಂ ಕೋರ್ಟ್‌ ಕೂಡ ಪ್ರಶ್ನಿಸಿದೆ.ರಾಜ್ಯಪಾಲರ ಅನುಮತಿ ತಗೊಂಡು ನನ್ನ ವಿರುದ್ಧ ತನಿಖೆ ಮಾಡಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆಯಾ? ಇದೆಲ್ಲ ಕುತಂತ್ರ ಅಷ್ಟೇ” ಎಂದು ದೂರಿದರು.

“ಸಾಯಿ ವೆಂಕಟೇಶ್ವರ್‌ ಕಂಪನಿ ಮೋಸದ ಕಂಪನಿ. ನನ್ನ ಸಹಿ ಬಗ್ಗೆ ತನಿಖೆ ನಡೆಯುತ್ತಿದೆ.ಈ ಕಂಪನಿ ಕೋರ್ಟ್‌ಗಳನ್ನೇ ಯಾಮಾರಿಸಿದೆ.ಅವತ್ತಿನ ರಾಜ್ಯಪಾಲರ ಮುಂದೆ ಮೋಸದ ಪ್ರಕರಣ ಬಂದಿದೆ. ನಾನು ಸಹಿ ಮಾಡಿದ ಆದೇಶದಲ್ಲಿ ಏನಿದೆ ಎಂಬುದು ತನಿಖೆ ಮಾಡಿದ್ದೀರಾ? ಅಲ್ಲಿ ಒಬ್ಬ ಅಧಿಕಾರಿ 20 ಲಕ್ಷ ರೂಗಳನ್ನು ತಮ್ಮ ಮಗನ ಅಕೌಂಟ್‌ಗೆ ಹಾಕಿಸಿಕೊಳ್ಳುತ್ತಾನೆ.ನಾನು ಅದನ್ನು ಕಂಡು ಹಿಡಿದೆ. ಎಲ್ಲ ಅಧಿಕಾರಿಗಳಿಂದಲೇ ಮೋಸವಾಗಿದೆ.ಅವರೇ ಫೈಲ್‌ ಸಿದ್ದಪಡಿಸಿದ್ದು” ಎಂದು ವಿವರಿಸಿದರು.

“ಸಿಎಂ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ 62 ಪ್ರಕರಣ ಇವೆ. ಭ್ರಷ್ಟಾಚಾರ, ಕರ್ತವ್ಯ ಲೋಪ ಮೇಲೆ ಅವೆಲ್ಲ ದಾಖಲಾಗಿವೆ.50 ಪ್ರಕರಣಗಳ ವಿಚಾರಣೆಯೇ ನಡೆದಿಲ್ಲ. ಇವರು ನನ್ನ ಬಗ್ಗೆ ಮಾತನಾಡುತ್ತಾರೆ. ಲೋಕಾಯುಕ್ತದ ನರ ಕಿತ್ತಿದ್ದು ಏಕೆ ಎಂಬುದು ಬಿಚ್ಚಿಡಲಾ” ಎಂದು ಪ್ರಶ್ನಿಸಿದರು.“ಸಂವಿಧಾನದ ಸಂಸ್ಥೆಗಳನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಸಾವಿರಾರು ಉದಾಹರಣೆ ಕೊಡಬಲ್ಲೆ. 2015ರಲ್ಲಿ ಸಿದ್ದರಾಮಯ್ಯ ಅವರು ಏನೇನು ಮಾಡಿದ್ದಾರೆ ಎಂಬುದು ಸಮಯ ಬಂದಾಗ ಬಿಚ್ಚಿಡುವೆ.ಈಗ ಹೇಳಿದ್ರೆ ಆ ಎಲ್ಲ ದಾಖಲೆಗಳನ್ನು ತಿದ್ದುತ್ತಾರೆ” ಎಂದರು.

“ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಯಾಕೆ ಎಳೆದು ತರುತ್ತಾರೆ? ಕಾಂಗ್ರೆಸ್‌ಗೆ ನನ್ನ ಭಯ ಬಿಟ್ಟರೆ ಯಾರ ಭಯವೂ ಇಲ್ಲ. ನನ್ನ ಬಳಿ ಲಾರಿಯಷ್ಟು ದಾಖಲೆ ಇದೆ. ನನ್ನ ಕೆಣಕಿದರೆ ಅವುಗಳನ್ನು ಬಿಡುಗಡೆ ಮಾಡುವೆ” ಎಂದು ಎಚ್ಚರಿಸಿದರು.

Tags: CM Siddaramaiah‌JDSmuda land scamUnion minister HD Kumaraswamyಬಿಜೆಪಿ
Previous Post

ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಒತ್ತಾಯಿಸಿ ನಾಳೆ ಬಿಜೆಪಿ ರಾಜ್ಯಾದ್ಯಂತ ಹೋರಾಟ

Next Post

ಅರೆಸ್ಟ್ ಮಾಡೋಕೆ ನೂರು ಜನ ಸಿದ್ದರಾಮಯ್ಯ ಹುಟ್ಟಿ ಬರ್ಬೇಕು ಕುಮಾರಸ್ವಾಮಿ..!

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
Next Post

ಅರೆಸ್ಟ್ ಮಾಡೋಕೆ ನೂರು ಜನ ಸಿದ್ದರಾಮಯ್ಯ ಹುಟ್ಟಿ ಬರ್ಬೇಕು ಕುಮಾರಸ್ವಾಮಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada